City Rounds News

Kannada News Website

ಗೃಹ ಮಂತ್ರಿಯನ್ನು ಬದಲಾಯಿಸಿ: ಕೆಆರ್‌ಎಸ್‌ ಪಕ್ಷದವತಿಯಿಂದ ಆಗ್ರಹ….!!

ಶಿವಮೊಗ್ಗ: ದಿನಾಂಕ-13-04-ಎಪ್ರಿಲ್‌: ಕೆ ಆರ್ ಎಸ್ ಪಕ್ಷದ ರಾಜ್ಯ ನಾಯಕರ ಮೇಲೆ ದಾಖಲಾಗಿರುವ ದರ್ಪದ ಮತ್ತು ಸುಳ್ಳು ಕೇಸ್ ಅನ್ನು ಇಂಪಡೆಯುವಂತೆ ಹಾಗೂ ಗೃಹ ಮಂತ್ರಿಯನ್ನು ಬದಲಾಯಿಸುವಂತೆ. (ಕರ್ನಾಟಕ ರಾಷ್ಟ್ರ ಸಮಿತಿ) ಪಕ್ಷ ಶಿವಮೊಗ್ಗ ಘಟಕದ ವತಿಯಿಂದ ಮಾನ್ಯ ಮುಖ್ಯಮಂತ್ರಿಗಳಿಗೆ, ಜಿಲ್ಲಾಧಿಕಾರಿಗಳ ಮುಖೇನ ಆಗ್ರಹಿಸಲಾಯಿತು.

ದಿನಾಂಕ 08-04-2026ರಂದು ತುಮಕೂರಿನಲ್ಲಿ ಗೃಹ ಮಂತ್ರಿಗಳ ಸಮ್ಖುದಲ್ಲಿ ನಡೆದ “ಜನತಾದರ್ಶನ” ಕಾರ್ಯಕ್ರಮದ (ಸಾರ್ವಜನಿಕ ಸ್ಥಳ) ದಲ್ಲಿ ಅಹವಾಲು ಸಲ್ಲಿಸಲು ಬಂದಿದ್ದ ಕರ್ನಾಟಕ ರಾಷ್ಟ್ರ ಸಮಿತಿ (ಕೆಆರ್‌ಎಸ್‌) ಪಕ್ಷದ ನಾಯಕರು ಫೇಸ್ಬುಕ್ ಲೈವ್ ಮಾಡುವುದನ್ನು ತಡೆಯಲು ಪಕ್ಷದ ನಾಯಕರ ಮೇಲೆ ಪೊಲೀಸರು ದೌರ್ಜನ್ಯ ಎಸಗಿ ಅವರನ್ನು ಎಳೆದಾಡಿ ಕರೆದುಕೊಂಡು ಹೋಗಿ ಅವರ ಮೇಲೆ ಸುಳ್ಳು ಎಫ್‌ಐಆರ್‌ ದಾಖಲಿಸಿದ್ದಾರೆ.

 

ಗೃಹ ಸಚಿವ ಜಿ ಪರಮೇಶ್ವರ್ ಅವರ ಸೂಚನೆಯ ಮೇರೆಗೆ ಪಕ್ಷದ ರಾಜ್ಯ ಉಪಾಧ್ಯಕ್ಷರಾದ ಸೋಮಸುಂದರ್ ಕೆ .ಎಸ್. ,ಹಾಗೂ ಕಾರ್ಯದರ್ಶಿ ಮಲ್ಲಿಕಾರ್ಜುನಯ್ಯ ಭಟ್ಟರಹಳ್ಳಿ ಸೇರಿದಂತೆ ಇತರ ನಾಯಕರ ಮೇಲೆ, ರಾಜಕೀಯ ದ್ವೇಷದಿಂದ ಪ್ರಕರಣ ದಾಖಲಿಸಿರುವುದನ್ನು ನಾವು ಖಂಡಿಸುತ್ತೇವೆ.

