City Rounds News

Kannada News Website

ಕುವೆಂಪು ರಂಗಮಂದಿರದಲ್ಲಿ ನಡೆದ ಮೌಂಟೆನ್ ಇನ್ನೋವೇಟಿವ್ ಶಾಲೆಯ ವಾರ್ಷಿಕೋತ್ಸವದ ಕಾರ್ಯಕ್ರಮ..!!

ಶಿವಮೊಗ್ಗ: ಸಿಟಿ ರೌಂಡ್ಸ್ ನ್ಯೂಸ್
ಅಣ್ಣಪ್ಪ ಎಂ. ಸಂಪಾದಕರು ಪ್ರಕಾಶಕರು

29-11-2024  ರಂದು ಕುವೆಂಪು ರಂಗಮಂದಿರದಲ್ಲಿ ಮೌಂಟೆನ್ ಇನ್ನೋವೇಟಿವ್ ಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮ ಏರ್ಪಡಿಸಲಾಗಿತ್ತು .ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಾಲಾ ವಾರ್ಷಿಕೋತ್ಸವದ ಮುಖ್ಯ ಅತಿಥಿಗಳಾದಂತ ಡಾಕ್ಟರ್ ಹರಿಪ್ರಸಾದ ರವರು ಶಾಲಾ ಮಕ್ಕಳನ್ನು ಉದ್ದೇಶಿಸಿ, ಮಕ್ಕಳಿಗೆ ಐದು ಅಂಶಗಳು ಮುಖ್ಯವಾದವು ಅವು ಯಾವುದೆಂದರೆ ಆಹಾರ, ಆಟ, ಪಾಠಗಳು ,ಹಾಗೆ ಕಲಿಕಾ ವ್ಯವಸ್ಥೆ, ಮತ್ತು ಪೋಷಕರ ಪಾತ್ರ ಮತ್ತು ಶಿಕ್ಷಕರ ಪಾತ್ರ ಬಹಳ ಮುಖ್ಯವಾಗಿರುತ್ತದೆ. ಮಕ್ಕಳು ಇಂದಿನ ವ್ಯವಸ್ಥೆಯಲ್ಲಿ ಮೊಬೈಲ್ ಮತ್ತು ಟಿವಿಗೆ ಹೆಚ್ಚು ಸಮಯವನ್ನು ವ್ಯರ್ಥ ಮಾಡುತ್ತಿದ್ದಾರೆ ಆದ್ದರಿಂದ ಮಕ್ಕಳು ಪುಸ್ತಕಗಳ ಕಲಿಕೆಗೆ ಹೆಚ್ಚಿನ ಆದ್ಯತೆ ಕೊಡಬೇಕು ಎಂದು ಉಪನ್ಯಾಸದಲ್ಲಿ ಮಾತನಾಡುತ್ತಾ ಪೋಷಕರಿಗೆ ಕೆಲವು ಕಿವಿ ಮಾತುಗಳನ್ನು ಮನ ಮುಟ್ಟುವಂತೆ ಮಾತನಾಡಿ ಹಾಗೆ ಶಾಲೆ ಅಭಿವೃದ್ಧಿಯ ಬಗ್ಗೆ ಕೊಂಡಾಡಿದರು.

ಶಾಲಾ ಕಾರ್ಯದರ್ಶಿಗಳಾದ ಶಿಲ್ಪ ರವರು ಕಾರ್ಯಕ್ರಮವನ್ನು ಉದ್ದೇಶಿಸಿ, ಶಿಕ್ಷಕರ ಪಾತ್ರ ಬಹಳ ದೊಡ್ಡದು ಅದರಲ್ಲೂ ನೂತನವಾಗಿ ಆರಂಭಿಸಿದ ಹಿರಿಯ ಪ್ರಾಥಮಿಕ ಶಾಲೆಗೆ 30 ವರ್ಷಗಳ ಕಾಲ ಅನುಭವವುಳ್ಳ ಶಾಲಾ ಮುಖ್ಯೋಪಾಧ್ಯಾಯರಾದ ಕೆ .ರವಿಕುಮಾರ್ ರವರು ಮಕ್ಕಳ ಪ್ರಗತಿಗೆ ಹೆಚ್ಚು ಶ್ರಮವಹಿಸಿ ಕಾರ್ಯ ನಿರ್ವಹಿಸುತ್ತಿದ್ದಾರೆ ಅವರಿಗೆ ಅಭಿನಂದಿಸುತ್ತೇನೆ ಎಂದು ಹೇಳಿದರು.

ಶಾಲೆ ನಿರ್ದೇಶಕರಾದ ಶಿವಕುಮಾರ್ ಅವರು ವಂದನಾರ್ಪಣೆ ಮಾಡಿದರು.ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ, ಡಾ. ಹರಿಪ್ರಸಾದ್ ,ಹಿರಿಯ ಉಪನ್ಯಾಸಕರು ಶಿಕ್ಷಕರ ತರಬೇತಿ ಕೇಂದ್ರ. ಶಾಲಾ ನಿರ್ದೇಶಕರಾದ ಶಿವಕುಮಾರ್, ಶಾಲಾ ಕಾರ್ಯದರ್ಶಿಗಳಾದ ಶಿಲ್ಪ ಶಿವಕುಮಾರ್, ಪ್ರಾಂಶುಪಾಲರಾದ ಶಿಲ್ಪಾ ಅರವಿಂದ್, ಶಾಲಾ ಮುಖ್ಯೋಪಾಧ್ಯಾಯರಾದ ರವಿಕುಮಾರ್ .ಕೆ. ಮುಂತಾದವರು ಉಪಸ್ಥಿತರಿದ್ದರು.