City Rounds News

Kannada News Website

 ಲಂಚ ಪಡೆಯುವಾಗ ಕೆ ಟಿ ಜೆ ನಗರ ಪೊಲೀಸ್ ಠಾಣೆಯ ಎ ಎಸ್ ಐ ಈರಣ್ಣ ಲೋಕಾಯುಕ್ತ ಬಲೆಗೆ..!

ಶಿವಮೊಗ್ಗ : ಸಿಟಿ ರೌಂಡ್ಸ್ ನ್ಯೂಸ್
ಅಣ್ಣಪ್ಪ ಎಂ.

ದಾವಣಗೆರೆ: ಗಲಾಟೆಯ ವಿಚಾರವಾಗಿ ಮಣಿಕಂಠ ಆಚಾರ್ಯ ರವರ ತಾಯಿಯಾಗು ಹೆಂಡತಿ ವಿರುದ್ಧ ಕೆ ಟಿ ಜೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು,ದೂರಿನ ಪ್ರಕರಣದ ದೋಷಾರೋಪ ಪಟ್ಟಿಯಿಂದ ತಾಯಿ ಭಾಗ್ಯಮ್ಮ ಹಾಗೂ ಪತ್ನಿ ಅರ್ಚನಾ ರವರ ಹೆಸರನ್ನು ತೆಗೆದುಹಾಕಲು 1 ಲಕ್ಷ ಲಂಚ ನೀಡುವಂತೆ ಬೇಡಿಕೆ ಇಟ್ಟಿದ್ದ ಎ ಎಸ್ ಐ. ಈರಣ್ಣ,ಈ

ವಿಚಾರವಾಗಿ ದೂರುದಾರರಾದ ಮಣಿಕಂಠ ಆಚಾರ್ಯರವರು ದಾವಣಗೆರೆ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಮಣಿಕಂಠ ಆಚಾರ್ಯರಿಂದ ಪ್ರಕರಣದ ವಿಚಾರವಾಗಿ ಒಂದು ಲಕ್ಷದ ಹಣದ ಮೊದಲನೇ ಕಂತು 50,000 ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ಎ ಎಸ್ ಐ ಈರಣ್ಣ. ಈ ಕಾರ್ಯಚರಣೆಯಲ್ಲಿ ಲೋಕಾಯುಕ್ತ ಪೊಲೀಸ್ ಇನ್ಸ್ಪೆಕ್ಟರ್ ಸಿ ಮಧುಸೂಧನ್, ಪ್ರಭು ಬಸುರಿನ ಹಾಗೂ ಪಿ ಸರಳ ನೇತೃತ್ವ ವಹಿಸಿದ್ದರು.