City Rounds News

Kannada News Website

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಇನ್ನರ್ ವೀಲ್ ಕ್ಲಬ್ ಶಿವಮೊಗ್ಗ ಪೂರ್ವ ವತಿಯಿಂದ  10 ಜೊತೆ ಸ್ಟೀಲ್ ಬೆಂಚ್ ಡೆಸ್ಕ್ ವಿತರಣೆ

ಶಿವಮೊಗ್ಗ, ಅಕ್ಟೋಬರ್ 08 (ಸಿಟಿ ರೌಂಡ್ಸ್): ಸರ್ಕಾರಿ ಶಾಲೆಯ ಮಕ್ಕಳಲ್ಲಿ ಇರುವ ಪ್ರತಿಭೆಗೆ ಪ್ರೋತ್ಸಾಹಿಸಲು ಹಾಗೂ ಅವರಲ್ಲಿರುವ ಪ್ರತಿಭೆ ಅನಾವರಣಗೊಳ್ಳಲು ಸರ್ಕಾರಿ ಶಾಲೆಗಳಿಗೆ ಸಂಘ-ಸಂಸ್ಥೆಗಳ ನೆರವು ಅಗತ್ಯ ಎಂದು ಇನ್ನರ್ ವೀಲ್ ಶಿವಮೊಗ್ಗ ಪೂರ್ವದ ಅಧ್ಯಕ್ಷರಾದ ವಾಗ್ದೇವಿ ಬಸವರಾಜ್ ಅವರು ಅಭಿಮತ ವ್ಯಕ್ತಪಡಿಸಿದರು ಅವರು ಇಂದು ಶಿವಮೊಗ್ಗ ಪೂರ್ವ ಸದಸ್ಯರಾದ ಲಾವಣ್ಯ ಶಶಿಧರ್. ವಿಜಯಶ್ರೀ  ಇವರ ನೆರವಿನಿಂದ ಬೇಡರ ಹೊಸಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ. ದಾನಿಗಳಾದ ಲಾವಣ್ಯ ಶಶಿಧರ್ ಹಾಗೂ ವಿಜಯಶ್ರೀ ಅವರು ಮಾತನಾಡುತ್ತಾ ದೇಣಿಗೆ  ನೀಡಿದ ಸಾಮಗ್ರಿಗಳು ದುರುಪಯೋಗವಾಗದಿರಲಿ ಎಂದು ಸಲಹೆ ನೀಡಿದರು
 ಇದೇ ಸಂದರ್ಭದಲ್ಲಿ ಇದೆ ಶಾಲೆಯ ಶಿಕ್ಷಕ ಲೇಖಕ ರಾಧಾ. ಸಂತೋಷ ಅವರು ದಾನಿಗಳಿಗೆ ಸನ್ಮಾನಿಸಿ ಅವರು ರಚಿಸಿದ  ಶರಣರ ಪುಸ್ತಕಗಳನ್ನು ನೀಡಿ ಗೌರವಿಸಿದರು ಇದೇ ಸಂದರ್ಭದಲ್ಲಿ ಸಹ ಶಿಕ್ಷಕಿ ಮುಖ್ಯೋಪಾಧ್ಯಾಯರಾದ ಸರೋಜಮ್ಮನವರು ಅಧ್ಯಕ್ಷತೆ ವಹಿಸಿ ಮಾತನಾಡಿದರು ನಮ್ಮ ಶಾಲೆಗೆ ತುಂಬಾ ಅಗತ್ಯವಾಗಿ ಬೇಕಾಗಿದ್ದ ನೀಡಿದ್ದಕ್ಕೆ ಸಂಸ್ಥೆಗೆ ತುಂಬು ಹೃದಯದ ಧನ್ಯವಾದಗಳು ತಿಳಿಸಿ ಆನಂದ ಭಾಷ್ಪ ಮೂಡಿಸಿದರು ಸಮಾರಂಭದಲ್ಲಿ ಶಿಕ್ಷಕರಾದ ವಾಣಿ
 ಪರ್ವೀನ್. ಸಂತೋಷ್. ಇನ್ನರ್ ವೀಲ್ ಮಾಜಿ ಅಧ್ಯಕ್ಷರಾದ ಶ್ರೀಮತಿ ಬಿಂದು ವಿಜಯ ಕುಮಾರ್. ಕಾರ್ಯದರ್ಶಿ ಲತಾ ಸೋಮಶೇಖರ್  ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷರು ಗ್ರಾಮ ಪಂಚಾಯತಿಯ ಸದಸ್ಯರು ಹಾಗೂ ಗ್ರಾಮಸ್ಥರು ಇನ್ನರ್ ವೀಲ್ ಸದಸ್ಯರು ಉಪಸ್ಥಿತರಿದ್ದರು