City Rounds News

Kannada News Website

ಭ್ರಷ್ಟಾಚಾರಕ್ಕೆ ಕಡಿವಾಣ : ಸಹಿಸಲಾಗದ ಕಾಂಗ್ರೆಸ್‌ ಶಾಸಕರುಗಳು…!

ಶಿವಮೊಗ್ಗ: ಕೇಂದ್ರ ಸರ್ಕಾರದ ವಿರುದ್ದ ಸಿದ್ದಪಡಿಸಿದಂತಹ ಭಾಷಣದ ಪ್ರತಿಯನ್ನು ಓದಲು ನಿರಾಕರಿಸಿದ ರಾಜ್ಯಪಾಲರಾದ ಥಾವರ್‌ ಚಂದ್‌ ಗೆಹ್ಲೋಟ್‌ ವಿರುದ್ಧ. ಹಾಗೂ ಭ್ರಷ್ಟಾಚಾರ ನಡೆದಂತ ಹಲವಾರು ಯೋಜನೆಗಳನ್ನು ಕೇಂದ್ರ ಸರ್ಕಾರ ಮಾರ್ಪಾಡು ಮಾಡುತ್ತಿರುವಂತ ಯೋಜನೆಗಳಲ್ಲಿ ಒಂದಾದ “ವಿಬಿ ರಾಮ್‌ ಜಿ ಯೋಜನೆಯ ವಿಚಾರವಾಗಿ ಕಾಂಗ್ರೆಸ್ ನಾಯಕರು ಅಸಭ್ಯವಾಗಿ ವರ್ತಿಸಿದ ನಿರ್ಣಯವನ್ನು ಸಂಸದ ಬಿ.ವೈ.ರಾಘವೇಂದ್ರ ರವರು ಖಂಡಿಸಿದ್ದಾರೆ.

ಇಂದು ಶಿವಮೊಗ್ಗದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಧಾನ ಮಂಡಲದ ಅಧಿವೇಶನದಲ್ಲಿ ರಾಜ್ಯ ಸಂಪುಟ ಸಿದ್ದಪಡಿಸಿದಂತಹ ರಾಜ್ಯಪಾಲರ ಭಾಷಣದ ಪ್ರತಿಯಲ್ಲಿ ಕೇಂದ್ರ ಸರ್ಕಾರದ ವಿರುದ್ದ ಹಲವಾರು ಟೆಕೇಗಳ ಇರುವುದನ್ನು ಕಂಡು ಕಾರಣ ಹೇಳಿ ಭಾಷಣವನ್ನು ಮೊಟಕುಗೊಳಿಸಿದ ರಾಜ್ಯಪಾಲರಾದ ಥಾವರ್‌ ಚಂದ್‌ ಗೆಹ್ಲೋಟ್‌ ರವರನ್ನು ಕಾಂಗ್ರೆಸ್‌ ಶಾಸಕರುಗಳು ಅಡ್ಡಗಟ್ಟಿ ಹಲ್ಲೆಮಾಡಲು ಮುಂದಾದಂತಹ ಕೈ ಶಾಸಕರುಗಳು ತಮ್ಮ ವರ್ತನೆಯನ್ನು ಸರಿಪಡಿಸಿಕೋಳ್ಳಬೇಕು, ಹಾಗೂ ಇವರ ವಿರುದ್ದ ಸ್ಪಿಕರ್‌ರವರು ಕ್ರಮಕ್ಯಗೊಳ್ಳ ಬೇಕು ಎಂದು ಬಿ.ವೈ. ರಾಘವೇಂದ್ರ ಕಾಂಗ್ರೆಸ್‌ ಪಕ್ಷದ ಶಾಸಕರುಗಳ ದೂಂಡವರ್ತನೆಯನ್ನು ಖಂಡಿಸಿದರು.

“ರೈತರ ಪರವಾಗಿ ನಿಲ್ಲದ ಸರ್ಕಾರ  ಕಾಂಗ್ರೆಸ್‌”

