
ಶಿವಮೊಗ್ಗ: ನಗರದ ಅಲ್ಲಮ್ಮ ಪ್ರಭು ಫ್ರೀಡಂ ಪಾರ್ಕ್, ಪ್ಲಾಸ್ಟಿಕ್ ಪಾರ್ಕ್ ಆಗಿ ಬದಲಾವಣೆಯಾಗುತ್ತಿದೆ. ಇದಕ್ಕೆ ಕಾರಣ ಮಹಾನಗರ ಪಾಲಿಕೆಯ ಆರೋಗ್ಯ ನಿರೀಕ್ಷಕರಾದ ಪ್ರಭುರಾಜ್ ರವರ ನಿರ್ಲಕ್ಷತನ ಹಾಗೂ ಬೇಜವಾಬ್ದಾರಿ ತನದ ಕರ್ತವ್ಯವೇ ಮುಖ್ಯ ಕಾರಣವಾಗಿದೆ.
ನಗರದ ಹಳೆ ಜೈಲು ಹಾಗೂ ರಾಜೇಂದ್ರ ನಗರ, ವಿನೋಬನಗರ ಸುತ್ತಮುತ್ತಲಿನ ತ್ಯಾಜ್ಯ ವಸ್ತುಗಳನ್ನು ಹಾಗೂ ಪ್ಲಾಸ್ಟಿಕ್ ನಂತಹ ತ್ಯಾಜ್ಯ ವಸ್ತುಗಳನ್ನು ಕಸ ತುಂಬಿಕೊಂಡು ಹೋಗುವ ಆಟೋ ಹಾಗೂ ಲಾರಿಗಳಲ್ಲಿ ತುಂಬಿಕೊಂಡು,ಅಲ್ಲಮ ಪ್ರಭು ಉದ್ಯಾನವನದ ಹಳೆ ಜೈಲ್ ಕಟ್ಟಡದ ಹಿಂಭಾಗದಲ್ಲಿ. ತಂದಂತಹ ತ್ಯಾಜ್ಯ ವಸ್ತುಗಳನ್ನು ಪ್ಲಾಸ್ಟಿಕ್ ನಂತಹ ಹಾಗೂ ಹಲವಾರು ರೀತಿಯ ತ್ಯಾಜ್ಯ ವಸ್ತುಗಳನ್ನು ತಂದು. ಕಸದ ರಾಶಿಯನ್ನು ಯಾರಿಗೂ ಕಾಣದಂತೆ ಗಿಡಗಳ ಮಧ್ಯದಲ್ಲಿ ಹಾಕುತ್ತಿದ್ದಾರೆ.
ಈ ರೀತಿಯ ತ್ಯಾಜ್ಯ ವಸ್ತುಗಳನ್ನು ವಿಲೇವಾರಿಯನ್ನು. ಮಹಾನಗರ ಪಾಲಿಕೆ ತ್ಯಾಜ್ಯ ವಸ್ತುಗಳ ಘಟಕವನ್ನು ನಿರ್ಮಿಸಿದ್ದು ಅಂತಹ ಜಾಗದಲ್ಲೇ ನಗರದ ಹಲವಾರು ಬಡಾವಣೆಯ ನಗರಗಳ ವಾರ್ಡ್ಗಳ ತ್ಯಾಜ್ಯ ವಸ್ತುಗಳನ್ನು ಸಂಗ್ರಹಿಸಿ . ಲಾರಿಯ ಮೂಲಕ ಕಸವನ್ನು ಸಂಗ್ರಹಿಸಿ ತ್ಯಾಜ್ಯ ಘಟಕದ ಸ್ಥಳಕ್ಕೆ ಡಂಪಿಂಗ್ ಯಾರ್ಡ್ ಸ್ಥಳಕ್ಕೆ ಹಾಕಬೇಕು.ಈ ರೀತಿಯ ಕಾರ್ಯಗಳಿಗೆಂದೆ ಶಿವಮೊಗ್ಗ ನಗರದ ಸಾರ್ವಜನಿಕರಿಂದ ಕೋಟ್ಯಾಂತರ ರೂಪಾಯಿಗಳು ತೆರಿಗೆ ಹೆಸರಿನಿಂದ ಹಣ ಸಂಗ್ರಹಿಸಲಾಗುತ್ತದೆ.
