ಶಿವಮೊಗ್ಗ : ಸಿಟಿ ರೌಂಡ್ಸ್ ನ್ಯೂಸ್
ಅಣ್ಣಪ್ಪ ಎಂ
ದಾವಣಗೆರೆ: ಸ್ವತ್ತಿನ ಎಲ್ಲಾ ದಾಖಲೆಗಳುಳ್ಳ ಖಾತೆ ಬದಲಾವಣೆ ಮಾಡಿಕೊಡಲು ಸ್ವತ್ತಿನ ಮಾಲೀಕನಿಂದ ಲಂಚ ಪಡೆಯುವಾಗ ದಾವಣಗೆರೆ ಮಹಾನಗರ ಪಾಲಿಕೆ ಪ್ರಥಮ ದರ್ಜೆ ಸಹಾಯಕ ಲೋಕಾಯುಕ್ತ ಬಲೆಗೆ ಬಿದ್ದಿದ್ದಾನೆ. ಸೈಟ್ ನ ಖಾತೆ ಬದಲಾವಣೆ ಮಾಡಿಕೊಡಲು 2,500 ರೂಪಾಯಿ ಲಂಚ ಪಡೆಯುತ್ತಿದ್ದ ಕಚೇರಿ-ದ್ವಿತೀಯ ವಲಯ, ಪ್ರಥಮ ದರ್ಜೆ ಸಹಾಯಕ ಏನ್ ಮಾಡಕ್ ಪಾಲನಾಯಕ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿಬಿದ್ದಾನೆ.
(ಮಾ.14) ಲೋಕಾಯುಕ್ತ ಪೊಲೀಸರು ದೂರು ದಾರನ ದೂರಿನ ಆಧಾರದ ಮೇಲೆ ದಾಳಿ ಮಾಡಿ ಬಂಧಿಸಿದ್ದಾರೆ. ದಾವಣಗೆರೆ ಮಹಾನಗರ ಪಾಲಿಕೆಯ 30ನೇ ವಾರ್ಡ್‌ನ ಮೋತಿ ನಗರದಲ್ಲಿನ ಖಾಲಿ ನಿವೇಶನವನ್ನ ದೂರುದಾರನ ಸಹೋದರಿ ಜಿ.ಯು. ಕಾವ್ಯ ಅವರಿಗೆ ಖಾತೆ ಬದಲಾವಣೆಗೆ ಜಿ.ಯು. ಬಸವನಗೌಡ ಎಂಬುವರು ಮಹಾನಗರ ಪಾಲಿಕೆ ವಲಯ ಕಚೇರಿ-2ರಲ್ಲಿ ಅರ್ಜಿ ಸಲ್ಲಿಸಿದ್ದರು. ನೌಕರನು ಕಚೇರಿಯಲ್ಲೇ 2,500 ರೂಪಾಯಿ ಲಂಚ ಪಡೆಯುತ್ತಿದ್ದಾಗ ಭ್ರಷ್ಟ ನೌಕರರನ್ನು, ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ. ಜಿಲ್ಲಾ ಲೋಕಾಯುಕ್ತ ಅಧೀಕ್ಷಕ ಎಂ.ಎಸ್. ಕೌಲಾಪುರೆ ಮಾರ್ಗದರ್ಶನದಲ್ಲಿ ಪೊಲೀಸ್ ನಿರೀಕ್ಷಕರಾದ ಪ್ರಭು ಬಿ. ಸೂರಿನ, ಮುಸ್ತಾಕ್ ಅಹಮ್ಮದ್ ಮತ್ತು ಸಿಬ್ಬಂದಿ ದಾಳಿಯಲ್ಲಿ ಭಾಗವಹಿಸಿದ್ದರು ಎಂದು ತಿಳಿಸಿದ್ದಾರೆ.

More Stories
ಲಂಚ ಪಡೆಯುವಾಗ ಕೆ ಟಿ ಜೆ ನಗರ ಪೊಲೀಸ್ ಠಾಣೆಯ ಎ ಎಸ್ ಐ ಈರಣ್ಣ ಲೋಕಾಯುಕ್ತ ಬಲೆಗೆ..!
ಜಿಲ್ಲಾ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ಸಹಾಯಕ ನಿರ್ದೇಶಕ ಕಮಲ್ ರಾಜ್ ಲೋಕಾಯುಕ್ತ ಬಲೆಗೆ