ಶಿವಮೊಗ್ಗ ಸಿಟಿ ರೌಂಡ್ಸ್ ನ್ಯೂಸ್
ಅಣ್ಣಪ್ಪ. ಎಂ
ಶಿವಮೊಗ್ಗ: ದಿನಾಂಕ 22-02-2025 ರಂದು ಶಿವಮೊಗ್ಗ ರೈಲು ನಿಲ್ದಾಣದಿಂದ ಪ್ರಯಾಗ್ ರಾಜ್ ಕುಂಭ ಮೇಳಕ್ಕೆ ವಿಶೇಷ ರೈಲು ವ್ಯವಸ್ಥೆಯನ್ನು ಶಿವಮೊಗ್ಗ ಜಿಲ್ಲೆಯ ಸಂಸದರಾದ ಬಿ. ವೈ ರಾಘವೇಂದ್ರ ರವರು ರೈಲ್ವೆ ಇಲಾಖೆ ಯೊಂದಿಗೆ ಚರ್ಚಿಸಿ ಶಿವಮೊಗ್ಗ ದಿಂದ ಪ್ರಯಾಗ್ ರಾಜ್ ಕುಂಭ ಮೇಳಕ್ಕೆ ವಿಶೇಷ ರೈಲು ವ್ಯವಸ್ಥೆಯನ್ನು ಶಿವಮೊಗ್ಗದ ಜನತೆಗೆ ಕುಂಭಮೇಳ ತ್ರಿವೇಣಿ ಸಂಗಮದಲ್ಲಿ ಮಿಂದೆದ್ದು ಪುಣ್ಯ ಪಡೆಯುವಂತ ಪುಣ್ಯದ ಕಾರ್ಯವನ್ನು ಮಾಡಲಾಗಿತ್ತು.ಆದರೆ ಪ್ರಯಾಗ್ ರಾಜ್ ಕುಂಭ ಮೇಳಕ್ಕೆ ಹೊರಟ್ಟಂತ ಪ್ರಯಾಣಿಕರಿಗೆ ರೈಲಿನಲ್ಲಿ ಊಟದ ವ್ಯವಸ್ಥೆ ಇಲ್ಲದೆ ಪ್ರಯಾಣಿಕರ ಊಟಕ್ಕಾಗಿ ಪರದಾಡುವಂತಾಗಿದೆ. ರೈಲ್ವೆ ಇಲಾಖೆಯ ವತಿಯಿಂದ ಕುಂಭಮೇಳಕ್ಕೆ ಹೊರಟಿರುವ ವಿಶೇಷ ರೈಲಿನಲ್ಲಿ ಹಣ ಕೊಟ್ಟು ಊಟ ಪಡೆಯುವಂತ ವ್ಯವಸ್ಥೆಯನ್ನು ಮಾಡಲಾಗಿಲ್ಲ. ಯಾವುದೇ ರೀತಿಯ ತಿಂಡಿ ತಿನಿಸುಗಳು ಕಾಫಿ ಟೀ ಹಾಗೂ ಇನ್ನಿತರ ಊಟದ ವ್ಯವಸ್ಥೆಯನ್ನು ಮಾಡದಿರುವ ಕಾರಣ ನೂರಾರು ಪ್ರಯಾಣಿಕರು ಉಪವಾಸವೇ ರಾತ್ರಿ ಕಳೆಯುವಂತಾಯ್ತು ಎಂದು ಶಿವಮೊಗ್ಗದಿಂದ ಪ್ರಯಾಗ್ ರಾಜ್ ಕುಂಭಮೇಳಕ್ಕೆ ಪ್ರಯಾಣಿಸಿದ ಪ್ರಯಾಣಿಕರು ವಾಟ್ಸಾಪ್ ಮೂಲಕ ತಮ್ಮ ಕುಟುಂಬದವರೊಂದಿಗೆ ಸ್ನೇಹಿತರೊಂದಿಗೆ ತಮ್ಮ ಅಳಲು ತೋಡಿಕೊಂಡಿದ್ದಾರೆ.
ವಿಷೇಶ ರೈಲು ವ್ಯವಸ್ಥೆಯನ್ನು ಮಾಡಿದ ಸಂಸದರು ರೈಲಿನಲ್ಲಿ ಹಣ ಕೊಟ್ಟು ಊಟ ಪಡೆಯುವಂತ ವ್ಯವಸ್ಥೆಯನ್ನು ಮಾಡ ಬೇಕಿತ್ತು ಎಂದು ಊಟ ಇಲ್ಲದೆ ಉಪವಾಸ ಮಲಗಿದ ಕೇಲ ಪ್ರಯಾಣಿಕರು ರೈಲ್ವೆ ಇಲಾಖೆಯನ್ನು ಶಪಿಸುತ್ತಾ ಉಪವಾಸ ಮಲಗಿದ್ದಾರೆಂದು ತಿಳಿದು ಬಂದಿದೆ.

More Stories
ಜೈಲಿನ ಖೈದಿಗಳ ಬಳಿ ವರ್ಷದಿಂದ ವರ್ಷಕ್ಕೆ ಮೊಬೈಲ್ಗಳ ಸಂಖ್ಯೆಯಲ್ಲಿ ಹೆಚ್ಚಳ : 410 ವಿವಿಧ ಕಂಪನಿಯ ಮೊಬೈಲ್ ಪತ್ತೆ..!!
ಕಸ್ತೂರಿ ರಂಗನ್ ವರದಿ ಕುರಿತು ತೀರ್ಥಹಳ್ಳಿಯಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕೊಟ್ಟ ಸೂಚನೆಯಾದರೂ ಏನು ..?
ಸಂಗ್ರ ಹ ಮಾಡಲಾಗಿರುವ ಅಕ್ರಮ ಮರಳನ್ನು ತ್ವರಿತವಾಗಿ ವಿಲೇಮಾಡಿ : ಪ್ರಭುಲಿಂಗ ಕವಳಿಕಟ್ಟಿ