ಸಿಟಿ ರೌಂಡ್ಸ್ ನ್ಯೂಸ್
ಅಣ್ಣಪ್ಪ ಎಂ.
ಶಿವಮೊಗ್ಗ : ಶಿವಮೊಗ್ಗ ಜಿಲ್ಲೆ ಹೊಸಕೊಪ್ಪ ರಾಮಿನಕೊಪ್ಪ ಗ್ರಾಮಗಳ ನಡುವೆ ಇರುವ ಅಡಿಕೆ ತೋಟದಲ್ಲಿ ಸೋಮವಾರ ರಾತ್ರಿ ಎರಡು ಹಸುಗಳ ಮೇಲೆ ಚಿರತೆ ದಾಳಿ ಮಾಡಿದೆ. ಹಸುಗಳ ರಕ್ತವನ್ನು ಕುಡಿದ ಚಿರತೆ ಹಸುವಿನ ದೇಹವನ್ನು ಅರ್ಧಂಬರ್ಧ ತಿಂದು ದಾಳಿ ಮಾಡಿದೆ ಸ್ಥಳದಲ್ಲಿಯೇ ಬಿಟ್ಟು ಹೋಗಿವೆ. ಚಿರತೆ ದಾಳಿಯ ಘಟನೆಯನ್ನು ಕೇಳಿದ ಗ್ರಾಮದ ರಾಮಿನಕೊಪ್ಪ ಹಾಗೂ ಹೂಸಕೊಪ್ಪ ಸುತ್ತಮುತ್ತಲಿನ ರೈತರಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ. ಸಂಬಂಧಪಟ್ಟ ಅರಣ್ಯ ಇಲಾಖೆಗೆ ಈ ವಿಚಾರವನ್ನು ತಿಳಿಸಿದ ಗ್ರಾಮಸ್ಥರು.
ಚಿರತೆ ದಾಳಿಯ ಘಟನೆ ಗ್ರಾಮದ ಸುತ್ತಮುತ್ತಲು ಹಬ್ಬುತ್ತಿದ್ದಂತೆ. ತೋಟದಲ್ಲಿ ಕೆಲಸ ಮಾಡಲು ಕೂಲಿ ಕಾರ್ಮಿಕರು ಭಯ ಪಡುವಂತಾಗಿ ಹೊಲಗಳಲ್ಲಿ ರೈತರು ಕೆಲಸ ಮಾಡಲು ಹಿಂಜರಿಯುತ್ತಿದ್ದಾರೆ. ಆದ್ದರಿಂದ ಚಿರತೆ ದಾಳಿ ಈಗ ಕೆಲ ಪ್ರಾಣಿಗಳ ಮೇಲೆ ನಡೆಯುತ್ತಿದೆ. ಮನುಷ್ಯರ ಮೇಲೆ ದಾಳಿ ಯಾಗುವ ಮುನ್ನ ಅರಣ್ಯ ಇಲಾಖೆ ಎಚ್ಚೆತ್ತುಕೊಂಡು ಚಿರತೆ ಸೆರೆ ಹಿಡಿಯಲು ಬೋನುಗಳನ್ನು ಇರಿಸುವಂತೆ ಗ್ರಾಮಸ್ಥರ ಮನವಿ ಮಾಡಿದ್ದಾರೆ. ಈ ಹಿಂದೆ ಕೂಡ ಗಾಜುನೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚಿರತೆ ಕಾಣಿಸಿಕೊಂಡಿದ್ದು ರೈತರಲ್ಲಿ ಆತಂಕ ಸೃಷ್ಟಿಯಾಗಿದೆ. ಆದ್ದರಿಂದ ಅರಣ್ಯ ಇಲಾಖೆಯವರು ಗ್ರಾಮಸ್ಥರ ಮನವಿಯನ್ನು ಸ್ವೀಕರಿಸಿ ಯಾವುದೇ ವ್ಯಕ್ತಿಯ ಪ್ರಾಣ ಹಾನಿಯಾಗದಂತೆ ಚಿರತೆಯನ್ನು ಸೆರೆಹಿಡಿಯುವಲ್ಲಿ ಕಾರ್ಯಪ್ರವೃತ್ತರಾಗಬೇಕೆಂದು ಗ್ರಾಮದ ನಿವಾಸಿಗಳ ಅರಣ್ಯ ಇಲಾಖೆಯವರನ್ನು ಒತ್ತಾಯಿಸಿದ್ದಾರೆ.

More Stories
ದೀಪಾವಳಿ ಹಬ್ಬದ ಪ್ರಯುಕ್ತ ಕಾಂಗ್ರೆಸ್ ಸರ್ಕಾರದಿಂದ ಸಾರ್ವಜನಿಕರಿಗೆ ಗಿಫ್ಟ್..?
ಅಪೌಷ್ಟಿಕತೆ ಮುಕ್ತಗೊಳಿಸಿ-ಅಂಗನವಾಡಿ ಕಟ್ಟಡಗಳ ಕಾಮಗಾರಿ ಪೂರ್ಣಗೊಳಿಸಿ-ಡಿಸಿ ಸೂಚನೆ..
ನಮ್ಮೂರ ನಾಡಹಬ್ಬ ಶಿವಮೊಗ್ಗ ದಸರಾ ಕಾರ್ಯಕ್ರಮಗಳು…