ಶಿವಮೊಗ್ಗ ಸಿಟಿ ರೌಂಡ್ಸ್ ನ್ಯೂಸ್
ಅಣ್ಣಪ್ಪ. ಎಂ
ಶಿವಮೊಗ್ಗ : ಮೇ 04 : ಶಾಂತಿ ಸೌಹಾರ್ಧತೆಗೆ ಹೆಸರಾಗಿರುವ ಶಿವಮೊಗ್ಗದಲ್ಲಿ ನಡೆಯುವ ಯಾವುದೇ ಧರ್ಮದ ಧಾರ್ಮಿಕ ವಿಧಿಗಳು, ಹಬ್ಬದ ಆಚರಣೆಗಳು ಶಾಂತಿಯುತವಾಗಿ ನಡೆಯುತ್ತಿವೆ. ಮುಂದಿನ ದಿನಗಳಲ್ಲಿಯೂ ಸದಾ ಕೂಡಿ ಬಾಳುವ, ನಾಡಿಗೆ ಏಕತೆ, ಭಾವೈಕ್ಯತೆಯ ಸಂದೇಶ ಸಾರುವ ನೆಲ ನಮ್ಮದಾಗಬೇಕು ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಹೇಳಿದರು.
ಅವರು ಇಂದು ಮುಸ್ಲಿಂ ಸಮುದಾಯದ ಪವಿತ್ರ ಹಬ್ಬ ಬಕ್ರೀದ್ ಸಂಭ್ರಮಾಚರಣೆಯ ಕುರಿತು ನಗರದ ಡಿ.ಎ.ಆರ್.ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಶಾಂತಿ ಸೌಹಾರ್ಧ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಹಬ್ಬಗಳು ಸಡಗರ, ಸಂಭ್ರಮಗಳಿಂದ ಆಚರಿಸಬೇಕು. ಶಾಂತಿ ಸಂದೇಶದಲ್ಲಿ ಜಿಲ್ಲೆಯಲ್ಲಿನ ಎಲ್ಲಾ ಕುಟುಂಬಗಳ ನೆಮ್ಮದಿಯ ಬದುಕಿದೆ. ವೈಯಕ್ತಿಗೆ ಏಳಿಗೆ ಅಡಗಿದೆ ಎಂದವರು ತಿಳಿಸಿದರು.
ವಿಶೇಷವಾಗಿ ಶಿವಮೊಗ್ಗ ಜಿಲ್ಲೆ ಅಭಿವೃಧ್ಧಿಯ ಪಥದಲ್ಲಿ ನಾಗಾಲೋಟದಲ್ಲಿದೆ. ನಿರೀಕ್ಷಿಸುವ ಬಹುತೇಕ ಎಲ್ಲಾ ಕ್ಷೇತ್ರಗಳಲ್ಲಿಯೂ ಉತ್ತಮ ಸಾಧನೆ ಕಂಡುಬರುತ್ತಿದೆ. ಇಂತಹ ಪರ್ವಕಾಲದಲ್ಲಿ ಎಲ್ಲರೂ ನಿರ್ಭಯವಾಗಿ ಆತಂಕ ರಹಿತ ಜೀವನ ನಿರ್ವಹಿಸುವಂತಾಗಬೇಕು ಎಂದ ಅವರು, ಎಲ್ಲರೂ ಜಿಲ್ಲೆಯಲ್ಲಿ ಶಾಂತಿ-ಸುವ್ಯವಸ್ಥೆ ಕಾಪಾಡಲು ಮುಂದಾಗಬೇಕು. ನಡೆಯುವ ಸಂಭಾವ್ಯ ಅಹಿತಕರ ಘಟನೆಗಳ ಸಂದರ್ಭದಲ್ಲಿ ಜಿಲ್ಲಾಡಳಿತ ತಮ್ಮ ನೆರವಿಗೆ ಧಾವಿಸಲಿದೆ ಎಂದವರು ನುಡಿದರು.
ಒಬ್ಬ ವ್ಯಕ್ತಿಯ ನೋವಿನಲ್ಲಿ ಮತ್ತೊಬ್ಬರು ಸಂಭ್ರಮಿಸುವುದು ಆರೋಗ್ಯಕರ ಸಮಾಜದ ಲಕ್ಷಣವಲ್ಲ. ಪರಸ್ಪರರಲ್ಲಿ ಸಾಮರಸ್ಯ, ಸೌಹಾರ್ಧತೆ ಮೂಡಬೇಕು. ಅಂತಹ ವಾತಾವರಣವನ್ನು ನಾವೇ ಸೃಜಿಸಿಕೊಳ್ಳಬೇಕು. ವದಂತಿಗಳನ್ನು ನಂಬಬೇಡಿ ಹಾಗೂ ಅವುಗಳನ್ನು ಹರಡಬೇಡಿ. ಯುವಜನತೆ ತಾಳ್ಮೆಯಿಂದ ವರ್ತಿಸುವಂತೆ ಹಿರಿಯರು ಸಕಾಲಿವಾಗಿ ಸೂಕ್ತ ಮಾರ್ಗದರ್ಶನ ನೀಡಬೇಕು ಎಂದು ಹೇಳಿದರು.
