ಸಿಟಿ ರೌಂಡ್ಸ್ ಸಾಗರ: ನಗರಸಭೆ ವ್ಯಾಪ್ತಿಯ ಎಲ್ಲ ಅಸ್ತಿದಾರರು ಅಕ್ಟೋಬರ್ 7ರಿಂದ ತಮ್ಮ ಆಸ್ತಿಗಳನ್ನು ಈ-ಸ್ವತ್ತು ತಂತ್ರಾಂಶದಲ್ಲಿ ದಾಖಲಿಸುವುದು ಕಡ್ಡಾಯವಾಗಿದ್ದು, ಸರ್ಕಾರದ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾಗಿದೆ ಎಂದು ಉಪವಿಭಾಗಾಧಿಕಾರಿ ಹಾಗೂ ನಗರಸಭೆ ಆಡಳಿತಾಧಿಕಾರಿ ಯತೀಶ್ ಆರ್. ತಿಳಿಸಿದ್ದಾರೆ.
ನಗರಸಭೆ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರಸಭೆ ವ್ಯಾಪ್ತಿಯ 23058 ಆಸ್ತಿಗಳಲ್ಲಿ ಕೇವಲ 7108 ಆಸ್ತಿಗಳು ಮಾತ್ರ ಈ-ಸ್ವತ್ತು ಹೊಂದಿದ್ದು, ಉಳಿದ 15ಸಾವಿರಕ್ಕೂ ಹೆಚ್ಚು ಆಸ್ತಿಗಳಿಗೆ ಇನ್ನೂ ಈ-ಸ್ವತ್ತು ಮಾಡಿಸಲಾಗಿಲ್ಲ. ಈ-ಸ್ವತ್ತು ಮಾಡಿದರೆ ಆಸ್ತಿ ಖರೀದಿ, ಮಾರಾಟ, ಭೋಗ್ಯಕ್ಕೆ ಕೊಡುವುದು ಹಾಗೂ ಬ್ಯಾಂಕ್ ಸಾಲದ ಸೌಲಭ್ಯಗಳಂತಹ ವಿವಿಧ ವ್ಯವಹಾರಗಳಲ್ಲಿ ಸುಗಮತೆ ದೊರಕುತ್ತದೆ.
ಈ ಸಂಬಂಧ, ದಸರಾ ಹಬ್ಬದ ನಂತರ ಪ್ರತಿ ವಾರ್ಡ್ನಲ್ಲಿ ಸಭೆಗಳನ್ನು ಆಯೋಜಿಸಿ, ಸ್ಥಳದಲ್ಲಿಯೇ ಅರ್ಜಿಗಳನ್ನು ಸ್ವೀಕರಿಸುವ ಮೂಲಕ ಈ-ಸ್ವತ್ತು ಪ್ರಕ್ರಿಯೆ ತ್ವರಿತಗೊಳಿಸಲಾಗುವುದು ಎಂದು ಅವರು ತಿಳಿಸಿದರು.

More Stories
ಜೈಲಿನ ಖೈದಿಗಳ ಬಳಿ ವರ್ಷದಿಂದ ವರ್ಷಕ್ಕೆ ಮೊಬೈಲ್ಗಳ ಸಂಖ್ಯೆಯಲ್ಲಿ ಹೆಚ್ಚಳ : 410 ವಿವಿಧ ಕಂಪನಿಯ ಮೊಬೈಲ್ ಪತ್ತೆ..!!
ಕಸ್ತೂರಿ ರಂಗನ್ ವರದಿ ಕುರಿತು ತೀರ್ಥಹಳ್ಳಿಯಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕೊಟ್ಟ ಸೂಚನೆಯಾದರೂ ಏನು ..?
ಸಂಗ್ರ ಹ ಮಾಡಲಾಗಿರುವ ಅಕ್ರಮ ಮರಳನ್ನು ತ್ವರಿತವಾಗಿ ವಿಲೇಮಾಡಿ : ಪ್ರಭುಲಿಂಗ ಕವಳಿಕಟ್ಟಿ