City Rounds News

Kannada News Website

ಶ್ರೀ ಕೋಟೆ ಮಾರಿಕಾಂಬಾ ದೇವಸ್ಥಾನ ಮುಜರಾಯಿ ಇಲಾಖೆಗೆ ಸೇರ್ಪಡಿಸುವಂತೆ “ನಮ್ಮ ತೆರಿಗೆ ನಮ್ಮ ಹಕ್ಕು ನಾಗರೀಕರ ವೇದಿಕೆ (ರಿ.) ” ಸಂಘಟನೆ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ…!!

 

ಶಿವಮೊಗ್ಗ -20-03-2026 ನಗರದ ಹೃದಯ ಭಾಗದಲ್ಲಿರುವಂತಹ. ಎಸ್‌.ಪಿ.ಎಮ್‌ ರಸ್ತೆ ಯಲ್ಲಿರುವಂತಹ ಶ್ರೀ ಕೋಟೆ ಮಾರಿಕಾಂಬಾ ದೇವಸ್ಥಾನ, ಶಿವಮೊಗ್ಗ ನಗರದ ಗ್ರಾಮ ದೇವತೆ ಎಂದು ಸುಪ್ರಸಿದ್ದಿಪಡೆದಂತಹ ದೇವಸ್ಥಾನವಾಗಿದ್ದು. ಈ ದೇವಾಲಯದಲ್ಲಿ ಎರಡು ವರ್ಷಕ್ಕೊಮ್ಮೆ ಅದ್ದೂರಿ ಜಾತ್ರೆ ಸಂಭ್ರಮಾಚರಣೆ ಹಾಗೂ ದೇವರ ಪೂಜಾ ವಿಧಿ ವಿಧಾನಗಳು ನಡೆಸಲಾಗುತ್ತದೆ. ಆದರೆ ದೇವಸ್ಥಾನ ಆಡಳಿತ ಮಂಡಳಿಯವರಿಂದ ದೇವಸ್ಥಾನದ ನಿರ್ವಹಣೆಯಲ್ಲಿ ಹಾಗೂ ಹಲವಾರು ರೀತಿಯ ಭ್ರಷ್ಟಾಚಾರದ ಆರೋಪಗಳು. ಸಾರ್ವಜನಿಕ ವಲಯದಿಂದ ದೂರುಗಳು ಕೇಳಿ ಬರುತ್ತಿದ್ದು. ಆದ ಕಾರಣ ಶ್ರೀ ಕೋಟೆ ಮಾರಿಕಾಂಬಾ ದೇವಸ್ಥಾನವನ್ನು . “ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಕಾಯ್ದೆ,” 1997ʼ ಇದರ ಆಧಾರ, ದೇವಾಲಯದ ಭ್ರಷ್ಟಾಚಾರ ತಡೆಗಟ್ಟಲು. ಶ್ರೀ ಕೋಟೆ ಮಾರಿಕಾಂಬಾ ದೇವಸ್ಥಾನದಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಸಾರ್ವಜನಿಕ ವಲಯದಿಂದ ದೂರುಗಳು ಕೇಳಿ ಬರುತ್ತಿದ್ದು. ಈ ವಿಚಾರವಾಗಿ ಸಂಬಂದಪಟ್ಟ ಇಲಾಖೆಯ ಅಧಿಕಾರಿಗಳಿಗೆ ಪರೀಶಿಲನೆ ನಡೆಸುವಂತೆ, ಜಿಲ್ಲಾಧಿಕಾರಿಯವರು ಸೂಚನೆ ನೀಡುವ ಮೂಲಕ, ಶ್ರೀ ಕೋಟೆ ಮಾರಿಕಾಂಬಾ ದೇವಸ್ಥಾನದ ಭಕ್ತರಿಗೆ ನ್ಯಾಯ ದೊರಕಿಸುವಂತೆ “ನಮ್ಮ ತೆರಿಗೆ ನಮ್ಮ ಹಕ್ಕು ನಾಗರೀಕರ ವೇದಿಕೆ(ರಿ.) ಸಂಘಟನೆವತಿಯಿಂದ ಮನವಿ ನೀಡಲಾಯಿತು.

 

ಶ್ರೀ ಕೋಟೆ ಮಾರಿಕಾಂಬಾ ದೇವಸ್ಥಾನದಲ್ಲಿನ ಆಡಳಿತ ಮಂಡಳಿಯಿಂದ ನಡೆಯುತ್ತಿರುವಂತಹ ಭ್ರಷ್ಟಾಚಾರಗಳೇನು …

1). ಶ್ರೀ ಕೋಟೆ ಮಾರಿಕಾಂಬ ದೇವಸ್ಥಾನ ಆಡಳಿತ ಮಂಡಳಿ ಚುನಾವಣೆ ನಡೆಸದೆ ಸುಮಾರು 12 ವರ್ಷಗಳ ಕಾಲದಿಂದ ಅಧ್ಯಕ್ಷ ಹಾಗೂ ಕೆಲ ಪದಾಧಿಕಾರಿಗಳನ್ನು ಮುಂದುವರಿಸಿಕೊಂಡು ಬಂದಿರುವುದು ಸಂಘ ಸಂಸ್ಥೆಗಳ ನಿಯಮಗಳನ್ನು ಪಾಲಿಸುವಲ್ಲಿ ವಿಫಲರಾಗಿದ್ದರೆ.

