
ಕರ್ನಾಟಕದ ಐಟಿ-ಬಿಟಿ ಸಚಿವರಾದ ಪ್ರಿಯಾಂಕ ಖರ್ಗೆರವರು, ಚಿತ್ತಾಪುರ ಚುನಾವಣೆಯಲ್ಲಿ. ಗ್ಯಾರಂಟಿ ಆಮಿಷ ಹಾಗೂ ನಕಲಿ ಸರ್ಟಿಫಿಕೇಟ್ ಆರೋಪಗಳ ವಿಚಾರವಾಗಿ ಅಕ್ರಮಗಳು ನಡೆದಿದೆ ಎಂದು ಪ್ರಿಯಾಂಕ್ ಖರ್ಗೆಗೆ ಸುಪ್ರೀಂ ಕೋರ್ಟ್ ಡಬಲ್ ನೋಟಿಸ್ ಜಾರಿ ಮಾಡಿದೆ.
ಚಿತ್ತಾಪುರದಲ್ಲಿ ಚುನಾವಣಾ ಅಕ್ರಮಗಳಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಲಾಗಿದ್ದು, ಗ್ಯಾರಂಟಿ ಯೋಜನೆಗಳ ಆಮಿಷ ನೀಡಿ ಚುನಾವಣೆಯಲ್ಲಿ ಮತದಾರರಿಂದ ಮತ ಪಡೆದುಕೊಂಡಿದ್ದಾರೆ ಎಂಬ ದೂರಿನ ಅನ್ವಯ ಹಾಗೂ ನಕಲಿ ಸರ್ಟಿಫಿಕೇಟ್ ಬಳಸಿ ಚುನಾವಣೆಯಲ್ಲಿ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ಹೇಳಲಾಗಿದೆ. ಚುನಾವಣಾ ಕಾಯ್ದೆಗಳ ಉಲ್ಲಂಘನೆಯಾಗಿ ಚಿತ್ತಾಪುರ ಕ್ಷೇತ್ರದಲ್ಲಿ ಅನೈತಿಕ ಕಾರ್ಯತಂತ್ರಗಳನ್ನು ಅಳವಡಿಸಿಕೊಂಡಿದ್ದಾರೆ ಎಂದು ದೂರುಗಳಿವೆ. ಗ್ಯಾರಂಟಿ ಯೋಜನೆಗಳನ್ನು ಮತದಾರರಿಗೆ ಆಕರ್ಷಣೆಯ ಆಮಿಷವಾಗಿ ಬಳಸಿ ಚುನಾವಣೆ ಗೆದ್ದಿದ್ದಾರೆ ಎಂಬ ಆರೋಪವೂ ಇದರಲ್ಲಿ ಸೇರಿದೆ.

ನೋಟಿಸ್ ಸುಪ್ರೀಂ ಕೋರ್ಟ್‌ನಿಂದ ಜಾರಿಗೊಳಿಸಲಾಗಿದ್ದು, ಚುನಾವಣಾ ದೂರುಗಳ ಸಂಬಂಧದಲ್ಲಿ ಈ ನ್ಯಾಯಾಲಯವೇ ಪ್ರಮುಖ ಪಾತ್ರ ವಹಿಸಿದೆ. ಪ್ರಿಯಾಂಕ್ ಖರ್ಗೆ ವಿರುದ್ಧ ನಕಲಿ ಸರ್ಟಿಫಿಕೇಟ್ ಆರೋಪವು ಚಿತ್ತಾಪುರ ವಿಧಾನಸಭಾ ಚುನಾವಣೆಯಲ್ಲಿ ಅವರು ಸಲ್ಲಿಸಿದ ಜಾತಿ ಪ್ರಮಾಣಪತ್ರ (ಕ್ಯಾಸ್ಟ್ ಸರ್ಟಿಫಿಕೇಟ್) ಸುಳ್ಳು ಎಂದು ಆರೋಪಿಸಲಾಗಿದೆ. ಈ ಆರೋಪದ ಪ್ರಕಾರ, ಪ್ರಿಯಾಂಕ್ ಖರ್ಗೆ ತಮ್ಮ ಜಾತಿಯನ್ನು ತಪ್ಪಾಗಿ ಘೋಷಿಸಿ ನಕಲಿ ದಾಖಲೆ ಬಳಸಿ ಚುನಾವಣೆ ನಡೆಸಿದ್ದಾರೆ ಎಂದು ದೂರುದಾರರು ದೂರಿನ ಮೇರೆಗೆ ಹಾಗೂ ಇದು ಚುನಾವಣಾ ಕಾಯ್ದೆಗಳ ಉಲ್ಲಂಘನೆಗೆ ಕಾರಣವಾಗಿದೆ ಎಂದು ಸುಪ್ರೀಂ ಕೋರ್ಟ್ ಪ್ರಿಯಾಂಕ ಖರ್ಗೆ ವಿರುದ್ಧ ಡಬಲ್ ನೋಟಿಸ್ ಜಾರಿ ಮಾಡಿದೆ..

More Stories
ಸಿಎಲ್ 2 ಮಧ್ಯದಂಗಡಿಗಳಿಗೆ ನಿಯಮಗಳೇ ಇಲ್ಲ : ಮಾಂಸಾಹಾರಿ ಹೋಟೆಲ್ಗಳಲ್ಲಿ ಮಧ್ಯ ಮಾರಾಟಕ್ಕೆ ಕಾನೂನಿನ ಭಯವೇ ಇಲ್ಲ … ಪ್ರತಿನಿತ್ಯ ಅಪಘಾತಗಳೆ …. ಸಾರ್ವಜನಿಕರ ಜೀವಗಳಿಗೆ ಬೆಲೆಯೇ ಇಲ್ಲ …
ಯುವ ಪ್ರೇಮಿಗಳೇ ಇವನ ಟಾರ್ಗೆಟ್…. ಮಂಜುನಾಥನಾಯ್ಕ ಇವನ ಹಿಂದಿದೆಯೇ ದೊಡ್ಡ ರಾಬರಿ ಗ್ಯಾಂಗ್ …?
ಜನಪ್ರತಿನಿಧಿಗಳ ಕರೆಗೆ ಅಧಿಕಾರಿಗಳು ಡೋಂಟ್ ಕೇರ್ :ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜನಪ್ರತಿನಿಧಿಗಳ ಆಕ್ರೋಶ..!!