City Rounds News

Kannada News Website

ಹಾಡ ಹಗಲೇ ರೌಡಿ ಶೀಟರ್ ರಾಜೇಶ್ ಶೆಟ್ಟಿ ಆಲಿಯಾಸ್ (ಕಪ್ಡ)ನ ಬರ್ಬರ ಹತ್ಯೆ…!!

ಶಿವಮೊಗ್ಗ : ಸಿಟಿ ರೌಂಡ್ಸ್ ನ್ಯೂಸ್
ಅಣ್ಣಪ್ಪ ಎಂ.

ಶಿವಮೊಗ್ಗ ನಗರದ 1ನೇ ವಾರ್ಡಿನ ಹಳೆ ಬೊಮ್ಮನಕಟ್ಟೆಯಲ್ಲಿ ಹಾಡಹಗಲೇ ಬೆಚ್ಚಿ ಬೀಳಿಸಿದ ರೌಡಿ ಶೀಟರ್ ರಾಜೇಶ್ ಶೆಟ್ಟಿ ಅಲಿಯಾಸ್ ಕಪ್ಡ ಹತ್ಯೆ…!

ದಿನಾಂಕ 30-11-2024 ಶನಿವಾರ ಮಧ್ಯಾಹ್ನ ಸುಮಾರು 2 ಗಂಟೆ ಆಸುಪಾಸಿನ ಸಮಯದಲ್ಲಿ ಹಳೆ ಬೊಮ್ಮನಕಟ್ಟೆ ಮುಖ್ಯ ರಸ್ತೆಯಲ್ಲಿರುವಂತ ಅರ್ಜುನ್ ಗ್ಯಾರೇಜ್ ಮುಂಭಾಗದಲ್ಲಿ ರಾಜೇಶ್ ಶೆಟ್ಟಿ ಅಲಿಯಾಸ್ ಕಪ್ಡ 41 ವರ್ಷ ವಯಸ್ಸಿನ (ರೌಡಿಶೀಟರ್) ಮೇಲೆ ಮುಸುಕುಧಾರಿಗಳಾದ 5- 6 ಯುವಕರಿದಂತ ಗುಂಪೊಂದು ರಾಜೇಶ್ ಕಪ್ಡ ಎಂಬ ರೌಡಿಶೀಟರ್ ಮೇಲೆ ಮಚ್ಚುಗಳಿಂದ ಮಾರಣಾಂತಿಕವಾಗಿ ಹಲ್ಲೇ ನಡೆಸಿರುವ ಘಟನೆ ಬೊಮ್ಮನಕಟ್ಟೆ ನಿವಾಸಿಗಳಲ್ಲಿ ಭಯದ ವಾತಾವರಣವನ್ನು ಸೃಷ್ಟಿಸಿದೆ.

ಹತ್ಯೆಯಾದ ರಾಜೇಶ್ ಶೆಟ್ಟಿ ಅಲಿಯಾಸ್ ಕಪ್ಡ ಕೆಲವು ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದು ಈತನ ಹತ್ಯೆ ಹಳೆ ದ್ವೇಷದ ಹಿನ್ನೆಲೆ ನಡೆದಿರಬಹುದೇ ಎಂದು ಶಂಕಿಸಲಾಗಿದೆ..? ಹತ್ಯೆ ನಡೆದ ಸ್ಥಳಕ್ಕೆ ವಿನೋಬನಗರ ಠಾಣೆಯ ಪೊಲೀಸರು ಭೇಟಿ ನೀಡಿ ಪ್ರಕರಣದ ಆರೋಪಿಗಳ ಬಂಧನಕ್ಕೆ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.ಹತ್ಯೆ ಪ್ರಕರಣದ ನಿಖರವಾದ ಮಾಹಿತಿ ತಿಳಿದು ಬಂದಿಲ್ಲ ಪೊಲೀಸರ ತನಿಖೆಯಿಂದ ಹತ್ಯೆಯ ಅಸಲಿ ಸ್ಟೋರಿ ಹೊರಬೀಳಲಿದೆ..!