ಅಲ್ಲಮ ಪ್ರಭು ಉದ್ಯಾನವನ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ಶಿವಮೊಗ್ಗ ನಗರದ ಕಾರಾಗೃಹ (ಹಳೆ ಜೈಲು ), ಶಿವಮೊಗ್ಗದಲ್ಲಿ ಕೇಂದ್ರೀಯ ಕಾರಾಗೃಹವನ್ನು ಸೋಗಾನೆಯಲ್ಲಿ ನಿರ್ಮಿಸಿದ ನಂತರ.ಹಳೆ ಜೈಲನ್ನು ನಗರದ ಸಾರ್ವಜನಿಕರಿಗಾಗಿ ಹಲವಾರು ರೀತಿಯ ಕಾರ್ಯಕ್ರಮಗಳಿಗಾಗಿ. ಹೋರಾಟಗಾರರಿಗಾಗಿ. ಬೆಳಗಿನ ಹಾಗೂ ಸಾಯಂಕಾಲ ವಾಯು ವಿಹಾರಕ್ಕಾಗಿ, ಕ್ರೀಡೆ ಹಾಗೂ ಇನ್ನಿತರ ಸರ್ಕಾರಿ ಕಾರ್ಯಕ್ರಮಗಳನ್ನು ನಡೆಸಲು ಈ ಜಾಗವನ್ನು ಅಲ್ಲಮ್ಮ ಪ್ರಭು ಉದ್ಯಾನವನ ಎಂದು ನಾಮಕರಣ ಮಾಡಿ. ಸಾರ್ವಜನಿಕರ ಹಾಗೂ ಸರ್ಕಾರದ ಅನೇಕ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸಲು ಈ ಜಾಗವನ್ನು ಅಲ್ಲಮ ಪ್ರಭು ಫ್ರೀಡಂ ಪಾರ್ಕ್ ಎಂದು ಅನುಮೊದಿಸಲಾಯಿತು.
ಅಲ್ಲಮ ಪ್ರಭು ಉದ್ಯಾನವನದಲ್ಲಿ ಪ್ರತಿದಿನ ಮುಂಜಾನೆ ಹಾಗೂ ಸಾಯಂಕಾಲ ನಗರದ ಹಲವಾರು ವಾರ್ಡ್ ಗಳ ಬಡಾವಣೆಯ ಸಾರ್ವಜನಿಕರು ವಾಕಿಂಗ್, ಕ್ರಿಕೆಟ್, ಯೋಗಾಸನ ಹಾಗೂ ಹಲವಾರು ರೀತಿಯ ಕ್ರೀಡೆಗಳನ್ನು ಮಕ್ಕಳು ಯುವಕರು, ವೃದ್ಧರು ಎಲ್ಲಾ ವಯಸ್ಸಿನವರು ಅಲ್ಲಮ ಪ್ರಭು ಉದ್ಯಾನವನಕ್ಕೆ ಭೇಟಿ ನೀಡುತ್ತಾರೆ .ಅಲ್ಲಮ ಪ್ರಭು ಉದ್ಯಾನವನ ಸುಮಾರು (48 ರಿಂದ 50 )ಎಕ್ಕರೆ ಜಾಗವನ್ನು ಒಳಗೊಂಡಿದ್ದು,ಇದರ ಸುತ್ತಲೂ ತೆಂಗಿನ ಮರ, ಹುಣಸೆ ಮರ, ತೇಗದ ಮರ,ಗಂಧದ ಮರ, ಅರಳಿಮರ, ಹತ್ತಿ ಮರ, ಆಲದ ಮರ,ಮಾವಿನ ಮರ,ಬೇವಿನ ಮರ ಹಲವಾರು ಜಾತಿಯ ಮರಗಳು ಈ 48 ಎಕ್ಕರೆಯ ಜಾಗದ ಸುತ್ತಲೂ ಹಲವಾರು ಸಂಖ್ಯೆಯಲ್ಲಿ ಮರಗಳು ಜೀವಂತವಾಗಿವೆ. ಹಾಗೂ ಪ್ರಾಣಿ ಪಕ್ಷಿಗಳಿಗೆ ಮತ್ತು ಇಲ್ಲಿಗೆ ಬಂದಂತಹ ಜನರಿಗೆ ನೆರಳು ಒಳ್ಳೆಯ ಗಾಳಿ ಒಳ್ಳೆಯ ವಾತಾವರಣ ನೀಡುತ್ತಿವೆ.
