City Rounds News

Kannada News Website

ಪಾಕಿಸ್ತಾನದ ಗಡಿ  ದಾಟಿ ಬಂಧನಕ್ಕೆ ಒಳಗಾಗಿದ್ದ ಬಿ ಎಸ್ ಎಫ್ ಯೋಧ ಪೂರ್ಣಮ್ ಕುಮಾರ್ ಶಾ ಬಿಡುಗಡೆ…!

ಶಿವಮೊಗ್ಗ ಸಿಟಿ ರೌಂಡ್ಸ್ ನ್ಯೂಸ್

ಅಣ್ಣಪ್ಪ ಎಂ

 

 

ಶಿವಮೊಗ್ಗ: ಏಪ್ರಿಲ್ 23ರಂದು ಬಿ ಎಸ್ ಎಫ್ ಸೈನಿಕ ಪೂರ್ಣಮ್ ಕುಮಾರ್ ಶಾ ಅವರನ್ನು ಪಾಕಿಸ್ತಾನ ರೇಂಜರ್ ಗಡಿ ದಾಟಿದ ಆರೋಪದ ಮೇಲೆ ಬಂಧಿಸಲಾಗಿತ್ತು.

ಏಪ್ರಿಲ್ 23ರ ಮಧ್ಯಾಹ್ನ  ಪಂಜಾಬ್ ನ ಭಾರತ ಪಾಕಿಸ್ತಾನ ಗಡಿಯಲ್ಲಿ ಕರ್ತವ್ಯದಲ್ಲಿದ್ದಾಗ ಆಕಸ್ಮಿಕವಾಗಿ ಪಾಕಿಸ್ತಾನದ ಜೀರೋ ಬಾರ್ಡರ್ ಬಳಿ ಹೊಲಗದ್ದೆಗಳಲ್ಲಿ ಕೆಲಸ ಮಾಡುತ್ತಿದ್ದ ಗಡಿ ಗ್ರಾಮಸ್ಥರಿಗೆ ಸಹಾಯ ಮಾಡುವಾಗ ಆಕಸ್ಮಿಕವಾಗಿ ಗಡಿ ದಾಟಿದ್ದರು. ಗಡಿ ದಾಟಿದಂತ ಪೂರ್ಣಮ್ ಕುಮಾರ್ ಶಾ ಅವರನ್ನು ಪಾಕಿಸ್ತಾನ ಗಡಿ ಕಾವಲು ಪಡೆ ಬಂಧಿಸಿದರು.

ಪೂರ್ಣಮ್ ಕುಮಾರ್ ಶಾ ಅವರನ್ನು ಏಪ್ರಿಲ್ 10 ರಿಂದ ಇಂಡೋ- ಪಂಜಾಬ್ ಗಡಿಯಲ್ಲಿ ತಾತ್ಕಾಲಿಕ ತಂಡದೊಂದಿಗೆ ನಿಯೋಜನೆ ಗೊಳಿಸಲಾಗಿತ್ತು ಅವರು ತಮ್ಮ ಸಮವಸ್ತ್ರವನ್ನು ಧರಿಸಿ ಕರ್ತವ್ಯದಲ್ಲಿದ್ದಾಗ. ಅಜಾಗೂರುಕತೆಯಿಂದ ಗಡಿ ದಾಟಿದ್ದರು ಎನ್ನಲಾಗಿದೆ.

ಪಾಕಿಸ್ತಾನ ಹಾಗೂ ಭಾರತದ ಮಿಲಿಟರಿ ಅಧಿಕಾರಿಗಳು ಪಂಕಜ್ ಕುಮಾರ್ ಶಾ ಅವರ ಗಡಿ ದಾಟಿದ ವಿಚಾರವಾಗಿ ಸಭೆ ನಡೆಸುವ ಹಂತದಲ್ಲಿರುವಾಗಲೇ ಏಪ್ರಿಲ್ 22ರಂದು ನಡೆದ ಕಾಶ್ಮೀರದ ಫಹಲ್ಗಾವ್ ಟೆರರಿಸ್ಟ್ ಅಟ್ಯಾಕ್ ನಂತರ ಎರಡು ದೇಶಗಳ ಮಧ್ಯೆ ಯುದ್ಧ ಘೋಷಣೆಗೊಂಡ ನಂತರ. ಯುದ್ಧದ ಭೀತಿಯಲ್ಲಿದ್ದಂತಹ ಪಾಕಿಸ್ತಾನ, ಅಮೇರಿಕಾ ಮಧ್ಯಸ್ಥಿಕೆಯಲ್ಲಿ  ಭಾರತ ಪಾಕಿಸ್ತನ,  ಯುದ್ಧವನ್ನು ಸ್ಥಗಿತಗೊಳಿಸಿದ ನಂತರ ಮೇ 14ರಂದು ಬೆಳಿಗ್ಗೆ 10:30ಕ್ಕೆ ಸರಿಯಾಗಿ, ಅಟಾರಿ – ವಾಘಾ ಗಡಿಯಿಂದ ಪಾಕಿಸ್ತಾನ ಬಿ ಎಸ್ ಎಫ್ ಸೈನಿಕ ಪಂಕಜ್ ಕುಮಾರ್ ಶಾ ಅವರನ್ನು ಭಾರತಕ್ಕೆ ಹಸ್ತಾಂತರಿಸಲಾಗಿದೆ ಎಂದು ತಿಳಿಸಿದ್ದಾರೆ.