City Rounds News

Kannada News Website

4 ಕ್ವಿಂಟಾಲ್ ಅಡಿಕೆ ಕಳ್ಳತನ, ಸಿಕ್ಕಿಬಿದ್ದ 5 ಜನ ಕಳ್ಳರು

ಶಿವಮೊಗ್ಗ : ಸಿಟಿ ರೌಂಡ್ಸ್ ನ್ಯೂಸ್
ಅಣ್ಣಪ್ಪ ಎಂ.

 

ಶಿವಮೊಗ್ಗ ಜಿಲ್ಲೆಯ ಹಾಡೋನಹಳ್ಳಿ ಗ್ರಾಮದ ನಿವಾಸಿ ಗಂಗಾಧರ್ ಕಡೆ ಮನೆ,ಎಂಬುವರು ತಮ್ಮ ಮನೆಯ ಮುಂದಿನ ಗೋಡೌನ್ ನಲ್ಲಿ ಒಣ ಅಡಿಕೆಯನ್ನು ಶೇಖರಿಸಿ ಇಟ್ಟಿದ್ದು, ದಿನಾಂಕಃ 05-11-2024 ರಂದು ರಾತ್ರಿ ಯಾರೋ ಕಳ್ಳರು ಅಂದಾಜು ಮೌಲ್ಯ 1,50,000/- ರೂಗಳ 04 ಕ್ವಿಂಟಾಲ್ ತೂಕದ ಒಣ ಅಡಿಕೆಯನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆ ಗುನ್ನೆ ಸಂಖ್ಯೆ 0315/2024 ಕಲಂ 303(2) BNS ಕಾಯ್ದೆ ರೀತ್ಯಾ ಪ್ರಕರಣ ದಾಖಲಿಸಿಕೊಳ್ಳಲಾಗಿರುತ್ತದೆ.

 

ಸದರಿ ಪ್ರಕರಣದಲ್ಲಿ ಕಳುವಾದ ಮಾಲು ಹಾಗೂ ಆರೋಪಿತರ ಪತ್ತೆಗಾಗಿ ಜಿಲ್ಲಾ ಪೊಲೀಸ್ ಅಧೀಕ್ಷಕರು ಮಿಥುನ್ ಕುಮಾರ್ ಜಿ.ಕೆ ಐಪಿಎಸ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಅನಿಲ್ ಕುಮಾರ್ ಭೂಮ್ ರಡ್ಡಿ ಮತ್ತು ಕಾರಿಯಪ್ಪ ಎ, ಜಿ. ಮಾರ್ಗದರ್ಶನದಲ್ಲಿ, ಸುರೇಶ್ ಎಂ,ಡಿ.ವೈ.ಎಸ್.ಪಿ ರವರ ಮೇಲ್ವಿಚಾರಣೆಯಲ್ಲಿ, ಸತ್ಯನಾರಾಯಣ ಪಿ.ಐ,ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆ ರವರ ನೇತೃತ್ವದ, ಸ್ವಪ್ನ, ಪಿಎಸ್ಐ, ಎಂ ಜಿ ವಗ್ಗಣ್ಣನವರ್, ಪಿಎಸ್ಐ ಹಾಗೂ ಸಿಬ್ಬಂಧಿಗಳಾದ ಹೆಚ್. ಸಿ ವೆಂಕಟೇಶ್, ಪಿಸಿ ಗಣೇಶ್, ಕಾಶಿನಾಥ್, ಶ್ರೀಕಾಂತ್ ಮತ್ತು ಕವನರವರುಗಳನ್ನು ಒಳಗೊಂಡ ತನಿಖಾ ತಂಡವನ್ನು ರಚಿಸಲಾಗಿರುತ್ತದೆ.

 

ಸದರಿ ತನಿಖಾ ತಂಡವು ದಿನಾಂಕ: 16-11-2024 ರಂದು ಪ್ರರಕಣದ ಆರೋಪಿಗಳಾದ (1)ಅನಿಲ್ ಆರ್ @ ಜಾಕ್, 26 ವರ್ಷ, ಬೊಮ್ಮನಕಟ್ಟೆ, ಶಿವಮೊಗ್ಗ, (2) ಲೋಕೇಶ್ @ ವಿಜಯ್, 27 ವರ್ಷ, ವಿಠಲಾಪುರ ಭದ್ರಾವತಿ, (3) ಮನೋಜ @ ಮುರಗೋಡು @ ಗರುಡ, 20 ವರ್ಷ, ಬಸವನಗುಡಿ ಶಿವಮೊಗ್ಗ, (4) ನವೀನ್ ಪಿ @ ನುಗ್ಗೆ, 23 ವರ್ಷ, ಹಾಡೋನಹಳ್ಳಿ ಶಿವಮೊಗ್ಗ ಮತ್ತು (5) ಚಂದು ಎಸ್ @ ಸುಣ್ಣ @ ಡ್ಯೂಕ್ ಚಂದು, 20 ವರ್ಷ, ಮಡಿಕೆ ಚೀಲೂರು ಶಿವಮೊಗ್ಗ ರವರುಗಳನ್ನು ದಸ್ತಗಿರಿ ಮಾಡಿ, ಸದರಿ ಆರೋಪಿತರಿಂದ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ 2024ನೇ ಸಾಲಿನಲ್ಲಿ ವರದಿಯಾಗಿದ್ದ ಒಟ್ಟು 03 ಅಡಿಕೆ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದ, ಅಂದಾಜು ಮೌಲ್ಯ 7,35,000/- ರೂಗಳ, 15 ಕ್ವಿಂಟಾಲ್ 08 ಕೆಜಿ ತೂಕದ ಒಣ ಅಡಿಕೆ ಮತ್ತು ಕೃತ್ಯಕ್ಕೆ ಉಪಯೋಗಿಸಿದ ಅಂದಾಜು ಮೌಲ್ಯ 1,40,000 /- ರೂಗಳ 2 ದ್ವಿಚಕ್ರವಾಹನಗಳು ಹಾಗೂ ಅಂದಾಜು ಮೌಲ್ಯ 1,50,000/- ರೂಗಳ 1 ಪ್ಯಾಸೇಜರ್ ಆಟೋ ಸೇರಿ ಒಟ್ಟು 10,25,000/- ರೂಗಳ ಮಾಲನ್ನು ಅಮಾನತ್ತು ಪಡಿಸಿ ಕೊಳ್ಳಲಾಗಿರುತ್ತದೆ ಎಂದು ತಿಳಿಸಿದ್ದಾರೆ.  ಸದರಿ ತನಿಖಾ ತಂಡದ ಉತ್ತಮವಾದ ಕಾರ್ಯವನ್ನು ಪೊಲೀಸ್ ಅಧೀಕ್ಷಕರಾದ ಮಿಥುನ್ ಕುಮಾರ್ ಜಿ ಕೆ.ರವರು ಪ್ರಶಂಸಿಸಿ ಅಭಿನಂದಿಸಿರುತ್ತಾರೆ.