ಶಿವಮೊಗ್ಗ ಜಿಲ್ಲಾ ಪೊಲೀಸ್ ವತಿಯಿಂದ ಜಿಲ್ಲಾಧ್ಯಂತ ವಾಹನ ವಿಮೆ ಅವಧಿ ಮುಗಿದ ವಾಹನಗಳ ತಪಾಸಣೆ..!

ಶಿವಮೊಗ್ಗ  :  ಸಿಟಿ ರೌಂಡ್ಸ್ ನ್ಯೂಸ್ 
ಅಣ್ಣಪ್ಪ ಎಂ.

ಸಾರ್ವಜನಿಕರ ಹಿತದೃಷ್ಟಿಯಿಂದ   ಮಿಥುನ್ ಕುಮಾರ್ ಜಿ. ಕೆ, ಐಪಿಎಸ್, ಮಾನ್ಯ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ, ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ ಅನಿಲ್ ಕುಮಾರ್ ಭೂಮರಡ್ಡಿ, ಎ ಜಿ ಕಾರಿಯಪ್ಪ ರವರ ನೇತೃತ್ವದಲ್ಲಿ ಆಯಾ ಪೊಲೀಸ್ ಉಪಾಧೀಕ್ಷಕರುಗಳ ಮೇಲ್ವಿಚಾರಣೆಯಲ್ಲಿ, ಸಂಬಂಧಪಟ್ಟ ಪೊಲೀಸ್ ವೃತ್ತ ನಿರೀಕ್ಷಕರು, ಪೊಲೀಸ್ ನಿರೀಕ್ಷಕರು ಹಾಗು ಪೊಲೀಸ್ ನಿರೀಕ್ಷಕರುಗಳ ತಂಡವು ದಿನಾಂಕಃ 13-11-2024 ಮತ್ತು ದಿನಾಂಕಃ 14-11-2024 ರಂದು 02 ದಿನಗಳ ಕಾಲ ಶಿವಮೊಗ್ಗ ಜಿಲ್ಲೆಯಾದ್ಯಂತ ವಾಹನ ವಿಮೆ ಮಾಡಿಸದ ವಾಹನಗಳ ವಿರುದ್ಧ ವಿಶೇಷ ಕಾರ್ಯಾಚರಣೆ ಕೈಗೊಂಡು, ವಾಹನಗಳ

ದಾಖಲಾತಿ ಪರಿಶೀಲಿಸಿ ವಿಮಾ ಅವಧಿ ಮುಕ್ತಾಯವಾಗಿ ನವೀಕರಿಸದೇ ಇದ್ದ 199 (19 Four Wheeler, 31 Three Wheeler, 149 Two Wheeler) ವಾಹನಗಳನ್ನು ವಶಕ್ಕೆ ಪಡೆದು, ವಾಹನ ಚಾಲಕ / ಮಾಲೀಕರಿಗೆ ವಾಹನದ ವಿಮೇ ಮಾಡಿಸದೇ ಇದ್ದರೆ ಆಗುವ  ತೊಂದರೆ ಮತ್ತು ವಿಮೇ ಮಾಡಿಸುವುದರಿಂದ ಆಗುವ ಪ್ರಯೋಜನಗಳ ಕುರಿತು ಅರಿವು ಮೂಡಿಸಿದ್ದು ನಂತರ ವಾಹನಗಳ ವಿಮೆಯನ್ನು ನವೀಕರಿಸಿ, ದಾಖಲಾತಿ ಹಾಜರು  ಪಡಿಸಿದ 160 (17 Four Wheeler, 14 Three Wheeler, 129 Two Wheeler) ವಾಹನಗಳನ್ನು ಬಿಡುಗಡೆ ಮಾಡಲಾಗಿರುತ್ತದೆ ಮತ್ತು ಐ.ಎಂ.ವಿ ಕಾಯ್ದೆಯಡಿ 79 ಪ್ರಕರಣಗಳನ್ನು ದಾಖಲಿಸಿರುತ್ತಾರೆ.

 

 

You may have missed