ಕಾಂಗ್ರೆಸ್‌ ಸರ್ಕಾರ ರೈತರ ಪರ ಸರ್ಕಾರ ಎಂದು ಹೇಳಿಕೊಳ್ಳುವ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ರೈತರು ಬೆಳೆದ ಬೆಳೆಗಳಿಗೆ ಸರಿಯಾದ ಬೆಲೆ ನೀಡದೆ ರೈತರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಇನ್ನು ಮಳೆ ಹನಿಯಿಂದ ಗೋಡೆ ಕುಸಿದು ಮನೆ ಕಳೆದುಕೊಂಡಂತಹ ರಾಜ್ಯದ ಸಾವಿರಾರು ಕುಟುಂಬಗಳಿಗೆ ಸರಿಯಾದ ರೀತಿಯಲ್ಲಿ ಪರಿಹಾರ ನೀಡದೆ, ಇಂದಿಗೂ ಮನೆ ಕಳೆದುಕೊಂಡಂತಹ ನಿರಾಶ್ರಿತರು ಪಾರಿಹಾರದ ಹಣಕ್ಕಾಗಿ ಕಚೇರಿಗೆ ಅಲೆದಾಡಿ ಸಾಕಾಗಿದ್ದಾರೆ. ಯಡಿಯೂರಪ್ಪನವರು ಮುಖ್ಯಮಂತ್ರಿಗಳಾಗಿದ್ದಾ ಸಮಯದಲ್ಲಿ ಮಳೆ ಹಾನಿಯಿಂದ ಮನೆ ಕಳೆದು ಕೊಂಡವರಿಗೆ ಪಾರಿಹಾರವಾಗಿ ನಿಡುತ್ತಿದ 1 ಲಕ್ಹಷದಿಂದ ಹಣವನ್ನು 5ಲಕ್ಷಕ್ಕೆ ಹೆಚ್ಚಿನ ಮೊತ್ತವನ್ನು ನಿಡುವಂತೆ ರಾಜ್ಯದ ಜನತೆಗೆ ಅನೂಕೂಲ ಮಾಡಿದ್ದರು ಆದರೆ ಅಧಿಕಾರಕ್ಕೆ ಬಂದಂತಹ ಕಾಂಗ್ರೆಸ್‌ ಸರ್ಕಾರ ಮಾಶಳೆ ಹಾನಿ ಪಾರಿಹಾರವನ್ನು 5ಲಕ್ಷದಿಂದ 1.5 ಲಕ್ಷಕ್ಕೆ ಕಡಿಮೆ ಮಾಡಿದಲ್ಲದೆ ಕಳೆದರೆಡು ವರ್ಷದಿಂದ ಪಾರಿಹಾರವನ್ನು ಸದರಿಯಾದ ರೀತಿಯಲ್ಲಿ ನಿಡುವಲ್ಲಿ ವಿಫಲವಾಗಿದೆ ಎಂದು ಕಾಂಗ್ರೆಸ್‌ ಸರ್ಕಾರದ ಆಡಳಿತವನ್ನು ಟಿಕೀಸಿದರು. ರಾಜ್ಯದ ಜನತೆ ಕಾಂಗ್ರೆಸ್ ಸರ್ಕಾರದ ಆಡಳಿತ ಅವಧಿಯಲ್ಲಿ ನಡೆಯುತ್ತಿರುವಂತ ಭ್ರಷ್ಟಾಚಾರವನ್ನು ನೋಡಿಕೊಂಡು ಸುಮ್ಮನೆ ಕೂತಿದ್ದಾರೆ ಎಂದರೆ ಮುಂದಿನ ಚುನಾವಣೆಯಲ್ಲಿ ಇದಕ್ಕೆಲ್ಲ ಉತ್ತರ ನೀಡಲು ರಾಜ್ಯದ ಜನತೆ ಸಿದ್ಧರಿದ್ದಾರೆ ಎಂದು ಹೇಳಿದರು.

“ವಿಬಿ ರಾಮ್‌ ಜಿ” ಯೋಜನೆಯ ವಿರುದ್ದ ಅಪಪ್ರಚಾರ  ಮಾಡುತ್ತಿದೆ ರಾಜ್ಯ ಸರ್ಕಾರ “

ದೇಶದ ಹಲವಾರು ರಾಜ್ಯಗಳಲ್ಲಿ ನಡೆದಂತ ನರೇಗಾ ಯೋಜನೆಯ ಭ್ರಷ್ಟಾಚಾರ ವಿಚಾರವಾಗಿ ಕೇಂದ್ರ ಸರ್ಕಾರ “ವಿಬಿ ರಾಮ್‌ ಜಿ” ಯೋಜನೆಯನ್ನು ಸಿದ್ಧಪಡಿಸಿದ್ದು ಈ ಯೋಜನೆಯ ವಿರುದ್ಧ ಕಾಂಗ್ರೆಸ್ ಸರ್ಕಾರ ಅಪಪ್ರಚಾರ ಮಾಡುತ್ತಾ ಹಾಗೂ ರಾಜ್ಯದ ಜನತೆಗೆ ಈ ವಿಚಾರವಾಗಿ ಸುಳ್ಳು ಆರೋಪಗಳನ್ನು ಕೇಂದ್ರ ಸರ್ಕಾರದ ವಿರುದ್ಧ ಮಾಡುತ್ತಿದೆ ಎಂದು ರಾಘವೇಂದ್ರ ದೂರಿದರು. ರಾಜ್ಯದಲ್ಲಿ ರಾಜ್ಯ ಸರ್ಕಾರದ ಪಂಚ ಗ್ಯಾರಂಟಿಗಳಲ್ಲಿ ಕೆಲವು ಗ್ಯಾರಂಟಿ ರಾಜ್ಯದ ಜನತೆಗೆ ಸಿಗುವಲ್ಲಿ ವಿಫಲವಾಗಿದ್ದು ಸರ್ಕಾರ ನಡೆಸಲು ಬೊಕ್ಕಸದಲ್ಲಿ ಹಣ ವಿಲ್ಲದೆ ಸುಳ್ಳುಪಳ್ಳುಗಳನ್ನು ಹೇಳಿಕೊಂಡು ಸರ್ಕಾರ ರಾಜ್ಯದ ಜನತೆಯನ್ನು ದಿಕ್ಕು ತಪ್ಪಿಸುವಂತ ಕೆಲಸವನ್ನು ಮೊದಲು ಬಿಡಬೇಕು, ಎಂದು ರಾಜ್ಯ ಸರ್ಕಾರವನ್ನು ಹಾಗೂ ಕಾಂಗ್ರೆಸ್ ನ ಕೆಲ ಶಾಸಕರ ವಿರುದ್ಧ ಹೌಹಾರಿದರು.

ಈ ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರಾದ ಎನ್. ಕೆ. ಜಗದೀಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಶಿವರಾಜ್ ,ಹರಿಕೃಷ್ಣ , ಮಾಲ್ತೇಶ್ʼ ಚಂದ್ರಶೇಖರ್ ಎಸ್, ಸಂತೋಷ್ ಬಳ್ಳಕೆರೆ,ಹಾಗೂ ಮುಂತಾದವರು ಉಪಸ್ಥಿತರಿದ್ದರು.