City Rounds News

Kannada News Website

ನಿವೃತ್ತ ಶಿಕ್ಷಕನ ಪಿಂಚಣಿ ಹಣ ಬಿಡುಗಡೆಗೆ  ಲಂಚದ ಬೇಡಿಕೆ ಇಟ್ಟ  ಎರಡು  ಮಿಕಗಳು ಲೋಕಾಯುಕ್ತರ ಬಲೆಗೆ

ಶಿವಮೊಗ್ಗ ಸಿಟಿ ರೌಂಡ್ಸ್ ನ್ಯೂಸ್
ಅಣ್ಣಪ್ಪ ಎಂ.

ಉಡುಪಿ: ಉಡುಪಿ ಜಿಲ್ಲೆಯ ಉಡುಪಿ ಖಜಾನೆಯ ಉಪ ನಿರ್ದೇಶಕ ಹಾಗೂ ಸಹಾಯಕನನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.

ನಿವೃತ್ತ ಶಿಕ್ಷಕ ಹಿತೇಂದ್ರ ಭಂಡಾರಿ ಎಂಬುವರು ತಮ್ಮ ಪಿಂಚಿಣಿ ಹಣವನ್ನು ಪಡೆಯಲು ಕಳೆದ ಐದು ತಿಂಗಳಿನಿಂದ ಅಲೆದಾಡಿದರು ಉಡುಪಿ ಖಜಾನೆಯ ಉಪ ನಿರ್ದೇಶಕ ರವಿಕುಮಾರ್ ಮತ್ತು ಸಹಾಯಕ ರಾಘವೇಂದ್ರ ಪಿಂಚಣಿ ನೀಡಲು 5,000 ಲಂಚ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ ಎಂದು ನಿವೃತ್ತ ಶಿಕ್ಷಕ ಹಿತೇಂದ್ರ ಭಂಡಾರಿ ಎಂಬುವರು ಲೋಕಾಯುಕ್ತ ಪೊಲೀಸರಿಗೆ ದೂರಿ ನೀಡಿದ್ದರು.

ನಿವೃತ್ತ ಶಿಕ್ಷಕ ಹಿತೇಂದ್ರ ಭಂಡಾರಿಯವರ ದೂರಿನ ಮೇರೆಗೆ ಪ್ರಕರಣವನ್ನು ಕೈಗೆತ್ತಿಕೊಂಡಂತಹ ಉಡುಪಿ ಪ್ರಭಾರ ಲೋಕಾಯುಕ್ತ ಡಿ ವೈ ಎಸ್ ಪಿ ಮಂಜುನಾಥ್ ಹಾಗೂ ಮಂಗಳೂರು ಲೋಕಾಯುಕ್ತ ನಿರೀಕ್ಷಕರಾದ ಸುರೇಶ್ ಹಾಗೂ ಕೆ ಎನ್. ಚಂದ್ರಶೇಖರ್ ರವರನ್ನೊಳಗೊಂಡಂತಹ ತಂಡವು ಕಾರ್ಯಾಚರಣೆ ನಡೆಸಿ. ಭ್ರಷ್ಟ ಅಧಿಕಾರಿಗಳಾದ ರವಿಕುಮಾರ್ ಮತ್ತು ರಾಘವೇಂದ್ರ  ನಿವೃತ್ತ ಶಿಕ್ಷಕ  ಹಿತೇಂದ್ರ ಭಂಡಾರಿಯವರಿಂದ. 5000.ರೂ ಲಂಚ ಸ್ವೀಕರಿಸುವಂತ ಸಮಯದಲ್ಲಿ ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದುಕೊಂಡಿರುತ್ತಾರೆ.

ಈ ಕಾರ್ಯಾಚರಣೆಯಲ್ಲಿ ಲೋಕಾಯುಕ್ತ ಸಿಬ್ಬಂದಿಗಳಾದ ರಾಘವೇಂದ್ರ, ರಮೇಶ್, ಸೂರಜ್, ಸುಧೀರ್, ನಾಗರ ಸತೀಶ್, ಪ್ರಸನ್ನ, ಮಲ್ಲಿಕಾ, ಪುಷ್ಪಲತಾ ಭಾಗವಹಿಸಿದ್ದರು ಎಂದು ತಿಳಿದು ಬಂದಿದೆ.