2). ದೇವಸ್ಥಾನಗಳಿಗೆ ಬರುವಂತ ಭಕ್ತಾದಿಗಳ ಕಾಣಿಕೆ ಹಾಗೂ ಇನ್ನಿತರ ದೇಣಿಗೆ ರೂಪದಲ್ಲಿ ನೀಡುವಂತಹ ಹಣ ಮತ್ತು ಒಡವೆ, ಬೆಳ್ಳಿ, ಸೀರೆ , ಹಾಗೂ ಮುಂತಾದ ವಸ್ತುಗಳನ್ನು ಮತ್ತು ಹಣದ ವಿಚಾರದಲ್ಲಿ ಲೆಕ್ಕಾಚಾರವಿಲ್ಲದೆ ಸಾರ್ವಜನಿಕರ ಅಂದರೆ ದೇವಸ್ಥಾನದ ಲಕ್ಷಾನು ಭಕ್ತರ ಹಣವನ್ನು ದುರುಪಯೋಗ ಪಡೆದುಕೊಂಡಿದ್ದಾರೆ ಎಂಬ ದೂರಿನ ಮೇರೆಗೆ ಪರಿಶೀಲನೆ.

3). 2 ವರ್ಷಕ್ಕೊಮ್ಮೆ ನಡೆಯುವಂತ ಶ್ರೀ ಕೋಟೆ ಮಾರಿಕಾಂಬ ದೇವಿ ಜಾತ್ರಾ ಮಹೋತ್ಸವದಲ್ಲಿ ಸಾರ್ವಜನಿಕರಿಗಾಗಿ , ಅಂದರೆ ಭಕ್ತಾದಿಗಳಿಗಾಗಿ ಯಾವುದೇ ರೀತಿಯ ಸೌಲಭ್ಯಗಳನ್ನು ಒದಗಿಸದೆ ಭಕ್ತಾದಿಗಳಿಗೆ ತೊಂದರೆಯಾಗುತ್ತಿದ್ದು .ಈ ವಿಚಾರವಾಗಿ ಹಲವು ಬಾರಿ ಆಡಳಿತ ಮಂಡಳಿಗೆ ಭಕ್ತಾದಿಗಳು ದೂರು ನೀಡಿದ್ದರು. ಜಾತ್ರಾ ಮಹೋತ್ಸವ ಸಮಯದಲ್ಲಿ ಭಕ್ತಾದಿಗಳಿಗೆ ಬೇಕಾದಂತಹ ಸೌಲಭ್ಯಗಳನ್ನು ಒದಗಿಸದೆ ಕೇವಲ ಭಕ್ತಾದಿಗಳಿಂದ ಬರುವಂತಹ, ದೇವರಿಗೆ ಹರಕೆ ರೂಪದಲ್ಲಿ ಬರುವಂತಹ ಹಣ ಹಾಗೂ ಬೆಳ್ಳಿ, ಒಡವೆ ವಸ್ತುಗಳನ್ನು ಮಾತ್ರ ಸ್ವೀಕರಿಸಿಕೊಂಡು ಭಕ್ತಾದಿಗಳಿಗೆ ಸೌಲಭ್ಯಗಳನ್ನು ನೀಡುವಲ್ಲಿ ವಿಫಲವಾಗಿರುವ ಆಡಳಿತ ಮಂಡಳಿ.

4). ಆಡಳಿತ ಮಂಡಳಿಯಿಂದ ಹಣದ ದುರೂಪಯೋಗ ಹಾಗೂ ಇನ್ನಿತರ ವಸ್ತುಗಳ ಅಂದರೆ ಭಕ್ತಾದಿಗಳು ನೀಡಿದಂತಹ ದೇವರಿಗೆ ರೂಪದಲ್ಲಿ ಬಂದಂತಹ ಬಂಗಾರ ಬೆಳ್ಳಿ ಸೀರೆ ಹರಕೆ, ಕೋಳಿ ಹೀಗೆ ಅನೇಕ ರೀತಿಯ ವಸ್ತುಗಳನ್ನು ಲೆಕ್ಕಾಚಾರವಿಲ್ಲದೆ ದುರ್ಬಳಕೆ ಮಾಡಿಕೊಂಡಿರುವುದು ಹಾಗೂ ದೇವಸ್ಥಾನದ ಉನ್ನತಿಗಾಗಿ ಅಭಿವೃದ್ಧಿಗಾಗಿ ಯಾವುದೇ ರೀತಿಯ ಕ್ರಮ ಕೈಗೊಳ್ಳದೆ ಹಣವನ್ನು ದುರುಪಯೋಗ ಹಾಗು ಇನ್ನಿತರ ಬೆಲೆಬಾಳುವಂತ ವಸ್ತುಗಳ ದುರುಪಯೋಗ ನಡೆದಿದೆ ಎಂದು ಭಕ್ತಾದಿಗಳಿಂದ ಬಂದ ದೂರಿನ ಮೇರೆಗೆ.

