ಶಿವಮೊಗ್ಗ, ಅಕ್ಟೋಬರ್ 07 (ಸಿಟಿ ರೌಂಡ್ಸ್): ರೌಡಿ ಶೀಟರ್ ಕಾಲಿಗೆ ಗುಂಡೇಟು ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಮೊಗ್ಗದ ಎಸ್ ಪಿ ಜಿ.ಕೆ ಮಿಥುನ್ ಕುಮಾರ್ ಪ್ರತಿಕ್ರಿಯಿಸಿದ್ದಾರೆ. ಉದ್ಯಮಿ ನಾಸೀರ್ ಖಾನ್ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಹಬೀಬ್ ವುಲ್ಲಾ ಯಾನೆ ಅಮ್ಮುವಿನ ಹಿಡಿಯುವ ವೇಳೆ ನಡೆದ ಘರ್ಷಣೆಯಿಂದಾಗಿ ಆತನ ಕಾಲಿಗೆ ಗುಂಡೇಟು ಹಾರಿಸಲಾಗಿದೆ ಎಂದರು.
ಸೆ.13 ರಂದು ತುಂಗಾನಗರ ಪೊಲೀಸ್ ಠಾಣೆಯಲ್ಲಿ ಆರೋಪಿ ಹಬೀಬ್ ವುಲ್ಲಾನ ವಿರುದ್ದ 307 ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ವ್ಯಕ್ತಿಯೊಬ್ಬರಿಗ ಬೆನ್ನಿಗೆ ಚಾಕು ಹಾಕಿ ಆರೋಪಿ ಪರಾರಿಯಾಗಿದ್ದು ಆತನ ಪತ್ತೆಗಾಗಿ ಸಿಪಿಐ ಗುರುರಾಜ್ ನೇತೃತ್ವದ ತಂಡ ರಚನೆ ಮಾಡಲಾಗಿತ್ತು ಎಂದು ಎಸ್ಪಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.
ಆಗ ಗಾಳಿಯಲ್ಲಿ ಗುಂಡು ಹಾರಿಸಿ ಪಿಐ ಗುರುರಾಜ್ ಆರೋಪಿಗೆ ಎಚ್ಚರಿಕೆ ನೀಡಿದ್ದಾರೆ. ಹಲ್ಲೆ ಮಾಡಲು ಮುಂದಾದಾಗ ಆರೋಪಿ ಮೇಲೆ ಫೈರಿಂಗ್ ಮಾಡಲಾಗಿದೆ. ಆರೋಪಿ ಹಬೀಬ್ ವುಲ್ಲಾ ಮೇಲೆ ರೌಡಿ ಶೀಟರ್, ಕೊಲೆ ಕೇಸ್ ಸೇರಿ ಆರು ಪ್ರಕರಣಗಳಿವೆ ಎಂದರು.
ಕಬೀರ್ ಎಂಬ ಕೊಲೆ ಪ್ರಕರಣದಲ್ಲಿ 2020 ರಲ್ಲಿ ಜೈಲಿಗೆ ಹೋಗಿ ಬಂದಿದ್ದ ಹಬೀಬುಲ್ಲಾ ಜುಲೈನಲ್ಲಿ ಬಿಡುಗಡೆಯಾಗಿ ಮತ್ತೆ ಕೊಲೆ ಮಾಡಲು ಯತ್ನ ನಡೆಸಿದ್ದನು. ಈಗ ಪ್ರಕರಣದ ತನಿಖೆ ಮುಂದುವರೆದಿದೆ. ಹಬಿಬ್ ವುಲ್ಲಾ ಅಲಿಯಾಸ್ ಅಮ್ಮು ಎನ್ನುವ ರೌಡಿ ಶೀಟರ್ ಮೇಲೆ ಕಾಲಿಗೆ ಫೈರಿಂಗ್ ಮಾಡಲಾಗಿದೆ.

More Stories
ಜೈಲಿನ ಖೈದಿಗಳ ಬಳಿ ವರ್ಷದಿಂದ ವರ್ಷಕ್ಕೆ ಮೊಬೈಲ್ಗಳ ಸಂಖ್ಯೆಯಲ್ಲಿ ಹೆಚ್ಚಳ : 410 ವಿವಿಧ ಕಂಪನಿಯ ಮೊಬೈಲ್ ಪತ್ತೆ..!!
ಕಸ್ತೂರಿ ರಂಗನ್ ವರದಿ ಕುರಿತು ತೀರ್ಥಹಳ್ಳಿಯಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕೊಟ್ಟ ಸೂಚನೆಯಾದರೂ ಏನು ..?
ಸಂಗ್ರ ಹ ಮಾಡಲಾಗಿರುವ ಅಕ್ರಮ ಮರಳನ್ನು ತ್ವರಿತವಾಗಿ ವಿಲೇಮಾಡಿ : ಪ್ರಭುಲಿಂಗ ಕವಳಿಕಟ್ಟಿ