
ಶಿವಮೊಗ್ಗ: ಭಾರತದ ಸಂವಿಧಾನದಂತೆ ಯಾವುದೇ ರಾಜ್ಯದ ವಿಧಾನ ಮಂಡಲ ಅಧಿವೇಶನದಲ್ಲಿ ರಾಜ್ಯ ಸಚಿವ ಸಂಪುಟ ಸಿದ್ಧಪಡಿಸುವ ಭಾಷಣವನ್ನು ರಾಜ್ಯಪಾಲರು ಮಾಡಬೇಕಾಗುತ್ತದೆ . ಆದರೆ ನಿನ್ನೆ ದಿನ ಕರ್ನಾಟಕದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ರವರು ಸಲ್ಲದ ಕಾರಣ ನೀಡಿ, ತಮ್ಮ ಭಾಷಣವನ್ನು ಮೊಟೊಕುಗಳಿಸಿ ಸಂವಿಧಾನಕ್ಕೆ ಅಪಮಾನವೆಸಗಿದ್ದಾರೆ.
ಈ ವಿಷಯವಾಗಿ ಶಿವಮೊಗ್ಗ ನಗರ ಯುವ ಕಾಂಗ್ರೆಸ್ ವತಿಯಿಂದ ರಾಜ್ಯಪಾಲ ಹಠಾವೋ – ಕರ್ನಾಟಕ ಬಚಾವೋ ಆಂದೋಲನವನ್ನು ಮಹಾನಗರ ಪಾಲಿಕೆ ಆವರಣದ ಒಳಭಾಗದಲ್ಲಿ ಕಾಂಗ್ರೆಸ್ ಮುಖಂಡರುಗಳ ರಾಜ್ಯ ರಾಜ್ಯಪಾಲರ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಆಂದೋಲನವನ್ನು ನಡೆಸಲಾಯಿತು. ರಾಜ್ಯಪಾಲರು ಸಂವಿಧಾನದ ಅಡಿಯಲ್ಲಿ ಕೆಲಸ ಮಾಡುತ್ತಾರೆ ಹೊರತು ಕೇಂದ್ರ ಸರ್ಕಾರದ ಅಡಿಯಲ್ಲಿ ಅಲ್ಲ. ನಿನ್ನೆ ದಿನ ರಾಜ್ಯಪಾಲರು ನಡೆದುಕೊಂಡಿರುವ ರೀತಿ ಅವರು ಕೇಂದ್ರ ಸರ್ಕಾರದ ಬಾಲ ಬುಡುಕರೆನ್ನುವುದನ್ನು ಸಾಬೀತುಪಡಿಸಿದೆ. ವರ್ಷದ ಮೊದಲ ಜಂಟಿ ಅಧಿವೇಶನವನ್ನು ಉದ್ದೇಶಿಸಿ ರಾಜ್ಯಪಾಲರು ಭಾಷಣ ಮಾಡುವುದು ರೂಡಿ .ಈ ಭಾಷಣದಲ್ಲಿ ಆಕ್ಷೇಪಾರ್ಹ ಸಾಲುಗಳಿವೆ ಎಂದು ಕ್ಷುಲ್ಲಕ ಕಾರಣ ನೀಡಿ ಆಡಳಿತಾರೂಢ ಸರ್ಕಾರವನ್ನು ಇಕಟ್ಟಿಗೆ ಸಿಲ್ಕಿಸುವ ಕೆಲಸವನ್ನು ಸ್ವತಃ ರಾಜ್ಯಪಾಲರೇ ಮಾಡಿರುವುದು ಇದೇ ಮೊದಲ ಬಾರಿ. ಇಂತಹ ನಡೆ ಸಂವಿಧಾನಕ್ಕೆ ಮಾರಕವಾಗಿದೆ ರಾಜ್ಯಪಾಲರು ಭಾಷಣ ಮಾಡುವ ಮೂಲಕ ಸದನದ ಗಾಂಭೀರ್ಯವನ್ನು ಕಾಪಾಡಬೇಕು ಆದರೆ ಅವರ ನಡೆಯೇ ಸದನದಲ್ಲಿ ಗದ್ದಲಕ್ಕೆ ಕಾರಣವಾಗಿದೆ.
