ತೋಟಗಾರಿಕೆ ನರ್ಸರಿ ಸರ್ಟಿಫಿಕೇಟ್ ಕೋರ್ಸ್ಗಾಗಿ ಅರ್ಜಿ ಆಹ್ವಾನ

(ಸಿಟಿ ರೌಂಡ್ಸ್ ನ್ಯೂಸ್)  
    ಅಣ್ಣಪ್ಪ ಎಂ

ಶಿವಮೊಗ: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯವು ನ. 04 ರಿಂದ “ ತೋಟಗಾರಿಕೆಯಲ್ಲಿ ನರ್ಸರಿ ” ಬಗ್ಗೆ ಮೂರು ತಿಂಗಳುಗಳ ಸರ್ಟಿಫಿಕೇಟ್ ಕೋರ್ಸ್ ನಡೆಸಲು ಉದ್ದೇಶಿಸಿದ್ದು, ಅರ್ಹ ಆಸಕ್ತ ರೈತರಿಂದ ಅರ್ಜಿ ಆಹ್ವಾನಿಸಿದೆ.

ಆಸಕ್ತರು ಅ. 28 ರೊಳಗಾಗಿ ಅರ್ಜಿ ಸಲ್ಲಿಸುವಂತೆ ವಿವಿಯ ಸಹಾಯಕ ಪ್ರೋಫೆಸರ್ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.  
ಹೆಚ್ಚಿನ ಮಾಹಿತಿಗಾಗಿ ವಿಜ್ಞಾನಿಗಳಾದ ಡಾ. ಬಿ.ವಿ ಚಂಪ- 7338582371, ಡಾ. ಭರತ್ ಕುಮಾರ್ ಎಂ.ವಿ.-8277206549 ಮತ್ತು ಡಾ. ರವಿಶಂಕರ್ ಎಂ.ಪಾಟೀಲ್-9916426892 ಇವರುಗಳನ್ನು ಸಂಪರ್ಕಿಸುವುದು.