
ಶಿವಮೊಗ್ಗ: 03-04-26. ಶಿವಮೊಗ್ಗ ತಾಲೂಕು ನಿಧಿಗೆ ನಾಲೆಯಲ್ಲಿ ಒಬ್ಬ ವ್ಯಕ್ತಿಯ ಮೃತ ದೇಹ ನೀರಿನಲ್ಲಿ ತೇಲಿ ಬರುತ್ತಿರುವ ವ್ಯಕ್ತಿಯನ್ನು ಕಂಡಿದ್ದು, ಅದೇ ನಾಲೆಗೆ, ಬಟ್ಟೆ ಸ್ವಚ್ಛ ಮಾಡಲೆಂದು ಬಂದಂತಹ ಹೆಣ್ಣು ಮಕ್ಕಳು..
ನಾಲೆಯ ನೀರಿನಲ್ಲಿ ತೇಲಿ ಬರುತ್ತಿದ್ದ ವ್ಯಕ್ತಿಯ ದೇಹವನ್ನು. ಅದೇನಾಲೆಯಲ್ಲಿ ಬಟ್ಟೆ ಸ್ವಚ್ಛಗೊಳಿಸಲು ಬಂದಂತಹ ಹೆಂಗಸರು ಕಂಡಿದ್ದು, ನಂತರ ಅದೇ ಸಮಯದಲ್ಲಿ, ನಾಲೆಯ ಪಕ್ಕದ ರಸ್ತೆಯಲ್ಲಿ ಗ್ರಾಮದಿಂದ ಶಿವಮೊಗ್ಗಕ್ಕೆ ಹೋಗುತ್ತಿದ್ದಂತ ರಮೇಶ್ ನಾಯ್ಕ ಎಂಬ ದ್ವಿಚಕ್ರ ವಾಹನ ಸವಾರನನ್ನು ಕರೆದು, ನಾಲೆಯಲ್ಲಿ ತೇಲಿ ಬರುತ್ತಿರುವ ವ್ಯಕ್ತಿಯು ಬದುಕಿರಬಹುದೇ ಎಂಬ ಸಂಶಯದಿಂದ, ರಕ್ಷಿಸಲು ರಮೇಶ್ ನಾಯ್ಕರನ್ನು ಕರೆದಿರುತ್ತಾರೆ.
ವ್ಯಕ್ತಿಯನ್ನು ನಾಲೆಯ ನೀರಿನಿಂದ ಹೊರತಂದು ದಡದ ಮೇಲಿರಿಸಿದ ರಮೇಶ್ ನಾಯ್ಕ. 112 ಪೊಲೀಸ್ ತುರ್ತು ಸೇವೆಗೆ ಕರೆ ಮಾಡಿದ್ದು. ನಂತರ ಸ್ಥಳಕ್ಕೆ ಧಾವಿಸಿದ ಪೊಲೀಸರು, ನಾಲೆಯಲ್ಲಿ ತೇಲಿ ಬಂದಂತಹ ವ್ಯಕ್ತಿಯನ್ನು. ಆಂಬುಲೆನ್ಸ್ ಮೂಲಕ ಶಿವಮೊಗ್ಗ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು. ವ್ಯಕ್ತಿಯನ್ನು ಪರೀಕ್ಷಿಸಿದ ಸರ್ಕಾರಿ ವೈದ್ಯರು ವ್ಯಕ್ತಿ ಮೃತಪಟ್ಟಿದ್ದು ದೃಡಿಕರಿಸಿದ್ದಾರೆ.
ಮೃತ ವ್ಯಕ್ತಿಯ ಚಹರೆಯ ವಿವರ :

ಮೃತ ವ್ಯಕ್ತಿಯನ್ನು ನೀರಿನಿಂದ ದಡಕ್ಕೆ ಎಳೆದು ತಂದಂತಹ ವ್ಯಕ್ತಿ ರಮೇಶ್ ನಾಯ್ಕ ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಮೃತ ವ್ಯಕ್ತಿಯ ವಿಚಾರವಾಗಿ ದೂರು ನೀಡಿದ್ದು ಪೊಲೀಸ್ ಠಾಣೆಯ ಪೊಲೀಸರು, ತನಿಖೆಯನ್ನು ಮುಂದುವರಿಸಿದ್ದು. ಮೃತಪಟ್ಟ ವ್ಯಕ್ತಿಯು ಅಂದಾಜು ಸುಮಾರು 5.3 ಅಡಿ ಎತ್ತರ. ಒಂದು ಇಂಚು ಕಪ್ಪು ಕೂದಲು, ಕಪ್ಪು ಬಿಳಿ ಮಿಶ್ರಿತ ಕುರುಚಲು ಗಡ್ಡ, ಹಾಗೂ ಮೀಸೆ, ತೆಳುವಾದ ಮೈಕಟ್ಟು ಗೋಧಿ ಮೈಬಣ್ಣ, ಮೈ ಮೇಲೆ ಬಟ್ಟೆ ಇರುವುದಿಲ್ಲ, ಸುಮಾರು 45 ರಿಂದ 50 ವರ್ಷ ವಯಸ್ಸಿನ, ಗಂಡಸಿನ ಮೃತ ದೇಹದ, ಹೆಸರು,ವಿಳಾಸ, ಹಾಗೂ ಈ ಸಾವಿನ ಬಗ್ಗೆ ಯಾವುದೇ ರೀತಿಯ ಹೆಚ್ಚಿನ ಮಾಹಿತಿಯನ್ನು ಪೊಲೀಸರ ತನಿಖೆಯಿಂದ ತಿಳಿದು ಬರಬೇಕಾಗಿದೆ…



More Stories
ಜೈಲಿನ ಖೈದಿಗಳ ಬಳಿ ವರ್ಷದಿಂದ ವರ್ಷಕ್ಕೆ ಮೊಬೈಲ್ಗಳ ಸಂಖ್ಯೆಯಲ್ಲಿ ಹೆಚ್ಚಳ : 410 ವಿವಿಧ ಕಂಪನಿಯ ಮೊಬೈಲ್ ಪತ್ತೆ..!!
ಕಸ್ತೂರಿ ರಂಗನ್ ವರದಿ ಕುರಿತು ತೀರ್ಥಹಳ್ಳಿಯಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕೊಟ್ಟ ಸೂಚನೆಯಾದರೂ ಏನು ..?
ಸಂಗ್ರ ಹ ಮಾಡಲಾಗಿರುವ ಅಕ್ರಮ ಮರಳನ್ನು ತ್ವರಿತವಾಗಿ ವಿಲೇಮಾಡಿ : ಪ್ರಭುಲಿಂಗ ಕವಳಿಕಟ್ಟಿ