City Rounds News

Kannada News Website

ಸುಲ್ತಾನ್ ಗೋಲ್ಡ್ : ಕ್ಲಿನ್ ಬೋಲ್ಡ್…!!

 

ಶಿವಮೊಗ್ಗ : ಮಹಾನಗರ ಪಾಲಿಕೆ  ಅಸ್ತಿ ಸುಲ್ತಾನ್ ಗೋಲ್ಡ್  ಬಿಲ್ಡಿಂಗ್  ಪಾಲಿಕೆ ವಶಕ್ಕೆ..

ಸುಮಾರು ವರ್ಷಗಳಿಂದ ಮಹಾನಗರ ಪಾಲಿಕೆಯ ಆಸ್ತಿಯನ್ನು ಶಿವಮೊಗ್ಗದ ಮಾಜಿ ಮೇಯರ್ ಹಾಗೂ ಮಾಜಿ ಮಹಾನಗರ ಪಾಲಿಕೆ ಸದಸ್ಯರಾದ ಮರಿಯಪ್ಪನವರು ಆಕ್ರಮಿಸಿಕೊಂಡು ಅನುಭವಿಸಿಕೊಂಡು ಬರುತ್ತಿದ್ದರು.

ಈ ವಿಚಾರವಾಗಿ ಶಿವಮೊಗ್ಗ ನಾಗರಿಕರ ವೇದಿಕೆ ವತಿಯಿಂದ ನ್ಯಾಯಾಲಯದಲ್ಲಿ ಕೇಸು ದಾಖಲಿಸಿ ಹೋರಾಟ ನಡೆಸಲಾಗುತ್ತಿತ್ತು.

ದಾಖಲಾತಿಗಳು ಇಲ್ಲದೆ ಅಕ್ರಮವಾಗಿ ಕಟ್ಟಡವನ್ನು ಕಟ್ಟಿಕೊಂಡು. ಸುಲ್ತಾನ್ ಗೋಲ್ಡ್ ಮಳಿಗೆಗೆ ಬಾಡಿಗೆಯಾಗಿ ನೀಡಿದಂತ ಮರಿಯಪ್ಪನವರು, ಸಾರ್ವಜನಿಕರ ಆಸ್ತಿಯನ್ನು, ಅಂದರೆ ಮಹಾನಗರ ಪಾಲಿಕೆಯ ಆಸ್ತಿಯನ್ನು ಕಬ್ಜಾ ಮಾಡಿಕೊಂಡು ಅನುಭವಿಸಿಕೊಳ್ಳುತ್ತಿದ್ದರು.

ಅಕ್ರಮವಾಗಿ ಪಾಲಿಕೆ ಆಸ್ತಿಯನ್ನು ಮರಿಯಪ್ಪನವರು ಆಕ್ರಮಿಸಿಕೊಂಡಿದ್ದಾರೆ ಎಂದು ಶಿವಮೊಗ್ಗ ನಾಗರಿಕರ ವೇದಿಕೆ ವತಿಯಿಂದ ನ್ಯಾಯಾಲಯದಲ್ಲಿ ಕೇಸನ್ನು ದಾಖಲಿಸಿ ನಿರಂತರ ಹೋರಾಟ ನಡೆಸಿದ ಪ್ರತಿಫಲವಾಗಿ ನ್ಯಾಯಾಲವು ದಾಖಲಾತಿಗಳನ್ನು ಪರಿಶೀಲಿಸಿ ಈ ಆಸ್ತಿ ಮಹಾನಗರ ಪಾಲಿಕೆಯ ಆಸ್ತಿ ಎಂದು ಘೋಷಣೆ ಮಾಡಿ  ಸ್ವತ್ತನ್ನು ಮಹಾನಗರ ಪಾಲಿಕೆಯ ವಶಕ್ಕೆ ಪಡೆದುಕೊಳ್ಳಬೇಕೆಂದು ಆದೇಶ ನೀಡಿತ್ತು.

ಅದರಂತೆ ಇಂದು ದಿನಾಂಕ 04 -02 -2026 ಬುಧವಾರ ಸಾಯಂಕಾಲ 7:00ಗೆ  ಮಹಾನಗರ ಪಾಲಿಕೆ ಆಯುಕ್ತರಾದ ಮಾಯಣ್ಣಗೌಡರ ಮುಂದಾಳತ್ವದಲ್ಲಿ. ಅಧಿಕಾರಿಗಳ ಜೊತೆ ಹಾಗೂ ಪೊಲೀಸ್ ಇಲಾಖೆಯ ಸಹಾಯ ಪಡೆದು ಸುಲ್ತಾನ್ ಗೌಡಕ್ಕೆ ಪಾಲಿಕೆಯ ಆಸ್ತಿ ಎಂದು ಬಿತ್ತಿ ಪತ್ರವನ್ನು ಅಂಟಿಸಿ. ಕಟ್ಟಡವನ್ನು ಖಾಲಿ ಮಾಡಲು ಎರಡು ತಿಂಗಳ ಕಾಲ ಗಡುವು ನೀಡಿ ನೋಟಿಸ್ ಜಾರಿ ಮಾಡಲಾಗಿದೆ.