City Rounds News

Kannada News Website

ಶಿವಮೊಗ್ಗ  ನಗರ  ಹಾಗೂ ತಾಲ್ಲೂಕು ಎಲ್ಲಾ ಠಾಣೆಯ  ಪೊಲೀಸರಿಂದ ಬ್ರೀಫಿಂಗ್ 

ಶಿವಮೊಗ್ಗ: ಸಿಟಿ ರೌಂಡ್ಸ್ ನ್ಯೂಸ್
ಅಣ್ಣಪ್ಪ ಎಂ.

ದಿನಾಂಕಃ 17-11-2024 ರಂದು ಈ ದಿನ ಶಿವಮೊಗ್ಗ ನಗರದ ಮಿಳ್ಳಘಟ್ಟ, ವಿನೋಬನಗರದ ಶಿವಾಲಯ, ತುಂಗಾನಗರ, ಅಶೋಕ ರಸ್ತೆ, ಕೆಇಬಿ ವೃತ್ತ, ಆಯನೂರು, ರಾಗಿಗುಡ್ಡ, (1)ಭದ್ರಾವತಿಯ ಫಿಲ್ಟರ್ ಶೆಡ್, ನೆಹರು ನಗರ, ಕಾಗದನಗರ, ಹನುಮಂತನಗರ, ಸಿರಿಯೂರು, ಹೊಳೆಹೊನ್ನೂರಿನ ಗಾಂಧಿವೃತ್ತ, (2) ತೀರ್ಥಹಳ್ಳಿಯ ನ್ಯಾಯಾಲಯಗಳ ಸಂಕೀರ್ಣ, ಬೆಜ್ಜುವಳ್ಳಿ, ಆಗುಂಬೆ ಬಸ್ ಸ್ಟ್ಯಾಂಡ್, (3)ಹೊಸನಗರ, ನಗರದ ಚಿಕ್ಕಪೇಟೆ, ರಿಪ್ಪನ್ ಪೇಟೆ,

(4) ಸಾಗರದ ವಿನೋಬನಗರ ಜೋಗ್ ಫಾಲ್ಸ್ ಏರಿಯಾ, (5) ಆನಂದಪುರದ ಬಸ್ ನಿಲ್ದಾಣ, (6)ಶಿಕಾರಿಪುರದ ಶಿಕಾರಿಪುರ ಟೌನ್, ಅಂಬರಗೊಪ್ಪ, ಶಿರಾಳಕೊಪ್ಪದ ಆನವಟ್ಟಿ ವೃತ್ತ, (7) ಸೊರಬ ಟೌನ್ ಮತ್ತು ಆನವಟ್ಟಿ ಟೌನ್ ನಲ್ಲಿ ಶಿವಮೊಗ್ಗ ಎ, ಶಿವಮೊಗ್ಗ ಬಿ, ಭದ್ರಾವತಿ, ಸಾಗರ, ಶಿಕಾರಿಪುರ ಹಾಗೂ ತೀರ್ಥಹಳ್ಳಿ ಉಪ ವಿಭಾಗದ ಪೊಲೀಸ್ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಆಯಾ ಠಾಣೆಗಳ ಠಾಣಾಧಿಕಾರಿಗಳು ಬ್ರೀಫಿಂಗ್ ಮಾಡಿ ನಿರ್ವಹಿಸಬೇಕಾದ ಕರ್ತವ್ಯ ಹಾಗೂ ಮೇಲಾಧಿಕಾರಿಗಳ ಸೂಚನೆಗಳ ಬಗ್ಗೆ ತಿಳಿಸಿರುತ್ತಾರೆ.

ಈ ಸಂದರ್ಭದಲ್ಲಿ ಸಂಬಂದಪಟ್ಟ ಪೊಲೀಸ್ ನಿರೀಕ್ಷಕರು / ವೃತ್ತ ನಿರೀಕ್ಷಕರುಗಳು ಉಪಸ್ಥಿತರಿದ್ದರು ಹಾಗೂ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳ ಕುಂದುಕೊರತೆಯನ್ನು ಆಲಿಸಲಾಗಿರುತ್ತದೆ.