ಇಂತಹ ರಾಜ್ಯಪಾಲರು ನಮಗೆ ಬೇಡ ಕೂಡಲೇ ರಾಷ್ಟ್ರಪತಿಗಳು ಕರ್ನಾಟಕದ ರಾಜ್ಯಪಾಲ ಥಾವರ್ವಾ ಚಂದ್ಪ ಗೆಹ್ಲೋಟ್‌ರವರನ್ನು ಕರೆಸಿಕೊಳ್ಳಬೇಕು. ಶಿವಮೊಗ್ಗ ನಗರ ಯುವ ಕಾಂಗ್ರೆಸ್ ವತಿಯಿಂದ ರಾಜ್ಯಪಾಲ ಹಟಾವೋ ಕರ್ನಾಟಕ ಬಚಾವೋ ಆಂದೋಲನ ನಡೆಸುತ್ತಿದೇವೆ ಈ ಕೂಡಲೇ ಅವರನ್ನು ವಾಪಸ್ ಕರೆಸಿಕೊಳ್ಳದಿದ್ದರೆ ಯುವ ಕಾಂಗ್ರೆಸ್ ಉಗ್ರ ಪ್ರತಿಭಟನೆ ನಡೆಸುತ್ತದೆ ಎಂದು ಈ ಮೂಲಕ ರಾಷ್ಟ್ರಪತಿಗಳಿಗೆ ತೀಳಿಸುತ್ತಿದೆವೆ ಎಂದು ರಾಜ್ಯಪಾಲರ ವಿರುದ್ದ ಘೋಷಣೆ ಕೂಗುತ್ತ ತಮ್ಮ ಆಕ್ರೋಶವನ್ನು ವ್ಯಕ್ತ ಪಡಿಸಿದರು.
ಈ ಆಂದೋಲನದಲ್ಲಿ ಶಿವಮೊಗ್ಗ ಜಿಲ್ಲಾದ್ಯಕ್ಷ ಹರ್ಷಿತ್ ಗೌಡ, ಚರಣ್ ಜೆ.ಶೆಟ್ಟಿ, ಅಬ್ದುಲ್ ಸತರ್, ನಿಖಿಲ್, ಅನಿಲ್ ಪಟೀಲ್, ತೌಷಿಕ್, ಬಾಬು, ಮಲಗೊಪ್ಪ ಶಿವು, ಆಕಾಶ್, ಅಶೋಕ್, ರವಿಜಿ.ವಿ., ವಿಷ್ಣು ಕುಮಾರ್, ಚಂದ್ರೋಜಿ ರಾವ್, ಯೋಗೆಶ್, ಲಿಂಗರಾಜು, ಅಶೋಕ್ ಟಿ. ಡಿ ಮುಂತಾದವರು ಪಾಲುಗೊಂಡಿದ್ದರು..


More Stories
ದೀಪಾವಳಿ ಹಬ್ಬದ ಪ್ರಯುಕ್ತ ಕಾಂಗ್ರೆಸ್ ಸರ್ಕಾರದಿಂದ ಸಾರ್ವಜನಿಕರಿಗೆ ಗಿಫ್ಟ್..?
ಅಪೌಷ್ಟಿಕತೆ ಮುಕ್ತಗೊಳಿಸಿ-ಅಂಗನವಾಡಿ ಕಟ್ಟಡಗಳ ಕಾಮಗಾರಿ ಪೂರ್ಣಗೊಳಿಸಿ-ಡಿಸಿ ಸೂಚನೆ..
ನಮ್ಮೂರ ನಾಡಹಬ್ಬ ಶಿವಮೊಗ್ಗ ದಸರಾ ಕಾರ್ಯಕ್ರಮಗಳು…