ಶಿವಮೊಗ್ಗ, ಅಕ್ಟೋಬರ್ 08 (ಸಿಟಿ ರೌಂಡ್ಸ್):ದಿನಾಂಕಃ 28-04-2024 ರಂದು ರಾತ್ರಿ ಶ್ರೀ ಮೊಹಮ್ಮದ್ ಖಾಲೀದ್ 21 ವರ್ಷ ವಾಸ ಅನ್ವರ್ ಕಾಲೋನಿ ಭದ್ರವತಿ ಟೌನ್ ರವರು ಭದ್ರಾವತಿ ನ್ಯೂ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯ ಬೈ ಪಾಸ್ ರಸ್ತೆಯಲ್ಲಿ ತಮ್ಮ ದ್ವಿ ಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ ಯಾರೋ ಅಪರಿಚಿತ ವ್ಯಕ್ತಿಗಳು ಬಂದು ಅವರನ್ನು ತಡೆದು ಅಡ್ಡಗಟ್ಟಿ ನಿಲ್ಲಿಸಿ ನಗದು ಹಣ, ಮೊಬೈಲ್ ಫೋನ್ ಮತ್ತು ವಾಚ್ ಅನ್ನು ಕಿತ್ತು ಕೊಂಡು ಹೋಗಿದ್ದು, ಈ ಬಗ್ಗೆ ಗುನ್ನೆ ಸಂಖ್ಯೆ 0053/2019 ಕಲಂ 394 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿಕೊಳ್ಳಲಾಗಿರುತ್ತದೆ.
ಪ್ರಕಣದಲ್ಲಿ ಆಗಿನ ತನಿಖಾಧಿಕಾರಿಗಳಾದ ಶ್ರೀ ರಾಘವೇಂದ್ರ ಕಾಂಡಿಕೆ, ಸಿಪಿಐ, ಭದ್ರಾವತಿ ನಗರ ವೃತ್ತ ರವರು ಪ್ರಕರಣದ ತನಿಖೆ ಪೂರೈಸಿ ಘನ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರವನ್ನು ಸಲ್ಲಿಸಿರುತ್ತಾರೆ.
ಘನ ನ್ಯಾಯಾಲಯದಲ್ಲಿ ಸರ್ಕಾರದ ಪರವಾಗಿ ಶ್ರೀಮತಿ ರತ್ನಮ್ಮ ಪಿ, ಸರ್ಕಾರಿ ಅಭಿಯೋಜಕರವರು, ಪ್ರಕರಣದ ವಾದ ಮಂಡಿಸಿದ್ದು, ಘನ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶಿವಮೊಗ್ಗ (ಪೀಠಾಸೀನ ಭದ್ರಾವತಿ)ಯಲ್ಲಿ ಪ್ರಕರಣದ ವಿಚಾರಣೆ ನಡೆದು, ಆರೋಪಿತರ ವಿರುದ್ಧ ಆರೋಪ ದೃಡಪಟ್ಟ ಹಿನ್ನೆಲೆಯಲ್ಲಿ, ಮಾನ್ಯ ನ್ಯಾಯಾಧಿಶರಾದ ಶ್ರೀಮತಿ ಇಂದಿರಾ ಮೈಲಸ್ವಾಮಿ ಚೆಟ್ಟಿಯಾರ ರವರು ದಿನಾಂಕಃ 07-10-2024 ರಂದು ಆರೋಪಿತರಾದ 1) ಸಯ್ಯದ್ ಇಬ್ರಾಹಿಂ, 23 ವರ್ಷ, ಶಿವಮೊಗ್ಗ ಟೌನ್, 2) ಮೊಹಮ್ಮದ್ ಮುಸ್ತಫಾ, 22 ವರ್ಷ, ಶಿವಮೊಗ್ಗ ಟೌನ್, 3) ಮೊಹಮ್ಮದ್ ಅಲ್ಲಾಭಕ್ಷಿ, 22 ವರ್ಷ, ಶಿವಮೊಗ್ಗ ಟೌನ್ ಇವರುಗಳಿಗೆ 05 ವರ್ಷ 01 ತಿಂಗಳು ಸಾಧಾ ಕಾರಾವಾಸ ಶಿಕ್ಷೆ ವಿಧಿಸಿ ಆದೇಶಿಸಿರುತ್ತಾರೆ.

More Stories
ಹಾಡ ಹಗಲೇ ರೌಡಿ ಶೀಟರ್ ರಾಜೇಶ್ ಶೆಟ್ಟಿ ಆಲಿಯಾಸ್ (ಕಪ್ಡ)ನ ಬರ್ಬರ ಹತ್ಯೆ…!!
ಅತ್ತಿಗೆಯನ್ನೆ ಇರಿದು ಕೊಂದ ಮೈದುನ..!
27 ವರ್ಷದ ಮಹಿಳೆಗೆ ಸರ್ಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ ಲೈಂಗಿಕ ದೌರ್ಜನ್ಯ..!