ಗಾಂಜಾ ಸೇದಲು ಹೊಸ ಪ್ಲಾನ್‌ ಶುರು ಮಾಡಿದ ಶಿವಮೊಗ್ಗ ಕಾರಾಗೃಹದ ಖೈದಿಗಳು?

ಶಿವಮೊಗ್ಗ, ಸಿಟಿ ರೌಂಡ್ಸ್: ಶಿವಮೊಗ್ಗ ಕಾರಾಗೃಹದಲ್ಲಿ ಗಾಂಜಾ ಓಡಾಟವನ್ನು ತಡೆಗಟ್ಟಿದ ನಂತರ, ಕೆಲ ಖೈದಿಗಳು ಹೊಸ ಮಾರ್ಗಗಳನ್ನು ಹುಡುಕಲು ಪ್ರಯತ್ನಿಸುತ್ತಿದ್ದಾರೆ ಎಂಬ ಶಂಕೆ ಎದುರಾಗಿದೆ.

ಚಿಕಿತ್ಸೆಗಾಗಿ ವಿಚಾರಣಾಧೀನ ಖೈದಿಯೊಬ್ಬನು ಬಂದಾಗ, ಅವನನ್ನು ಭೇಟಿಯಾದ ಕುಟುಂಬಸ್ಥರು ಗಾಂಜಾ ಪಾಸ್ ಮಾಡಲು ಪ್ರಯತ್ನಿಸಿದರು. ಡಿಎಆರ್ ಪೊಲೀಸರು ಇದನ್ನು ಗಮನಿಸಿ ತಪಾಸಣೆ ನಡೆಸಿದಾಗ, ಗಾಂಜಾ ಪಾಸ್ ಮಾಡಿದ ಆರೋಪಿಗಳು ಪೊಲೀಸರು ಮತ್ತು ಇತರರಿಗೆ ಧಮ್ಕಿ ಹಾಕಿದ ಘಟನೆ ನಡೆದಿದೆ. ಈ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ತೀವ್ರ ಅನಾರೋಗ್ಯದ ಕಾರಣಕ್ಕೆ, ಮೂರು ಜನ ಸಜಾಬಂದಿ ಹಾಗೂ ಒಬ್ಬ ವಿಚಾರಣಾಧೀನ ಖೈದಿಯನ್ನು ಡಿಎಆರ್ ಪೊಲೀಸರು ಮೆಗ್ಗಾನ್ ಆಸ್ಪತ್ರೆಗೆ ಕರೆದುಕೊಂಡು ಹೋದರು.

You may have missed