City Rounds News

Kannada News Website

ಕಾರು ಮತ್ತು ಬೈಕ್ ಮುಖಾಮುಖಿ ಡಿಕ್ಕಿ : ಬೈಕ್ ಸವಾರನ ತಲೆಗೆ ಗಂಭೀರ ಗಾಯ ..!

ಶಿವಮೊಗ್ಗ : ಸಿಟಿ ರೌಂಡ್ಸ್ ನ್ಯೂಸ್ 

  ಅಣ್ಣಪ್ಪ ಎಂ 

 

ಶಿವಮೊಗ್ಗ: ದಿನಾಂಕ 26-03-2025ರಂದು ಸಾಂಯಕಾಲ ನಗರದ ಶರವಾತಿ ಬಡವಾಣೆಯ ಚಾನಲ್ ಎಡಭಾಗದ ನಾಗಪ್ಪ ದೇವಾಲಯದ ಮುಂಭಾಗದಲ್ಲಿ ನಾಲ್ಕು ರಸ್ತೆ ಸೇರುವ ಸರ್ಕಲ್ ಮಾದರಿ ಇರುವಂತಹ ರಸ್ತೆಯಾಗಿದ್ದು, ಬೈಕ್ ನಲ್ಲಿ ಒಬ್ಬ ಹುಡುಗ ಹುಡುಗಿ ಇಬ್ಬರು ಸವಾರಿ ಮಾಡುತ್ತಿದು ಬೈಕ್ ಚಾಲಕ ಸಂಗೊಳ್ಳಿ ರಾಯಣ್ಣ ಮುಖ್ಯರಸ್ತೆಯಿಂದ ಶರವಾತಿ ನಗರದ ಕಡೆ ವಾಹನ ಚಲಾಯಿಸಿ ಕೊಂಡು ಬರುತ್ತಿರುವಾಗ, ಶರವಾತಿ ಬಡವಾಣೆಯ ಚಾನಲ್ ಏರಿಯಾ ಕಡೆ ಯಿಂದ ಕಾರು ಚಾಲಕ ಬಂದಿರುತ್ತಾರೆ, ಆದರೆ ಕಾರು ಹಾಗೂ ಬೈಕ್ ಮುಖಾಮುಖಿ ಡಿಕ್ಕಿ ಹೊಡೆದು ಕಾರಿನ ಮುಂಭಾಗ ನುಜ್ಜುಗುಜ್ಜು ಹಾಗಿದೆ,ಬೈಕ್ ಮುಂಭಾಗ ನುಜ್ಜುಗುಜ್ಜು ಹಾಗಿದೆ.

ಹಾಗೂ ಬೈಕ್ ಸಾವರನಿಗೆ ತಲೆಗೆ ಗಂಭೀರವಾದ ಗಾಯಗಳಾಗಿವೆ. ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ನಂತರ ಸ್ಥಳೀಯರು ಸಂಚಾರಿ ಪೊಲೀಸ್ ಇಲಾಖೆಗೆ ವಿಷಯವನ್ನು ತಿಳಿಸಿದ ನಂತರ ಸಂಚಾರ ಪೊಲೀಸ್ ಇಲಾಖೆಯ ಅಧಿಕಾರಿ ತಿರುಮಲೇಶ್ ಹಾಗೂ ಸಿಬ್ಬಂದಿಗಳು ಘಟನಾ ಸ್ಥಳಕ್ಕೆ ಬಂದು ಸ್ಥಳ ಪರಿಶೀಲಿಸಿ ಅಪಘಾತಕ್ಕೆ ಕಾರಣ ಯಾರೆಂಬುದನ್ನು ಮುಂದಿನ ತನಿಕೆಯನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ವರದಿ – ಸಿಟಿ ರೌಂಡ್ಸ್ ನ್ಯೂಸ್

ಅಣ್ಣಪ್ಪ ಎಂ.