ಶಿವಮೊಗ್ಗ : ಸಿಟಿ ರೌಂಡ್ಸ್ ನ್ಯೂಸ್
ಅಣ್ಣಪ್ಪ ಎಂ
ಶಿವಮೊಗ್ಗ: ಇಂದು ಬಿಜೆಪಿ ಪಕ್ಷದ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಶಿವಮೊಗ್ಗ ನಗರ ಶಾಸಕರಾದ ಚನ್ನಬಸಪ್ಪನವರು ಕಾಂಗ್ರೆಸ್ ಸರ್ಕಾರದ ಗ್ಯಾರೆಂಟಿ ಯೋಜನೆಗಳ ವಿಚಾರವಾಗಿ ಉಚಿತ ಎಂಬ ಹೆಸರಿನಲ್ಲಿ ಕಾಂಗ್ರೆಸ್ ಸರ್ಕಾರ ಜನತೆಯ ಜೇಬಿಗೆ ಕತ್ತರಿ ಹಾಕುತ್ತಿದೆ. ಮಧ್ಯಮ ವರ್ಗದ ಜನತೆ ಹಾಗೂ ಬಡವರಿಗೆ ಭಾರ ಹೇರುತ್ತಿರುವ ಕಾಂಗ್ರೆಸ್ ಸರ್ಕಾರ ಪ್ರತಿದಿನದ ಅಗತ್ಯ ವಸ್ತುಗಳ ಮೇಲೆ ಮನಬಂದಂತೆ ದರಗಳನ್ನು ಹೆಚ್ಚಿಸುವ ಮೂಲಕ ಒಂದೇಡೆ ಉಚಿತ ಇನ್ನೊಂದೆಡೆ ಜನತೆಯ ಜೇಬಿಗೆ ಕತ್ತರಿ ಹಾಕುತ್ತಿರುವ ಸರ್ಕಾರದ ನಡತೆಯನ್ನು ಬಿಜೆಪಿ ಪಕ್ಷ ವಿರೋಧಿಸುತ್ತದೆ ಎಂದು ಶಾಸಕರಾದ ಚನ್ನಬಸಪ್ಪನವರು ಹೇಳಿದರು.
ಕಾಂಗ್ರೆಸ್ ಸರ್ಕಾರ ಸಾರ್ವಜನಿಕರ ಪರ ಹಾಗೂ ರೈತರ ಪರವಾದ ಸರ್ಕಾರ ಎಂದು ಹೇಳಿ ಅಧಿಕಾರಕ್ಕೆ ಬಂದಂತ ಕಾಂಗ್ರೆಸ್ ಸರ್ಕಾರ, ರಾಜ್ಯದ ಜನತೆಗೆ ನೀಡುತ್ತಿರುವ ಕೊಡುಗೆಯಾದರೂ ಏನು?. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲು ರಾಜ್ಯದ ಜನತೆ 137 ಸ್ಥಾನಗಳನ್ನು ನೀಡಿ ರಾಜ್ಯದ ಜನತೆಯ ಸಮಸ್ಯೆಗಳನ್ನು ಬಗೆಹರಿಸುವಂತೆ ಹಾಗೂ ಯಾವುದೇ ರೀತಿಯ ದರಗಳನ್ನು ಹೆಚ್ಚಿಸದೆ ಮಧ್ಯಮ ವರ್ಗದವರಿಗೆ ಹಾಗೂ ಬಡವರಿಗೆ ಅನುಕೂಲ ವಾಗುವಂತೆ ಸರ್ಕಾರ ನಡೆಸಲೆಂದು ರಾಜ್ಯದ ಜನತೆ ಕಾಂಗ್ರೆಸ್ ಸರ್ಕಾರವನ್ನು 137 ಸ್ಥಾನಗಳ ಫಲಿತಾಂಶ ಕೊಟ್ಟಿದ್ದರು. ಆದರೆ ಕಾಂಗ್ರೆಸ್ ಸರ್ಕಾರ ಚಕ್ಕುಲಿ ಡಬ್ಬದ ಕಥೆಯನ್ನು ರಾಜ್ಯದ ಜನತೆಗೆ ಹೇಳುತ್ತಿದೆ ಎಂದು ಚನ್ನಬಸಪ್ಪ ರವರು ಕಾಂಗ್ರೆಸ್ ಸರ್ಕಾರದ ಆಡಳಿತದ ವಿರುದ್ಧ ಚಕ್ಕುಲಿ ಡಬ್ಬದ ಒಂದು ಕಥೆಯನ್ನು ಹೇಳಿದರು,
“ಏನಿದು ಚಕ್ಕುಲಿ ಡಬ್ಬದ ಕಥೆ “
ತುಂಬಿದ ಚಕ್ಕುಲಿ ಡಬ್ಬವನ್ನು ಜನತೆಗೆ ತೋರಿಸುತ್ತಿರುವ ಕಾಂಗ್ರೆಸ್ ಸರ್ಕಾರ, ಆದರೆ ಚಕ್ಕುಲಿಯ ಮೇಲಿನ ಸುಳಿಗಳನ್ನು ಒಂದೊಂದೇ ತಿನ್ನುತ್ತಿರುವ ಕಾಂಗ್ರೆಸ್ ಸರ್ಕಾರ ಜನತೆಗೆ ಮಾತ್ರ ತುಂಬಿದ ಚಕ್ಕುಲಿಯ ಡಬ್ಬವನ್ನು ತೋರಿಸುತ್ತಾ ಚಕ್ಕುಲಿ ಡಬ್ಬ ಹಾಗೆ ಇದೆ ಎಂದು ಹೇಳುತ್ತಿದೆ . ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರ ಮಾಡುತ್ತಿದ್ದರು ಭ್ರಷ್ಟಾಚಾರ ಮಾಡಿಲ್ಲವೆಂದು ತನ್ನನ್ನು ತಾನು ಸಮರ್ಥಿಸಿಕೊಳ್ಳುತ್ತಿದೆ. ಕಾಂಗ್ರೆಸ್ ಸರ್ಕಾರ ಜನರ ರಕ್ತವನ್ನು ಇರುವಂತ ಸರ್ಕಾರ ಇಂದು ಹಾಲಿನ 50ml ಹಾಲನ್ನು ಇರುವಂತ ಕೆಲಸಕ್ಕೆ ಕೈ ಹಾಕಿದೆ. ಕಾಂಗ್ರೆಸ್ ಸರ್ಕಾರ ರೈತರ ಪರ ಸರ್ಕಾರ ರೈತರಗಾಗಿ ಈ ರೀತಿಯಾದ ದರವನ್ನು ಏರಿಸುತ್ತಿದ್ದೇವೆ ಎಂದು ಹೇಳುವ ಕಾಂಗ್ರೆಸ್ ಸರ್ಕಾರ ರೈತರ ಹಾಲಿನ 9 ಕೋಟಿ ಹಣವನ್ನು ರೈತರಿಗೆ ನೀಡದೆ ರೈತರಿಗೆ ಮೋಸ ಮಾಡಿದ್ದೀರಾ ಎಂದು ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರಗಳ ವಿರುದ್ಧ ಹಾಗೂ ದಿನ ನಿತ್ಯ ಬಳಕೆಯ ವಸ್ತುಗಳ ಮೇಲಿನ ದರ ಹೆಚ್ಚಿಸಿದರ ವಿಚಾರವಾಗಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಪತ್ರಿಕಾಗೋಷ್ಠಿಯಲ್ಲಿ ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಸರ್ಕಾರದ ರಾಜ್ಯ ಆಡಳಿತವನ್ನು ವಿರೋಧಿಸಿ ಬಿಜೆಪಿ ಪಕ್ಷದ ವಿಧಾನ ಪರಿಷತ್ ಶಾಸಕರು ಹಾಗೂ ವಿಧಾನಸಭೆ ಶಾಸಕರು ಹಾಗೂ ರಾಜ್ಯದ ಬಿಜೆಪಿ ಪಕ್ಷದ ಹಿರಿಯ ಮುಖಂಡರುಗಳು ಮತ್ತು ಶಿವಮೊಗ್ಗ ಜಿಲ್ಲೆಯಿಂದ 400ಕ್ಕೂ ಹೆಚ್ಚು ಪಕ್ಷದ ಕಾರ್ಯಕರ್ತರು ಮುಖಂಡರುಗಳು ಬೆಂಗಳೂರಿನ ಫ್ರೀಡಂ ಪಾರ್ಕಲ್ಲಿ ಅಹೋರಾತ್ರಿ ಧರಣಿ ನಡೆಸುತ್ತೇವೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಪಕ್ಷದ ಜಿಲ್ಲಾಧ್ಯಕ್ಷರಾದ ಜಗದೀಶ್. ವಿಧಾನ ಪರಿಷತ್ ಶಾಸಕರಾದ ಡಿ ಎಸ್ ಅರುಣ್. ಡಾಕ್ಟರ್ ಧನಂಜಯ್ ಸರ್ಜಿ. ಮಾಲ್ತೇಶ್. ಮಾಧ್ಯಮ ಸಂಚಾಲಕರಾದ ಅಣ್ಣಪ್ಪ ಹಾಗೂ ಮುಂತಾದವರು ಉಪಸ್ಥಿತರಿದ್ದರು.
More Stories
ಸಿಎಲ್ 2 ಮಧ್ಯದಂಗಡಿಗಳಿಗೆ ನಿಯಮಗಳೇ ಇಲ್ಲ : ಮಾಂಸಾಹಾರಿ ಹೋಟೆಲ್ಗಳಲ್ಲಿ ಮಧ್ಯ ಮಾರಾಟಕ್ಕೆ ಕಾನೂನಿನ ಭಯವೇ ಇಲ್ಲ … ಪ್ರತಿನಿತ್ಯ ಅಪಘಾತಗಳೆ …. ಸಾರ್ವಜನಿಕರ ಜೀವಗಳಿಗೆ ಬೆಲೆಯೇ ಇಲ್ಲ …
ಯುವ ಪ್ರೇಮಿಗಳೇ ಇವನ ಟಾರ್ಗೆಟ್…. ಮಂಜುನಾಥನಾಯ್ಕ ಇವನ ಹಿಂದಿದೆಯೇ ದೊಡ್ಡ ರಾಬರಿ ಗ್ಯಾಂಗ್ …?
ಜನಪ್ರತಿನಿಧಿಗಳ ಕರೆಗೆ ಅಧಿಕಾರಿಗಳು ಡೋಂಟ್ ಕೇರ್ :ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜನಪ್ರತಿನಿಧಿಗಳ ಆಕ್ರೋಶ..!!