ಶಿವಮೊಗ್ಗ: ಸಿಟಿ ರೌಂಡ್ಸ್ ನ್ಯೂಸ್
ಅಣ್ಣಪ್ಪ ಎಂ.
ಶಿವಮೊಗ್ಗ ತಹಶೀಲ್ದಾರ್ ಗಿರೀಶ್ ಒಬ್ಬ ಉತ್ತಮ ಆಡಳಿತ ಅಧಿಕಾರಿಯಾಗಿ ಶಿವಮೊಗ್ಗ ತಾಲೂಕು ಕಚೇರಿಯಲ್ಲಿ ಸೇವೆ ಸಲ್ಲಿಸುತ್ತಿದ್ದರು ಹಿಂದೆ ಮೈಸೂರಿನಿಂದ ವರ್ಗಾವಣೆಯಾಗಿ ಶಿವಮೊಗ್ಗಕ್ಕೆ ಬಂದಂತಹ ತಹಶೀಲ್ದಾರ್ ಗಿರೀಶ್ ರವರು ಸಾರ್ವಜನಿಕರ ಹಾಗೂ ಸರ್ಕಾರಿ ನೌಕರರನ್ನು ವಿಶ್ವಾಸದಿಂದ ಕಾಣುತ್ತಿದ್ದಂತಹ ಒಬ್ಬ ದಕ್ಷ ಆಡಳಿತಗಾರ ಎಂದರೆ ತಪ್ಪಾಗಲಾರದು. ಸರ್ಕಾರಿ ನೌಕರರ ಚುನಾವಣೆಯಲ್ಲಿ ಕಂದಾಯ ಇಲಾಖೆಯಿಂದ ಸ್ಪರ್ಧಿಆಗಿ ಭಾಗವಹಿಸಲು ಸಿದ್ಧರಾಗಿದ್ದರು.
ತಹಶೀಲ್ದಾರ್ ಗಿರೀಶ್ ರವರು ಸರ್ಕಾರಿ ನೌಕರರ ಜೊತೆ ಒಳ್ಳೆಯ ಬಾಂಧವ್ಯ ಪ್ರೀತಿ ವಿಶ್ವಾಸ ಹೊಂದಿದಂತ ವ್ಯಕ್ತಿಯಾಗಿದ್ದರು. ಸರ್ಕಾರಿ ನೌಕರರ ಚುನಾವಣೆಯಲ್ಲಿ ಗಿರೀಶ್ ರವರು ಬಹುಮತದಿಂದ ಗೆಲ್ಲುವ ನಿರೀಕ್ಷೆಯನ್ನು ಸರ್ಕಾರಿ ನೌಕರರು ವ್ಯಕ್ತಪಡಿಸಿದ್ದರು ಎಂದು ಹಲವರ ಅಭಿಪ್ರಾಯವಾಗಿತ್ತು.

ಆದರೆ ಚುನಾವಣೆಗೆ ಕೇವಲ ಎರಡು ದಿನಗಳ ಹಿಂದೆಯೇ ಗಿರೀಶ್ ರವರನ್ನು ಮೈಸೂರು ಮೂಡ ತಹಶೀಲ್ದಾರ್ ಆಗಿ ವರ್ಗಾವಣೆ ಮಾಡಲಾಗಿದೆ. ಚುನಾವಣೆ ಹಿನ್ನೆಲೆಯಲ್ಲಿ ತಹಶೀಲ್ದಾರ್ ಗಿರೀಶ್ ರವರ ವರ್ಗಾವಣೆ ಹಲವಾರು ಅನುಮಾನಗಳಿಗೆ ಎಡವು ಮಾಡಿಕೊಟ್ಟಿದೆ.
ಶಿವಮೊಗ್ಗ ತಹಶೀಲ್ದಾರ್ ಗಿರೀಶ್ ರವರ ಸ್ಥಾನಕ್ಕೆ ರಾಜೀವ್ ರವರು ವರ್ಗಾವಣೆ ಆಗಿದ್ದಾರೆ.

More Stories
ಜೈಲಿನ ಖೈದಿಗಳ ಬಳಿ ವರ್ಷದಿಂದ ವರ್ಷಕ್ಕೆ ಮೊಬೈಲ್ಗಳ ಸಂಖ್ಯೆಯಲ್ಲಿ ಹೆಚ್ಚಳ : 410 ವಿವಿಧ ಕಂಪನಿಯ ಮೊಬೈಲ್ ಪತ್ತೆ..!!
ಕಸ್ತೂರಿ ರಂಗನ್ ವರದಿ ಕುರಿತು ತೀರ್ಥಹಳ್ಳಿಯಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕೊಟ್ಟ ಸೂಚನೆಯಾದರೂ ಏನು ..?
ಸಂಗ್ರ ಹ ಮಾಡಲಾಗಿರುವ ಅಕ್ರಮ ಮರಳನ್ನು ತ್ವರಿತವಾಗಿ ವಿಲೇಮಾಡಿ : ಪ್ರಭುಲಿಂಗ ಕವಳಿಕಟ್ಟಿ