ಶಿವಮೊಗ್ಗ : ಕಾರಾಗೃಹದಲ್ಲಿ ಬಂದಿತರಾದ ಸ್ನೇಹಿತರಿಗೆ ಮಾದಕ ವಸ್ತು ನೀಡಲು ಬಂದಂತ ನಾಲ್ವರು ಅದೇ ಕಾರಾಗೃಹಕ್ಕೆ ಆರೋಪಿಗಳಾಗಿ ಬಂದಿತರಾಗಿದ್ದಾರೆ.

ಶಿವಮೊಗ್ಗ ಸೋಗಾನೆ ಕೇಂದ್ರ ಕಾಲಾಗೃಹದ ಕಾಂಪೌಂಡ್ ಹೊರಗಡೆಯಿಂದ ಕಾರಾಗೃಹದ ಒಳಭಾಗಕ್ಕೆ ನಾಲ್ಕು ಜನ ಯುವಕರು ಮಾದಕ ವಸ್ತುಗಳಾದ ಗಾಂಜಾ ಸಿಗರೇಟ್ ಮೊಬೈಲ್ ಹಾಗೂ ಲೈಟರ್ ಅನ್ನು ಕಪ್ಪು ಬಣ್ಣದ ಗಂಟೆಯಿಂದ ಪ್ಯಾಕ್ ಮಾಡಿ ದಿನಾಂಕ 01.02.2026ರಂದು ಬೆಳಗಿನ ಜಾವ ಕಾರಾಗೃಹದೊಳಗೆ ಎಸೆದಿರುತ್ತಾರೆ.
ಈ ವಿಚಾರವಾಗಿ ಕಾರಾಗೃಹದ ಅಧೀಕ್ಷಕರಾದ ಪರಮೇಶ್ ಎಚ್ ಎ ರವರು ಶಿವಮೊಗ್ಗ ನಗರದ ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿರುತ್ತಾರೆ.ಪ್ರಕರಣವನ್ನು ದಾಖಲಿಸಿಕೊಂಡಂತ ತುಂಗಾ ನಗರ ಪೊಲೀಸ್ ಠಾಣೆಯ ಪೊಲೀಸರು, ಪ್ರಕರಣ ಸಂಖ್ಯೆ: 68/2026 ಕಲಂ: 42 ಕರ್ನಾಟಕ ಕಾರಾಗೃಹ (ತಿದ್ದುಪಡಿ) ಕಾಯ್ದೆ-2022 ಮತ್ತು 20(b)(ii)(A) NDPS Act 1985 ಅನ್ವಯ ಪ್ರಕರಣ ದಾಖಲಿಸಿಕೊಂಡು ಆರೋಪಿಗಳು ಎಸೆದಂತ ವಸ್ತುಗಳಾದ ಮೊಬೈಲ್ ಫೋನ್ , ಗಾಂಜಾ ಹಾಗೂ ಸಿಗರೇಟ್ ಅನ್ನು ವಶಪಡಿಸಿಕೊಂಡು. ತನಿಖೆ ಮುಂದುವರಿಸಿ. ಈ ಪ್ರಕರಣದ ತನಿಖೆ ನಡೆಸಲು ಎಸ್ ಪಿ. ನಿಖಿಲ್ ಬಿ ಹಾಗೂ ಅಡಿಷನಲ್ ಎಸ್ ಪಿ. ಎ.ಜಿ. ಕಾರಿಯಪ್ಪನವರ ಮಾರ್ಗದರ್ಶನದಂತೆ ಆರೋಪಿಗಳನ್ನು ಪತ್ತೆ ಹಚ್ಚಿ.