ಮಹಾನಗರ ಪಾಲಿಕೆಯ (ಏನು 4-3-10-11-19-09) ವಾರ್ಡ್ಗಳ ಆರೋಗ್ಯ ನಿರೀಕ್ಷಕರಾಗಿ ಕರ್ತವ್ಯ ಸಲ್ಲಿಸುತ್ತಿರುವ ಪ್ರಭುರಾಜ್ ರವರು ಅಲ್ಲಮ ಪ್ರಭು ಉದ್ಯಾನವನದ ಕಸ ವಿಲೇವಾರಿ ಹಾಗೂ ಅಚ್ಚು ಕಟ್ಟಿನ ಮತ್ತು ಇಲ್ಲಿನ ಸಮಸ್ಯೆಗಳ ವಿಚಾರವಾಗಿ ಯಾವುದೇ ರೀತಿಯ ಸಮಸ್ಯೆಗಳು ಬಾರದ ಹಾಗೆ ಉದ್ಯಾನವನಕ್ಕೆ ಬಂದಂತಹ ಸಾರ್ವಜನಿಕರಿಗೆ ಹಾಗೂ ಉದ್ಯಾನವನದಲ್ಲಿರುವಂತಹ ಮರಗಳು ಗಿಡಗಳು, ಯಾವುದೇ ರೀತಿಯ ಹಾನಿ ಉಂಟಾಗದ ಹಾಗೆ ಹಾಗೂ ಸುತ್ತಮುತ್ತಲಿನ ಪರಿಸರ ಹಾಳಾಗದ ಹಾಗೆ ಸುರಕ್ಷತೆಯ ವಿಚಾರದಲ್ಲಿ ಹಾಗೂ ಆರೋಗ್ಯದ ವಿಚಾರದಲ್ಲಿ ಪ್ರಾಮುಖ್ಯತೆ ನೀಡುವಂತಹ ಕರ್ತವ್ಯವನ್ನು ನಿರ್ವಹಿಸಬೇಕಾದಂತಹ ಆರೋಗ್ಯ ನಿರೀಕ್ಷಕ ಪ್ರಭು ರಾಜ್ ಇವರ ಕರ್ತವ್ಯ ಲೋಪದಿಂದ, ಕರ್ತವ್ಯ ನಿರ್ಲಕ್ಷತನದಿಂದ ಇಂದು ಫ್ರೀಡಂ ಪಾರ್ಕಿನ, ಜೈಲು ಕಟ್ಟಡದ ಹಿಂಭಾಗದಲ್ಲಿ ಕಸದ ರಾಶಿಯನ್ನು ಹಾಗೂ ಪ್ಲಾಸ್ಟಿಕ್ ಇನ್ನಿತರ ಹಲವಾರು ರೀತಿಯ ತ್ಯಾಜ್ಯ ವಸ್ತುಗಳನ್ನು ತಂದು ಕಸದ ರಾಶಿಯನ್ನು ಮಾಡಿದ್ದಾರೆ. ಈ ರೀತಿಯ ತ್ಯಾಜ್ಯ ವಸ್ತುಗಳಾದ ಪ್ಲಾಸ್ಟಿಕ್ ಮತ್ತು ಪರಿಸರ ಹಾನಿಕಾರಕವಾದಂತಹ ಕಸಗಳನ್ನು ಈ ಜಾಗದಲ್ಲಿ ಡಂಪಿಂಗ್ ಯಾರ್ಡ್ ರೀತಿಯಲ್ಲಿ ಫ್ರೀಡಂ ಪಾರ್ಕಿನ ಸ್ಥಳವನ್ನು ಹಾಗೂ ಸುತ್ತಮುತ್ತಲಿನ ಪರಿಸರವನ್ನು ಹಾಳು ಮಾಡುತ್ತಿದ್ದಾರೆ.
