ಶಿವಮೊಗ್ಗ : ಸಿಟಿ ರೌಂಡ್ಸ್ ನ್ಯೂಸ್
ಅಣ್ಣಪ್ಪ. ಎಂ
ಶಿವಮೊಗ್ಗ : ದಿನಾಂಕ 04-06-2025, ಮಹಾನಗರ ಪಾಲಿಕೆಯ ಕಂದಾಯ ವಿಭಾಗದಲ್ಲಿ ಹೆಚ್ಚಿದ ಲಂಚಾವತಾರ, ಮಹಾನಗರ ಪಾಲಿಕೆ ಭ್ರಷ್ಟಾಚಾರದ ಸುದ್ದಿಯಲ್ಲಿ ಕಳೆದ ಸುಮಾರು ತಿಂಗಳಿಗಳಿಂದ ಕೆಲ ಪತ್ರಿಕೆಗಳಲ್ಲಿ, ಹಾಗೂ ಲೋಕಾಯುಕ್ತರ ದಾಳಿಯಿಂದ, ಸಾರ್ವಜನಿಕರ ದೂರುಗಳಿಂದ, ಹಾಗೂ ಇನ್ನಿತರ ಭ್ರಷ್ಟಾಚಾರದ ವಿಚಾರದಲ್ಲಿ ಶಿವಮೊಗ್ಗ ಮಹಾನಗರ ಪಾಲಿಕೆಯ ಕೆಲವು ವಿಭಾಗಗಳಲ್ಲಿ ಕಂಡು ಬರುತ್ತಿದೆ. ಅದರಂತೆ ಇಂದು ಶಿವಮೊಗ್ಗ ಮಹಾನಗರ ಪಾಲಿಕೆಗೆ ಲೋಕಾಯುಕ್ತ ಅಧಿಕಾರಿಗಳು ದಿಡೀರ್ ದಾಳಿ ನಡೆಸಿ ಕಂದಾಯ ವಿಭಾಗದ ಕಡತಗಳನ್ನು ಪರಿಶೀಲಿಸಿ ಕೆಲ ಕಡತಗಳನ್ನು ಪರಿಶೀಲನೆಗಾಗಿ ವಶಪಡಿಸಿಕೊಂಡಿದ್ದಾರೆ.
ಶಿಮೊಗ್ಗ ಮಹಾನಗರ ಪಾಲಿಕೆಯ ಹಲವು ವಿಭಾಗಗಳಲ್ಲಿ ಅತಿ ಹೆಚ್ಚು ಲಂಚಕ್ಕಾಗಿ ಪೀಡಿಸುತ್ತಿರುವ ವಿಭಾಗ ಎಂದರೆ ಕಂದಾಯ ವಿಭಾಗ ಹಾಗೂ ಸೈಟ್ ಸೆಕ್ಷನ್, ಎನ್ನುತ್ತಾರೆ ಸಾರ್ವಜನಿಕರು. ಕಾರಣ ತಮ್ಮ ಸ್ವತ್ತಿನ ವಿಚಾರವಾಗಿ ಕಂದಾಯ ವಿಭಾಗಕ್ಕೆ ಭೇಟಿ ನೀಡಿದ ಸಾರ್ವಜನಿಕರಿಗೆ ಹಲವು ರೀತಿಯಲ್ಲಿ ಸುಲಿಗೆ ಮಾಡುತ್ತಿರುವ ಕೆಲ ಕಂದಾಯ ಅಧಿಕಾರಿ, ಹಾಗೂ ವಿಷ ನಿರ್ವಾಹಕ, ಕರ ವಸಲಿಗಾರ, ಆರ್ ಐ. ಹೀಗೆ ಕೆಲವರು ಸಾರ್ವಜನಿಕರ ಎಲ್ಲಾ ರೀತಿಯ ದಾಖಲೆಗಳು ಸರಿ ಇದ್ದರು ಹಣಕ್ಕಾಗಿ ಸಾರ್ವಜನಿಕರನ್ನು ಹಲವು ರೀತಿಯಲ್ಲಿ ಪೀಡಿಸುತ್ತಾ ಸಾರ್ವಜನಿಕರ ಸ್ವತ್ತಿನ ವಿಚಾರವಾಗಿ ಕಚೇರಿಗೆ ಬಂದಂತವರಿಗೆ ಸರಿಯಾದ ರೀತಿಯಲ್ಲಿ ತಮ್ಮ ಕರ್ತವ್ಯ ನಿರ್ವಹಿಸದೆ ತಿಂಗಳುಗಟ್ಟಲೆ ಅಲೆದಾಡಿಸುತ್ತ ಹಣಕ್ಕಾಗಿ ಕಾಡಿಸಿ ಪಿಡಿಸಿ ಕಿತ್ತು ತಿನ್ನುವಂತಹ ಸಂಪ್ರದಾಯವನ್ನು ಹಿಂದಿನಿಂದಲೂ ರೂಡಿಸಿಕೊಂಡು ಕೆಲವರು ಬಂದಿದ್ದಾರೆ.