5). ಶ್ರೀ ಕೋಟೆ ಮಾರಿಕಾಂಬ ದೇವಸ್ಥಾನದ ಅಭಿವೃದ್ಧಿಯ ಹಿತಾಸಕ್ತಿಯಿಂದ ಹಾಗೂ ಭಕ್ತಾದಿಗಳಿಗೆ ಬೇಕಾದಂತಹ ಸೌಲಭ್ಯ ಸೌಲತ್ತುಗಳನ್ನು ನೀಡದೆ ಇರುವಂತ ಆಡಳಿತ ಮಂಡಳಿಯ ವಿರುದ್ಧ, ಸಂಘ-ಸಂಸ್ಥೆಗಳ ನಿಯಮಗಳನ್ನು ಉಲ್ಲಂಘಿಸಿ. ದೇವರ ಹೆಸರಿನಲ್ಲಿ ಭ್ರಷ್ಟಾಚಾರ ನಡೆಸುತ್ತಿರುವುದು ಸಾರ್ವಜನಿಕರ ಮುಖಾಂತರ ಭಕ್ತಾದಿಗಳ ದೂರಿನ ಮೇರೆಗೆ. ಶ್ರೀ ಕೋಟೆ ಮಾರಿಕಾಂಬ ದೇವಸ್ಥಾನದ ಆಡಳಿತ ವನ್ನು ಮುಜರಾಯಿ ಇಲಾಖೆಗೆ ಸೇರಿಸಬೇಕೆಂದು, ಶಿವಮೊಗ್ಗ ನಗರದ ಲಕ್ಷಾಂತರ ಭಕ್ತರ ಅಭಿಪ್ರಾಯ ಹಾಗೂ ದೂರಿನ ಮೇರೆಗೆ ದೇವಸ್ಥಾನದಲ್ಲಿ ನಡೆಯುತ್ತಿರುವಂತ ಭ್ರಷ್ಟಾಚಾರ ಹಾಗೂ ದೇಣಿಗೆ ರೂಪದಲ್ಲಿ ಬಂದಂತಹ ವಸ್ತುಗಳ ದುರ್ಬಳಕೆ ಹಾಗೂ ಅವ್ಯವಸ್ಥೆಯ ವಿರುದ್ಧ. “ನಮ್ಮ ತೆರಿಗೆ ನಮ್ಮ ಹಕ್ಕು ನಾಗರೀಕರ ವೇದಿಕೆ(ರಿ.) ಸಂಘಟನೆವತಿಯಿಂದ.ಈ ಹಿಂದೆ ಜಿಲ್ಲಾಧಿಕಾರಿ ಕಚೇರಿಯ ಟಪಾಲು ವಿಭಾಗಕ್ಕೆ ಮನವಿಯನ್ನು ಸಲ್ಲಿಸಲಾಗಿತ್ತು . ಇಂದು ಜಿಲ್ಲಾಧಿಕಾರಿಗಳಿಗೆ ಭೇಟಿನೀಡಿ ಮನವಿ ಸಲ್ಲಿಸಿದ ನಂತರ ಜಿಲ್ಲಾಧಿಕಾರಿಗಳಾದ ಪ್ರಭುಲಿಂಗ ಕವಳಿಕಟ್ಟೆ ರವರು ನಮ್ಮ ಮನವಿಯನ್ನು ಸ್ವೀಕರಿಸಿ ಶ್ರೀ ಕೋಟೆ ಮಾರಿಕಾಂಬ ದೇವಸ್ಥಾನ ಆಡಳಿತ ಮಂಡಳಿಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ವಿರುದ್ಧ ಪರಿಶೀಲಿಸುವುದಾಗಿ ಭರವಸೆ ನೀಡಿದ್ದಾರೆ..

ರಾಜ್ಯ ಅಧ್ಯಕ್ಷ-ಸಂಸ್ಥಾಪಕ ಅಣ್ಣಪ್ಪ. ಎಂ, ಉಪಾಧ್ಯಕ್ಷರಾದ ಗಣೇಶ್. ವಿ, ಖಜಾಂಚಿ ರಾಕೇಶ್ ಎಸ್. ಎನ್, ಸಹ ಕಾರ್ಯದರ್ಶಿ ಬಸವರಾಜ್ ಎಂ.ಆರ್, ಸಂಘಟನಾ ಕಾರ್ಯದರ್ಶಿ ಪಾಲಾಕ್ಷ್‌. ಕೆ, ಸದಸ್ಯರುಗಳಾದ ಪಿ. ಶ್ರೀಕಾಂತ್, ಮಾಲ್ತೇಶ್. ಎಲ್ , ರವಿಕುಮಾರ್, ಮುಂತಾದವರು ಹಾಜರಿದ್ದರು…