ಪ್ರತಿದಿನ ಮುಂಜಾನೆ ಹಾಗೂ ಸಾಯಂಕಾಲ ವಾಯು ವಿಹಾರಕ್ಕೆಂದು ಬಂದಂತಹ ಸಾರ್ವಜನಿಕರಿಗೆ ತ್ಯಾಜ್ಯ ವಸ್ತುಗಳಿಂದ ಹಾಗೂ ನಾಯಿ ಮತ್ತು ಹಂದಿಗಳಿಂದ ತೊಂದರೆಯಾಗುತ್ತಿದ್ದು, ವಾಕಿಂಗ್ ಮಾಡುವ ದಾರಿಯಲ್ಲಿ ದುರ್ವಾಸನೆ ಮತ್ತು ನಾಯಿ ಹಂದಿಗಳು ಎಳೆದು ತಂದು ಅಲ್ಲಲ್ಲೇ ಬಿಟ್ಟು ಹೋದಂತಹ ತ್ಯಾಜ್ಯ ವಸ್ತುಗಳಿಂದ ಸಮಸ್ಯೆ ಯಾಗುತ್ತಿದೆ ಎಂಬುದು ಅಲ್ಲಮ ಪ್ರಭು ಉದ್ಯಾವನಕ್ಕೆ ವಾಕಿಂಗ್ ಮತ್ತು ಕ್ರೀಡೆಗಳಿಗಾಗಿ ಬಂದಂತಹ ಸಾರ್ವಜನಿಕರ ದೂರಾಗಿದೆ.

ಅಲ್ಲಮ್ಮ ಪ್ರಭು ಉದ್ಯಾನವನ ಹಲವಾರು ರೀತಿಯ ಅಕ್ರಮ ಚಟುವಟಿಕೆಗಳಿಗೆ ಹಾಗೂ ಕತ್ತಲಾದರೆ ಮಧ್ಯ ವ್ಯಸನಿಗಳು ಹಾಗೂ ಇನ್ನಿತರ ಮಾದಕ ವಸ್ತು ಸೇವಿಸುವರು ಗುಂಪುಗಳು ಫ್ರೀಡಂ ಪಾರ್ಕ್ ಉದ್ಯಾನವನದ ಹಿಂಭಾಗದ ಕಾಂಪೌಂಡ್ ಗೋಡೆಯಿಂದ ಒಳನುಸುಳಿ ಈ ರೀತಿಯ ಅಕ್ರಮ ಚಟುವಟಿಕೆಗಳು ನಡೆಸುತ್ತಾರೆ.ಇಲ್ಲಿ ಕ್ರಮ ಚಟುವಟಿಕೆ ನಡೆಯಲು ಕ್ಕೆ ಕಾರಣ ಮೇಲೆ ತಿಳಿಸಿದಂತೆ ಫ್ರೀಡಂ ಪಾರ್ಕ್ ಉದ್ಯಾನವನದ ಹಿಂಭಾಗದ ಕಾಂಪೌಂಡ್ ಯಾರೋ ಕಿಡಿಗೇಡಿಗಳು ಒಡೆದು ಹಾಕಿ ಅಕ್ರಮ ಚಟುವಟಿಕೆಗಳ ಕಾರ್ಯಗಳು ನಡೆಸಲು ದಾರಿಯನ್ನಾಗಿಸಿ ಕೊಂಡಿದ್ದಾರೆ. ಈ ವಿಚಾರ ಆರೋಗ್ಯ ನಿರೀಕ್ಷಕರಾದ ಪ್ರಭುರಾಜ್ ರವರಿಗೆ ತಿಳಿದಿದ್ದರೂ ಸಹ ಈ ವಿಚಾರವಾಗಿ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿ ದುರಸ್ತಿಗೊಂಡಿರುವಂತಹ ಅಲ್ಲಮ್ಮ ಪ್ರಭು ಉದ್ಯಾನವನದ ಹಿಂಭಾಗದ ಕಾಂಪೌಂಡ್ ಗೋಡೆಯನ್ನು ಪುನರ್ ನಿರ್ಮಿಸುವ ಕಾರ್ಯದಲ್ಲಿ ವಿಫಲರಾಗಿದ್ದಾರೆ.