ಸಾರ್ವಜನಿಕರ ಅಹವಾಲು ಬಂದವರ ವಿರುದ್ಧವೇ ಪ್ರಕರಣ ದಾಖಲಿಸುವುದು ಪ್ರಜಾಪ್ರಭುತ್ವಕ್ಕೆ ವಿರೋಧವಲ್ಲವೇ… ಸಾರ್ವಜನಿಕ ಸ್ಥಳದಲ್ಲಿ ವಿಡಿಯೋ ಮಾಡುವುದು ಕಾನೂನುಬಾಹಿರವೇ …. ಸಂವಿಧಾನ ಬದ್ಧವಾದ ಮೂಲಭೂತ ಹಕ್ಕನ್ನು ಧಮನ ಮಾಡುವ ಹುನ್ನಾರವೇ…. ಬಿಎನೆಎಸ್ ಪ್ರಕಾರ ಪ್ರಾಥಮಿಕ ತನಿಖೆಗೆ ಅವಕಾಶವಿದ್ದರೂ ಕಿಂಚಿತ್ತು ತನಿಖೆ ನಡೆಸದೆ ತುರ್ತಾಗಿ ಕ್ರಮ ಕೈಗೊಂಡಿದ್ದಾರ ಹಿಂದಿನ ಮರ್ಮವೇನು ….. ಮಹಿಳಾ ಪೊಲೀಸರ ಮೂಲಕ ದೂರು ದಾಖಲಿಸುವ ತಂತ್ರದ ಹಿಂದೆ ಇರುವ ಉದ್ದೇಶವೇನು…… ಎಂಬುದರ ವಿಚಾರವಾಗಿ..

 

ಈ ಮನವಿಯನ್ನು ಪರಿಗಣಿಸಿ ನಮ್ಮ ಪಕ್ಷದ ರಾಜ್ಯ ನಾಯಕರುಗಳಾದ ಸೋಮ ಸುಂದರ್ ಕೆ.ಎಸ್. ಜ್ಞಾನ ಸಿಂಧು ಸ್ವಾಮಿ ಹಾಗೂ ಮಲ್ಲಿಕಾರ್ಜುನಯ್ಯ ಭಟ್ಟರಹಳ್ಳಿ ಅವರ ವಿರುದ್ಧ ದಾಖಲಾಗಿರುವ ಸುಳ್ಳು ಪ್ರಕರಣಗಳನ್ನು ಸರ್ಕಾರವು ತಕ್ಷಣವೇ ಹಿಂಪಡೆಯಬೇಕು. ಇಲ್ಲವಾದಲ್ಲಿ ಮುಂಬರುವ ದಿನಗಳಲ್ಲಿ ರಾಜ್ಯಾದ್ಯಂತ ಹೋರಾಟವನ್ನು ತೀವ್ರಗೊಳಿಸುವುದಾಗಿ ಕೆ ಆರ್ ಎಸ್ ಪಕ್ಷ ಎಚ್ಚರಿಕೆ ನೀಡಿದೆ. ಹಾಗೂ ರಾಜ್ಯದ ಜನರ ರಕ್ಷಣೆಗೆ ಇರುವ ಪೊಲೀಸ್ ಇಲಾಖೆಯ ಸಿಬ್ಬಂದಿಗಳಿಂದ ಇತ್ತೀಚಿಗೆ ಕಳೆದ ಆರು ತಿಂಗಳಿಂದ ಲೋಕ ಕಂಡಂತೆ ದೌರ್ಜನ್ಯ, ಲಂಚ, ಮೋಸ, ಕಳ್ಳತನ ,ಕಳ್ಳರೊಂದಿಗೆಶಾಮೀಲು, ಲೈಂಗಿಕ ದೌರ್ಜನ್ಯ, ಮುಂತಾದ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿ ರಾಜ್ಯದ ಮಾನ ತೆಗೆದಿರುವ ಇಲಾಖೆಯನ್ನು ಹಿಡಿತದಲ್ಲಿ ಇಟ್ಟುಕೊಳ್ಳಲು ಸಾಧ್ಯವಾಗದ ಅಸಮರ್ಥ ಗೃಹಮಂತ್ರಿಯನ್ನು ಬದಲಾಯಿಸುವಂತೆ ಜಿಲ್ಲಾಧಿಕಾರಿಗಳಿಗೆ ಆಗ್ರಹಿಸಲಾಯಿತು..