ಶಿವಮೊಗ್ಗ :ಸಿಟಿ ರೌಂಡ್ಸ್ ನ್ಯೂಸ್
ಅಣ್ಣಪ್ಪ ಎಂ.
ದಿನಾಂಕಃ 27-09-2024 ರಂದು ಎಲ್.ಎಸ್ ಆನಂದ್, 72 ವರ್ಷ, ಗೋಪಾಳ, ಶಿವಮೊಗ್ಗ ರವರಿಗೆ, ಅಪರಿಚಿತ ವ್ಯಕ್ತಿಯು ಸಿ.ಬಿ.ಐ ಅಧಿಕಾರಿ ಎಂದು ಹೇಳಿ ವಿಡಿಯೋ ಕಾಲ್ ಮಾಡಿ ನಿಮ್ಮ ಆದಾರ್ ಕಾರ್ಡ್ ಸಂಖ್ಯೆಯಲ್ಲಿ ದೊಡ್ಡ ಮಟ್ಟದ ಹಣವು ಅಕ್ರಮವಾಗಿ ವರ್ಗಾವಣೆಯಾಗಿದ್ದರಿಂದ ನಿಮ್ಮ ಮೇಲೆ ದೂರು ದಾಖಲಾಗಿದ್ದು ನಿಮ್ಮನ್ನು ಅರೆಸ್ಟ್ ಮಾಡಲು ವಾರೆಂಟ್ ಜಾರಿ ಆಗಿ ನಿಮ್ಮ ಎಲ್ಲಾ ಬ್ಯಾಂಕ್ ಖಾತೆಗಳನ್ನು ಫ್ರೀಜ್ ಮಾಡಿದ್ದು ನೀವು ಇದರಿಂದ ಹೊರ ಬರಬೇಕಾದರೇ ನಾವು ಹೇಳಿದ ಖಾತೆಗೆ ಹಣ ವರ್ಗಾವಣೆ ಮಾಡಬೇಕೆಂದು ತಿಳಿಸಿ ಪಿರ್ಯಾದಿಯವರಿಂದ ಒಟ್ಟು 41 ಲಕ್ಷ ರೂ ಗಳನ್ನು ವರ್ಗಾವಣೆ ಮಾಡಿಸಿಕೊಂಡು ವಂಚಿಸಿದ್ದು, ಈ ಬಗ್ಗೆ ಶಿವಮೊಗ್ಗ ಸಿಇಎನ್ ಪೊಲೀಸ್ ಠಾಣೆ ಗುನ್ನೆ ಸಂಖ್ಯೆ: 0111/24 ಕಲಂ 66(ಡಿ) ಐಟಿ ಆಕ್ಟ್ & 111,318(4), 319(2) ಬಿ.ಎನ್.ಎಸ್ ರೀತ್ಯಾ ಪ್ರಕರಣ ದಾಖಲಾಗಿರುತ್ತದೆ.
ಸದರಿ ಪ್ರಕರಣದಲ್ಲಿ ಆರೋಪಿತರ ಪತ್ತೆಗಾಗಿ ಮಿಥುನ್ ಕುಮಾರ್ ಜಿ.ಕೆ ಐಪಿಎಸ್, ಮಾನ್ಯ ಜಿಲ್ಲಾ ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಅನಿಲ್ ಕುಮಾರ್ ಭೂಮ್ ರಡ್ಡಿ ಮತ್ತು ಕಾರಿಯಪ್ಪ ಎ, ಜಿ, ರವರ ಮಾರ್ಗದರ್ಶನದಲ್ಲಿ, ಶಿವಮೊಗ್ಗ ಸಿ.ಇ.ಎನ್ ಕ್ರೈಂ ಪೊಲೀಸ್ ಠಾಣೆ ಡಿ.ವೈ.ಎಸ್ಪಿಕೃಷ್ಣಮೂರ್ತಿ ಕೆ. ಇವರು ಮೇಲ್ವಿಚಾರಣೆಯಲ್ಲಿ, ಮಂಜುನಾಥ ಪಿ.ಐ ರವರ ನೇತೃತ್ವದ ಶೇಖರ ಎ.ಎಸ್.ಐ ಮತ್ತು ಸಿಬ್ಬಂದಿಗಳಾದ ಆರ್ ವಿಜಯ್ ಹೆಚ್.ಸಿ, ರವಿ ಬಿ ಸಿಪಿಸಿ ಮತ್ತು ಶರತ್ ಕುಮಾರ್ ಬಿ.ಎಸ್ ಸಿಪಿಸಿ ರವರುಗಳನ್ನು ಒಳಗೊಂಡ ತನಿಖಾ ತಂಡವನ್ನು ರಚಿಸಲಾಗಿರುತ್ತದೆ.
ಸದರಿ ತನಿಖಾ ತಂಡವು ದಿನಾಂಕ: 12-11-2024 ರಂದು ಪ್ರರಕರಣದ ಆರೋಪಿಗಳಾದ
ಮೊಹಮ್ಮದ್ ಅಹಮದ್, 45 ವರ್ಷ, ವಲಿದಪುರ ನಗರ, ಜಿ.ಎನ್ ಪುರ ಮಾರ್ಗ, ಮೌನಾತ್ಬಂಜನ್ ಜಿಲ್ಲೆ, ಉತ್ತರ ಪ್ರದೇಶ ಮತ್ತು
ಅಭಿಶೇಕ್ ಕುಮಾರ್ ಶೇಟ್, 27 ವರ್ಷ, ಮೊಹುಡಿಯಾ ಗ್ರಾಮ, ಅಜಂಗಡ ಜಿಲ್ಲೆ, ಉತ್ತರ ಪ್ರದೇಶ ಇವರನ್ನು ದಸ್ತಗಿರಿ ಮಾಡಿ ಆರೋಪಿತರಿಂದ ಒಟ್ಟು 23,89,751/- ರೂ ಹಣವನ್ನು ಅಮಾನತ್ತು ಪಡಿಸಿಕೊಂಡಿರುತ್ತಾರೆ.
ಸದರಿ ತನಿಖಾ ತಂಡದ ಉತ್ತಮವಾದ ಕಾರ್ಯವನ್ನು ಶಿವಮೊಗ್ಗ ಜಿಲ್ಲಾ ಪೊಲೀಸ್ ಅಧೀಕ್ಷಕರಾದಂತಹ ಮಿಥುನ್ ಕುಮಾರ್ ಜಿ ಕೆ. ರವರು ಪ್ರಶಂಸಿಸಿ ಅಭಿನಂದಿಸಿದ್ದಾರೆ.

More Stories
ಜೈಲಿನ ಖೈದಿಗಳ ಬಳಿ ವರ್ಷದಿಂದ ವರ್ಷಕ್ಕೆ ಮೊಬೈಲ್ಗಳ ಸಂಖ್ಯೆಯಲ್ಲಿ ಹೆಚ್ಚಳ : 410 ವಿವಿಧ ಕಂಪನಿಯ ಮೊಬೈಲ್ ಪತ್ತೆ..!!
ಕಸ್ತೂರಿ ರಂಗನ್ ವರದಿ ಕುರಿತು ತೀರ್ಥಹಳ್ಳಿಯಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕೊಟ್ಟ ಸೂಚನೆಯಾದರೂ ಏನು ..?
ಸಂಗ್ರ ಹ ಮಾಡಲಾಗಿರುವ ಅಕ್ರಮ ಮರಳನ್ನು ತ್ವರಿತವಾಗಿ ವಿಲೇಮಾಡಿ : ಪ್ರಭುಲಿಂಗ ಕವಳಿಕಟ್ಟಿ