ಜಿಲ್ಲಾಧಿಕಾರಿಗಳು, ಅಲ್ಲಮ್ಮ ಪ್ರಭು ಉದ್ಯಾನವನದ ಸ್ಥಳದ ಭಾಗವನ್ನು ಡಂಪಿಂಗ್ ಯಾರ್ಡ್ ಆಗಿ ಪರಿವರ್ತಿಸಿದಂತ ಹಾಗೂ ಕರ್ತವ್ಯದಲ್ಲಿ ನಿರ್ಲಕ್ಷ ತೋರಿಸಿದಂತಹ ಮಹಾನಗರ ಪಾಲಿಕೆಯ ಆರೋಗ್ಯ ನಿರೀಕ್ಷಕರಾದ ” ಪ್ರಭುರಾಜ್ ” ವಿರುದ್ಧ ಕ್ರಮ ಕೈಗೊಂಡು, ಉದ್ಯಾನವನದ ಸ್ಥಳದಲ್ಲಿ ಕಸವನ್ನು ಹಾಕದಂತೆ ಹಾಗೂ ಕಾಂಪೌಂಡ್ ಗೋಡೆಯನ್ನು ಸರಿಪಡಿಸಿ ಅಕ್ರಮ ಚಟುವಟಿಕೆ ನಡೆಯದಂತೆ ಉದ್ಯಾನವನದ ಸುತ್ತಮುತ್ತಲಿನ ಪರಿಸರಕ್ಕೆ ಮರಗಿಡಗಳಿಗೆ ಹಾಗೂ ವಾಕಿಂಗ್ ಮಾಡಲು ಬಂದಂತಹ ಸಾರ್ವಜನಿಕರಿಗೆ ಯಾವುದೇ ರೀತಿಯ ಸಮಸ್ಯೆ ಬಾರದಂತೆ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರ ಪರವಾಗಿ ಸಿಟಿ ರೌಂಡ್ಸ್ ಬಳಗದಿಂದ ಮನವಿ …..

More Stories
ಜೈಲಿನ ಖೈದಿಗಳ ಬಳಿ ವರ್ಷದಿಂದ ವರ್ಷಕ್ಕೆ ಮೊಬೈಲ್ಗಳ ಸಂಖ್ಯೆಯಲ್ಲಿ ಹೆಚ್ಚಳ : 410 ವಿವಿಧ ಕಂಪನಿಯ ಮೊಬೈಲ್ ಪತ್ತೆ..!!
ಕಸ್ತೂರಿ ರಂಗನ್ ವರದಿ ಕುರಿತು ತೀರ್ಥಹಳ್ಳಿಯಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕೊಟ್ಟ ಸೂಚನೆಯಾದರೂ ಏನು ..?
ಸಂಗ್ರ ಹ ಮಾಡಲಾಗಿರುವ ಅಕ್ರಮ ಮರಳನ್ನು ತ್ವರಿತವಾಗಿ ವಿಲೇಮಾಡಿ : ಪ್ರಭುಲಿಂಗ ಕವಳಿಕಟ್ಟಿ