(ಸಿಟಿ ರೌಂಡ್ಸ್ ನ್ಯೂಸ್)
ಅಣ್ಣಪ್ಪ ಎಂ
ಬಿಹಾರ : ವಿಶ್ವದಲ್ಲೇ ಅತ್ಯಂತ ವಿಷಕಾರಿ ಹಾವುಗಳಲ್ಲಿ ಒಂದಾದ ಮಂಡಲ ಹಾವೊಂದು ಮನೆಯಲ್ಲಿ ಮಲಗಿದ್ದ ವ್ಯಕ್ತಿಯೊಬ್ಬರ ಕೈಗೆ ಕಚ್ಚಿದ್ದು, ಆಸ್ಪತ್ರೆಗೆ ಹೋದಾಗ ವೈದ್ಯರು ಯಾವ ಹಾವು ಕಚ್ಚಿದೆ ಎಂದು ಕೇಳಿದರೆ ಏನು ಹೇಳೋದು ಎಂದು ಗೊತ್ತಾಗದೆ ಹಾವಿನ ಸಮೇತ ಆಸ್ಪತ್ರೆಗೆ ಬಂದಿರುವ ಘಟನೆ ಬಿಹಾರದಲ್ಲಿ ನಡೆದಿದೆ.
ಮಿರಾಚಕ್ ನಿವಾಸಿ ಪ್ರಕಾಶ್ (48) ಎಂಬುವವರು ಮನೆಯಲ್ಲಿ ಮಲಗಿದ್ದ ವೇಳೆ ಮಂಡಲ ಹಾವೊಂದು ಕಚ್ಚಿತ್ತು. ಕೂಡಲೇ ಎಚ್ಚೆತ್ತ ಪ್ರಕಾಶ್ ಕೂಡಲೇ ಹಾವನ್ನು ಹಿಡಿದು, ವಿಷ ಮೈಯೆಲ್ಲಾ ಹರಡದಂತೆ ಕೈಗೆ ಬಿಗಿಯಾಗಿ ಬಟ್ಟೆ ಕಟ್ಟಿಕೊಂಡು ಆಸ್ಪತ್ರೆಗೆ ತೆರಳಿದ್ದಾರೆ.
ಉಟ್ಟ ಬಟ್ಟೆಯಲ್ಲೇ ಹಾವನ್ನು ಹಿಡಿದುಕೊಂಡು ಆಸ್ಪತ್ರೆಗೆ ಬಂದ ಪ್ರಕಾಶ ನನ್ನು ನೋಡಿ ಒಂದು ಕ್ಷಣ ಆಸ್ಪತ್ರೆಯ ಸಿಬ್ಬಂದಿ ಹಾಗೂ ಅಲ್ಲಿದ್ದ ಜನರು ಒಂದು ಕ್ಷಣ ಹೆದರಿ ಹೋಗಿದ್ದು, ಅಲ್ಲಿಂದ ಓಡಿ ಹೋಗಲು ಮುಂದಾದರು.ಬಳಿಕ ಸಾರ್ವಜನಿಕರು ಪ್ರಕಾಶ್ ಗೆ ಹಾವು ಎಲ್ಲಾದರೂ ಕೈಯಿಂದ ಜಾರಿದರೆ ಉಳಿದವರಿಗೆ ಕೂಡ ತೊಂದರೆಯಾಗುತ್ತೆ ಸ್ವಲ್ಪ ಆ ಕಡೆ ಹೋಗಿ ಎಂದು ಮನವಿ ಮಾಡಿದರುಸಾರ್ವಜನಿಕರ ಮಾತು ಕೇಳಿದ ಪ್ರಕಾಶ್ ಆಸ್ಪತ್ರೆಯ ಒಂದು ಮೂಲೆಗೆ ಹೋಗಿ ತನ್ನ ಬಲ ಕೈಯಲ್ಲಿ ಹಾವನ್ನು ಬಿಗಿಯಾಗಿ ಹಿಡಿದು ಅದರ ಜೊತೆಯೇ ಮಲಗಿದ್ದಾನೆ. ಈ ವೇಳೆ ವೈದ್ಯರು ಹಾವು ಯಾವುದೆಂದು ಗೊತ್ತಾಗಿದೆ. ಅದು ಕೈಯಲ್ಲಿ ಇದ್ದರೆಚಿಕಿತ್ಸೆ ನೀಡೋದು ಕಷ್ಟ ಹೇಳಿದ ಮೇಲೆ ಅದನ್ನು ಹೊರಗಡೆ ಹಾಕಿದ್ದಾನೆ.ಸದ್ಯ ಪ್ರಕಾಶ್ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆತನ ಸ್ಥಿತಿ ತಿಳಿದುಬಂದಿಲ್ಲ, ಅಲ್ಲದೇ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ.
More Stories
ನೀಟ್ ಪರೀಕ್ಷಾ ವ್ಯವಸ್ಥೆಯಲ್ಲಿ ಸೋರಿಕೆ… ಅವ್ಯವಸ್ಥೆಯ ನೇರ ಹೊಣೆಗಾರ ಕೇಂದ್ರ ಸರ್ಕಾರ..!!
ಬೇರೆಯವರ ಪರ ಧ್ವನಿ ಎತ್ತುವ ಪತ್ರಕರ್ತರೇ, ನಿಮ್ಮ ಮತ್ತು ನಿಮ್ಮ ಕುಟುಂಬದ ಧ್ವನಿಯಾಗುವವರು ಯಾರು?
10 ದಿನಗಳ ಎನ್ಐಎ ಕಸ್ಟಡಿಗೆ ಅಮೀರ್ ರಶೀದ್ ಅಲಿ ಮತ್ತು ಜಾಸಿರ್ ಬಿಲಾಲ್ ವಾನಿ……!