ದಿನಾಂಕ 07.026ರಂದು ಆರೋಪಿಗಳಾದ, ಎ1) ಮೊಹ್ಮದ್ ಖಲಂದರ್ @ ಕಲ್ಲು ಬಿನ್ ಸರ್ದಾರ್ ಶರೀಫ್, 23 ವರ್ಷ, ಸೂಳೆಬೈಲ್, ಶಿವಮೊಗ್ಗಎ3) ಅಬ್ದುಲ್ ಮುನಾಫ್ @ ಮುನ್ನಾ ಬಿನ್ ಶೇಖ್ ಮುಸ್ತಾಫ್, 30 ವರ್ಷ, ವಾಸ ಬೊಮ್ಮನಕಟ್ಟೆ ಶಿವಮೊಗ್ಗಎ4) ವಿಜಯ್ ಬಿನ್ ಶಂಕರ್, 19 ವರ್ಷ, ವಾಸ ಕೋಟೆಗಂಗೂರು ಶಿವಮೊಗ್ಗ ಎ5) ಪರಶುರಾಮ್ ಬಿನ್ ನಾಗೆಂದ್ರ, 19 ವರ್ಷ, ವಾಸ ಬೊಮ್ಮನಕಟ್ಟೆ ಶಿವಮೊಗ್ಗ ರವರನ್ನು ದಸ್ತಗಿರಿ ಮಾಡಿ ಕೃತ್ಯಕ್ಕೆ ಉಪಯೋಗಿಸಿದ ಒಂದು ಬೈಕನ್ನು ಸಹ ವಶಕ್ಕೆ ಪಡಿಸಿಕೊಂಡು ಸದರಿ 04 ಜನ ಆರೋಪಿಗಳ ವಿರುದ್ಧ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಲಯವು ನ್ಯಾಯಾಂಗ ಬಂದನಕ್ಕೆ ಆದೇಶಿಸಿರುತ್ತದೆ.
ಈ ಪ್ರಕರಣದ ಕಾರ್ಯಾಚರಣೆಯಲ್ಲಿ, ತುಂಗಾನಗರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರವರಾದ ಶ್ರೀ ಕೆ.ಟಿ.ಗುರುರಾಜ್, ಪಿಎಸ್ಐ ರವರಾದ ಶ್ರೀ ಗಾದಿಲಿಂಗಪ್ಪ ಗೌಡರ್, ಶ್ರೀ ರಘುವೀರ, ಶ್ರೀಮತಿ ಮಂಜಮ್ಮ ಹಾಗೂ ಠಾಣಾ ಸಿಬ್ಬಂದಿಯವರಾದ ಕರಿಬಸಪ್ಪ, ಅರುಣ್ ಕುಮಾರ್, ಕಿರಣ್ ಕುಮಾರ್, ಹರೀಶ್ ನಾಯ್ಕ್, ತಮ್ಮಣ್ಣ ಜಂಬರಗಿ, ನಾಗಪ್ಪ ಅಡಿವೆಪ್ಪನವರ್, ಬಸವರಾಜ ಪಾಳೇದ್ ಭಾಗಿಯಾಗಿದ್ದರು.


More Stories
ಜೈಲಿನ ಖೈದಿಗಳ ಬಳಿ ವರ್ಷದಿಂದ ವರ್ಷಕ್ಕೆ ಮೊಬೈಲ್ಗಳ ಸಂಖ್ಯೆಯಲ್ಲಿ ಹೆಚ್ಚಳ : 410 ವಿವಿಧ ಕಂಪನಿಯ ಮೊಬೈಲ್ ಪತ್ತೆ..!!
ಕಸ್ತೂರಿ ರಂಗನ್ ವರದಿ ಕುರಿತು ತೀರ್ಥಹಳ್ಳಿಯಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕೊಟ್ಟ ಸೂಚನೆಯಾದರೂ ಏನು ..?
ಸಂಗ್ರ ಹ ಮಾಡಲಾಗಿರುವ ಅಕ್ರಮ ಮರಳನ್ನು ತ್ವರಿತವಾಗಿ ವಿಲೇಮಾಡಿ : ಪ್ರಭುಲಿಂಗ ಕವಳಿಕಟ್ಟಿ