ಎಲ್ಲರೂ ಕಾನೂನನ್ನು ಗೌರವಿಸಿ, ಅಂತೆಯೇ ಪಾಲಿಸಿ. ಆಕಸ್ಮಿಕ ಘಟನೆಗಳು ನಡೆದಾಗ ತಕ್ಷಣದ ಅಗತ್ಯಗಳಿಗಾಗಿ ಪೊಲೀಸ್‌ಇಲಾಖೆ ಅಧಿಕಾರಿಗಳು ಹಾಗೂ ಸಮೀಪದ ಅಧಿಕಾರಿಗಳನ್ನು ಸಂಪರ್ಕಿಸಿ, ಚರ್ಚಿಸಿ. ತಕ್ಷಣದ ಪರಿಹಾರಕ್ಕಾಗಿ ಏಕಪಕ್ಷೀಯವಾದ ಆತುರದ ನಿರ್ಧಾರಗಳು ಬೇಡ ಎಂದವರು ಕಿವಿಮಾತು ಹೇಳಿದರು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನಕುಮಾರ್‌ಅವರು ಮಾತನಾಡಿ, ತ್ಯಾಗ ಬಲಿದಾನದ ಸಂಕೇತವಾಗಿರುವ ಬಕ್ರೀದ್‌ಹಬ್ಬವನ್ನು ಶಾಂತಿಯುತವಾಗಿ ಆಚರಿಸಲು ಎಲ್ಲಾ ಧರ್ಮದ ಬಾಂಧವರು ಸಹಕರಿಸಬೇಕು. ಸುಳ್ಳು ಸುದ್ದಿಗಳಿಗೆ ಕಿವಿಕೊಡಬೇಡಿ ಎಂದರು.
ನಗರದಲ್ಲಿನ ಸ್ವಚ್ಚತೆಗೆ ಮಹಾನಗರಪಾಲಿಕೆ ವತಿಯಿಂದ ಅಗತ್ಯ ಕ್ರಮ ವಹಿಸಲಾಗುತ್ತಿದೆ. ಅಲ್ಲದೇ ನಿರಂತರ ವಿದ್ಯುತ್‌ಪೂರೈಕೆಗೆ ಮನವಿ ಮಾಡಿಕೊಳ್ಳಲಾಗಿದೆ ಎಂದವರು ನುಡಿದರು.
ಬಕ್ರಿದ್‌ಹಬ್ಬದ ದಿನದಂದು ತಮ್ಮ ಗಲ್ಲಿ, ಮೊಹಲ್ಲಾಗಳಲ್ಲಿ ಸ್ವಚ್ಚತೆಯನ್ನು ಕಾಪಾಡಿಕೊಳ್ಳಬೇಕು. ಅನ್ಯಕೋಮಿನವರ ಭಾವನೆಗಳಿಗೆ ಧಕ್ಕೆಯಾಗದಂತೆ ಕ್ರಮವಹಿಸಬೇಕು. ಸ್ವಚ್ಚತೆಯ ವಿಷಯದಲ್ಲಿ ಮಹಾನಗರಪಾಲಿಕೆಯ ಸಹಕಾರ ನಿರಂತರವಾಗಿದೆ. ಯಾವುದೇ ಧರ್ಮದ ಹಬ್ಬಗಳು ಯಾವುದೇ ಆತಂಕಗಳಿಲ್ಲದೆ ಸಡಗರ-ಸಂಭ್ರಮದಿಂದ ನಡೆಯುವಂತಾಗಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ಅನಿಲ್‌ಕುಮಾರ್ ಭೂಮರೆಡ್ಡಿ, ಕಾರಿಯಪ್ಪ, ಮಹಾನಗರಪಾಲಿಕೆಯ ಇಂಜಿನಿಯರ್ ಭರತ್‌ಕುಮಾರ್ ಸೇರಿದಂತೆ ವಿವಿಧ ಎಲ್ಲಾ ಧರ್ಮಗಳ ಮುಖಂಡರು ಭಾಗವಹಿಸಿದ್ದರು.

More Stories
ಸಿಎಲ್ 2 ಮಧ್ಯದಂಗಡಿಗಳಿಗೆ ನಿಯಮಗಳೇ ಇಲ್ಲ : ಮಾಂಸಾಹಾರಿ ಹೋಟೆಲ್ಗಳಲ್ಲಿ ಮಧ್ಯ ಮಾರಾಟಕ್ಕೆ ಕಾನೂನಿನ ಭಯವೇ ಇಲ್ಲ … ಪ್ರತಿನಿತ್ಯ ಅಪಘಾತಗಳೆ …. ಸಾರ್ವಜನಿಕರ ಜೀವಗಳಿಗೆ ಬೆಲೆಯೇ ಇಲ್ಲ …
ಯುವ ಪ್ರೇಮಿಗಳೇ ಇವನ ಟಾರ್ಗೆಟ್…. ಮಂಜುನಾಥನಾಯ್ಕ ಇವನ ಹಿಂದಿದೆಯೇ ದೊಡ್ಡ ರಾಬರಿ ಗ್ಯಾಂಗ್ …?
ಜನಪ್ರತಿನಿಧಿಗಳ ಕರೆಗೆ ಅಧಿಕಾರಿಗಳು ಡೋಂಟ್ ಕೇರ್ :ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜನಪ್ರತಿನಿಧಿಗಳ ಆಕ್ರೋಶ..!!