ಶಿವಮೊಗ್ಗ : ನಗರದ ಹೊಸ ಮನೆ ಬಡಾವಣೆಯ 4ನೇ ತಿರುವಿನಲ್ಲಿರುವಂತ ಶ್ರೀ ವಜ್ರೇಶ್ವರಿ ಸೇವಾ ಟ್ರಸ್ಟ್ ವತಿಯಿಂದ. ಶ್ರೀ ಮಹಾಗಣಪತಿ ಸ್ಥಿರಮೂರ್ತಿ ಪ್ರತಿಷ್ಠಾಪನೆಯ 22ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ದಿನಾಂಕ:16-03-2026 -17-03-2026, 2 ದಿನಗಳ ಕಾಲ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ವಿಶೇಷ ಪೂಜಾ ಕಾರ್ಯಕ್ರಮಗಳು
ದಿನಾಂಕ 16 3 2026ನೇ ಸೋಮವಾರ ಸಂಜೆ 7:30ಕ್ಕೆ ಶ್ರೀ ವಿನಾಯಕ ಪ್ರಾರ್ಥನೆ ಪುಣ್ಯಹ, ಕುಂಭಾದಿವಾಸ, ಸಪ್ತ ಶುದ್ದಿ, ವಾಸ್ತು ರಾಕ್ಷೋಘ್ನ ಹೋಮ, ವಾಸ್ತು ಬಲಿ, ದಿಗ್ಬಲಿ, ಪೂರ್ಣಾಹುತಿ, ಮಹಾಮಂಗಳಾರತಿ, ದೇವತಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ದೇವತಾ ಕಾರ್ಯಕ್ರಮದ ವಿಶೇಷತೆ
ದಿನಾಂಕ 17.3.2026 ನೇ ಮಂಗಳವಾರ ಬೆಳಿಗ್ಗೆ 9.00ಕ್ಕೆ ದ್ವಾದಶ ನಾರಿಕೇಳ ಗಣ ಯಾಗ, ಪೂರ್ಣಾವತಿ, ಕುಂಭಾಭಿಷೇಕ, 12.10ಕ್ಕೆ ಬ್ರಹ್ಮ ಕುಂಭಾಭಿಷೇಕ, 12:30ಕ್ಕೆ ಮಹಾಮಂಗಳಾರತಿ, ಮಧ್ಯಾಹ್ನ 1.00ಕ್ಕೆ ತೀರ್ಥ ಪ್ರಸಾದ ವಿನಯೋಗ ಕಾರ್ಯಕ್ರಮಗಳು ಏರ್ಪಡಿಸಲಾಗಿದೆ.
ಉಚಿತ ನೇತ್ರ ತಪಾಸಣಾ ಶಿಬಿರ ಹಾಗೂ
ನೋಟ್ ಬುಕ್ ವಿತರಣೆ
ವಾರ್ಷಿಕೋತ್ಸವದ ಪ್ರಯುಕ್ತ ದಿನಾಂಕ :17-03-2026ರ ಬೆಳಗ್ಗೆ10.00ರಿಂದ ಮಧ್ಯಾಹ್ನ 3.00 ರವರೆಗೆ {ವಾಸನ್ ಕಣ್ಣಿನ} ಆಸ್ಪತ್ರೆ ವತಿಯಿಂದ ಉಚಿತ ನೇತ್ರ ತಪಾಸಣಾ ಶಿಬಿರ ಮತ್ತು ಶಾಲಾ ಮಕ್ಕಳಿಗೆ ಉಚಿತ ನೋಟ್ ಬುಕ್ ವಿತರಣೆ ಕಾರ್ಯಕ್ರಮವನ್ನು ಹಮ್ಮಿ ಕೊಳ್ಳಲಾಗಿದ್ದು. ಎರಡು ದಿನಗಳ ನಡೆಯುವ ದೇವತಾ ಕಾರ್ಯಕ್ರಮ, ಹಾಗೂ ಉಚಿತ ತಪಾಸಣಾ, ನೋಟ್ ಬುಕ್ ವಿತರಣೆ ಎಲ್ಲಾ ಕಾರ್ಯಕ್ರಮಗಳಿಗೆ ಭಕ್ತಾದಿಗಳು ಅತಿ ಹೆಚ್ಚಿನ ಸಂಖ್ಯೆಯಲ್ಲಿ, ಪುಣ್ಯದ ಕಾರ್ಯದಲ್ಲಿ, ಭಾಗವಹಿಸಿ ದೇವರ ಕೃಪೆಗೆ ಪಾತ್ರರಾಗ ಬೇಕೆಂದು ಶ್ರೀ ವಜ್ರೇಶ್ವರಿ ಸೇವಾ ಟ್ರಸ್ಟ್ ವತಿಯಿಂದ, ನಗರದ ಎಲ್ಲಾ ಧರ್ಮದ ದೇವರ ಭಕ್ತಾದಿಗಳಿಗೂ ಆಹ್ವಾನಿಸಲಾಗಿದೆ..



More Stories
ಜೈಲಿನ ಖೈದಿಗಳ ಬಳಿ ವರ್ಷದಿಂದ ವರ್ಷಕ್ಕೆ ಮೊಬೈಲ್ಗಳ ಸಂಖ್ಯೆಯಲ್ಲಿ ಹೆಚ್ಚಳ : 410 ವಿವಿಧ ಕಂಪನಿಯ ಮೊಬೈಲ್ ಪತ್ತೆ..!!
ಕಸ್ತೂರಿ ರಂಗನ್ ವರದಿ ಕುರಿತು ತೀರ್ಥಹಳ್ಳಿಯಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕೊಟ್ಟ ಸೂಚನೆಯಾದರೂ ಏನು ..?
ಸಂಗ್ರ ಹ ಮಾಡಲಾಗಿರುವ ಅಕ್ರಮ ಮರಳನ್ನು ತ್ವರಿತವಾಗಿ ವಿಲೇಮಾಡಿ : ಪ್ರಭುಲಿಂಗ ಕವಳಿಕಟ್ಟಿ