
ಶಿವಮೊಗ್ಗ: 04- ನವಂಬರ್ : 2025ರ ಮಹಿಳಾ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಭಾರತ ಮಹಿಳಾ ಕ್ರಿಕೆಟ್ ತಂಡವು ಐತಿಹಾಸಿಕ ದಾಖಲೆ ಬರೆದಿದೆ, ಮೊದಲ ಬಾರಿಗೆ ಏಕದಿನ ವಿಶ್ವಕಪ್ ಟ್ರೋಫಿಯನ್ನು ಗೆದ್ದು ಭಾರತ ದೇಶಕ್ಕೆ ಕೀರ್ತಿ ತಂದಿದ್ದಾರೆ .

ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆದಂತ ಏಕದಿನ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾರತ ತಂಡದ ಆಟಗಾರ್ತಿ ಹರ್ಮನ್‌ಪ್ರೀತ್ ಕೌರ್ ನಾಯಕತ್ವದಲ್ಲಿ ದಕ್ಷಿಣ ಆಫ್ರಿಕಾವನ್ನು 52 ರನ್‌ಗಳಿಂದ ಜಯಗಳಿಸಲಾಯಿತು.

ಸೂಪರ್ ಆಟಗಾರ್ತಿ ಶಫಾಲಿ ವರ್ಮಾ (87 ರನ್) ಹಾಗೂ ದೀಪ್ತಿ ಶರ್ಮಾ (45 ರನ್) ಗಳಿಸಿ ಭಾರತ ತಂಡಕ್ಕೆ ಹೆಚ್ಚಿನ ಕೊಡುಗೆ ನೀಡಿದರು. ಭಾರತ ತಂಡ ಏಕದಿನದ ಕ್ರಿಕೆಟ್ ವಿಶ್ವಕಪ್ ಪಂದ್ಯಾವಳಿಯಲ್ಲಿ ಚಾಂಪಿಯನ್ ಆಗಲು ಮುಖ್ಯ ಕಾರಣಗಳು ಭಾರತ ತಂಡ ಮೊದಲು ಬ್ಯಾಟಿಂಗ್ ಮಾಡಿ 50 ಓವರ್ಗಳಲ್ಲಿ 7 ವಿಕೆಟ್‌ಗೆ 298 ರನ್ ಗಳಿಸಿ ದಕ್ಷಿಣ ಆಫ್ರಿಕಾದ ಗೆಲುವಿಗೆ ಕಠಿಣ ಆಟದ ಸವಾಲು ನೀಡಿತ್ತು. ದಕ್ಷಿಣ ಆಫ್ರಿಕಾ ತಂಡ 45.3 ಓವರ್ನಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡು 246 ರನ್ ಗಳಿಸಿ ಭಾರತ ತಂಡಕ್ಕೆ ಪೈಪೋಟಿ ನೀಡಿದ್ದರು ಸಹ 42 ರನ್ ಗಳಿಂದ ಪಂದ್ಯದಲ್ಲಿ ಸೋಲನ್ನು ಅನುಭವಿಸಿದರು.

ವಿಶ್ವಕಪ್ ಏಕದಿನದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾರತ ತಂಡದಿಂದ ಶ್ರೇಷ್ಠ ಆಟಗಾರೆಂದು ಭಾರತದ ಮೂವರು ಆಟಗಾರ್ತಿಯರಿಗೆ ಐಸಿಸಿ ಘೋಷಿಸಿದೆ. 2025ರ ಮಹಿಳಾ ವಿಶ್ವಕಪ್ ಏಕದಿನದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಅತ್ಯುತ್ತಮ ನಾಯಕಿಯ ಪಟಕ್ಕೆ ಹರ್ಮನ್‌ಪ್ರೀತ್ ಕೌರ್ ಮಾತ್ರ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದಾರೆ.
ಸುಮಾರು 52 ವರ್ಷಗಳ ಕನಸು ನನಸು ಮಾಡಿದ ಭಾರತೀಯ ಮಹಿಳಾ ತಂಡ, ದೇಶಕ್ಕೆ ಹೆಮ್ಮೆಯ ಕ್ಷಣ ತಂದಿದೆ.2025ರ ಫೈನಲ್‌ನಲ್ಲಿ ಭಾರತ ತಂಡ ಸೆನ್ಸೇಷನಲ್ ಪ್ರದರ್ಶನ ನೀಡಿ, ಮೊದಲ ಬಾರಿಗೆ ಚಾಂಪಿಯನ್ ಪಟ್ಟ ಪಡೆದಂತಾಗಿದೆ…..
* * * * * * * * * * *
ಶಿವಮೊಗ್ಗ ನಗರದ ಸೊಮಿನಕೊಪ್ಪ ಮುಖ್ಯ ರಸ್ತೆಯಲ್ಲಿರುವ ಶ್ರೀ ಕೇದಿಗೆ ಮಂಡಿ ಚೌಡೇಶ್ವರಿ ದೇವಿಯ ಪುನರ್ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ಕಾರ್ಯಕ್ರಮದಲ್ಲಿ ದೇವಸ್ಥಾನದ ಕಾರ್ಯಕಾರಿ ಮಂಡಳಿಯವರು ಶ್ರೀ ವಜ್ರೇಶ್ವರಿ ವಿನಾಯಕ ಸೇವಾ (ಟ್ರಸ್ಟ್ ) ನ ಸದಸ್ಯರಾದಂತಹ ಎಸ್.ಎನ್. ಮಿಲನ್ ಕುಮಾರ್ ಅವರಿಗೆ ದೇವಸ್ಥಾನದ ವತಿಯಿಂದ ಸನ್ಮಾನಿಸಲಾಯಿತು..

More Stories
ನೀಟ್ ಪರೀಕ್ಷಾ ವ್ಯವಸ್ಥೆಯಲ್ಲಿ ಸೋರಿಕೆ… ಅವ್ಯವಸ್ಥೆಯ ನೇರ ಹೊಣೆಗಾರ ಕೇಂದ್ರ ಸರ್ಕಾರ..!!
ಬೇರೆಯವರ ಪರ ಧ್ವನಿ ಎತ್ತುವ ಪತ್ರಕರ್ತರೇ, ನಿಮ್ಮ ಮತ್ತು ನಿಮ್ಮ ಕುಟುಂಬದ ಧ್ವನಿಯಾಗುವವರು ಯಾರು?
10 ದಿನಗಳ ಎನ್ಐಎ ಕಸ್ಟಡಿಗೆ ಅಮೀರ್ ರಶೀದ್ ಅಲಿ ಮತ್ತು ಜಾಸಿರ್ ಬಿಲಾಲ್ ವಾನಿ……!