ಮಹಾನಗರ ಪಾಲಿಕೆಯ (ಜೋನ್ ನಂಬರ್ 1 )ಕಂದಾಯ ಅಧಿಕಾರಿ, ಉಪ ಕಂದಾಯ ಅಧಿಕಾರಿ, ಇಲ್ಲಿನ ವಿಷಯನಿರ್ವಾಹ, ಕರ ವಸಲಿಗಾರ. ಸಾರ್ವಜನಿಕರಿಗೆ ಉತ್ತಮ ಸೇವೆ ಸಲ್ಲಿಸುತ್ತಿದ್ದು ಯಾವುದೇ ರೀತಿಯ ದೂರುಗಳು 1ನೇ ಜೋನ್ ನಲ್ಲಿ ಕಂಡು ಬಂದಿಲ್ಲ. ಆದರೆ ಜೋನ್ ನಂಬರ್ 2 ಹಾಗೂ ಜೋನ್ ನಂಬರ್ 3 ರಲ್ಲಿ ಹಣಕ್ಕಾಗಿ ಕೆಲವರು ಸಾರ್ವಜನಿಕರನ್ನು ಪೀಡಿಸುತ್ತಿದ್ದಾರೆ ಎಂಬ ದೂರಿನ ಹಿನ್ನೆಲೆ ಇಂದು, ದಿನಾಂಕ 04-06-2025 ರಂದು ಮಧ್ಯಾಹ್ನ 4 ಗಂಟೆ ಸುಮಾರಿಗೆ ಕಂದಾಯ ವಿಭಾಗಕ್ಕೆ ಲೋಕಾಯುಕ್ತ ಪೊಲೀಸರು ದಿಡೀರ್ ದಾಳಿ ನಡೆಸಿದ್ದಾರೆ.

ಮಹಾನಗರ ಪಾಲಿಕೆ ಆಯುಕ್ತರಾದ ಕವಿತಾ ಯೋಗಪ್ಪನವರು ಕಂದಾಯ ವಿಭಾಗಕ್ಕೆ ಭೇಟಿ ನೀಡಿ ಲೋಕಾಯುಕ್ತ ಪೊಲೀಸರು ಕೇಳಿದ ಹಲವು ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ ಎನ್ನಲಾಗಿದೆ. ಲೋಕಾಯುಕ್ತ ಪೊಲೀಸರು ಕಂದಾಯ ವಿಭಾಗದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ವಿಚಾರವಾಗಿ, ಮಹಾನಗರ ಪಾಲಿಕೆ ಆಯುಕ್ತರಾದ ಕವಿತಾ ಯೋಗಪ್ಪನವರಿಗೆ ಕಂದಾಯ ವಿಭಾಗದ ಕಡತಗಳ ವಿಚಾರಗಳ ಬಗ್ಗೆ ವಿಚಾರಿಸಿ ಕೆಲ ಕಡತಗಳನ್ನು ಪರಿಶೀಲನೆಗಾಗಿ ವಶಪಡಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಮಹಾನಗರ ಪಾಲಿಕೆಯ ಕಂದಾಯ ವಿಭಾಗದ ಜೋನಲ್ 2 ಮತ್ತು 3 ರಲ್ಲಿ ಸಾರ್ವಜನಿಕರ ಕಡತಗಳ ವಿಚಾರವಾಗಿ ಸಾರ್ವಜನಿಕರಿಂದ ಲಂಚಕ್ಕಾಗಿ ಪೀಡಿಸುತ್ತಿದ್ದಾರೆ ಎಂಬ ದೂರು ಹಲವರಿಂದ ಕೇಳಿ ಬರುತ್ತಿದ್ದು. ಈ ವಿಚಾರವಾಗಿ ಮಹಾನಗರ ಪಾಲಿಕೆ ಆಯುಕ್ತರಾದ ಕವಿತಾ ಯೋಗಪ್ಪನವರು ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ ವೆಂಬುದ, ಅನೇಕ ಸಂಶಯಕ್ಕೆ ದಾರಿ ಮಾಡಿ ಕೊಟ್ಟಂತಾಗಿದೆ ಎಂದು ತಮ್ಮ ಕೆಲಸಗಳಿಗೆ ಅಲೆದಾಡಿ ಸಾಕಾಗಿರುವಂತ ಸಾರ್ವಜನಿಕರು ದೂರತ್ತಿದ್ದಾರೆ.

More Stories
ಜೈಲಿನ ಖೈದಿಗಳ ಬಳಿ ವರ್ಷದಿಂದ ವರ್ಷಕ್ಕೆ ಮೊಬೈಲ್ಗಳ ಸಂಖ್ಯೆಯಲ್ಲಿ ಹೆಚ್ಚಳ : 410 ವಿವಿಧ ಕಂಪನಿಯ ಮೊಬೈಲ್ ಪತ್ತೆ..!!
ಕಸ್ತೂರಿ ರಂಗನ್ ವರದಿ ಕುರಿತು ತೀರ್ಥಹಳ್ಳಿಯಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕೊಟ್ಟ ಸೂಚನೆಯಾದರೂ ಏನು ..?
ಸಂಗ್ರ ಹ ಮಾಡಲಾಗಿರುವ ಅಕ್ರಮ ಮರಳನ್ನು ತ್ವರಿತವಾಗಿ ವಿಲೇಮಾಡಿ : ಪ್ರಭುಲಿಂಗ ಕವಳಿಕಟ್ಟಿ