City Rounds News

Kannada News Website

 ಶಿವಮೊಗ್ಗದಲ್ಲಿ ಕೆಲ ಮಧ್ಯದ ಅಂಗಡಿಗಳಿಗೆ ಕಾನೂನು ನಿಯಮಗಳಿಲ್ಲವೇ…?

ಶಿವಮೊಗ್ಗ :ಸಿಟಿ ರೌಂಡ್ಸ್ ನ್ಯೂಸ್ 

ಅಣ್ಣಪ್ಪ.ಎಂ

ಶಿವಮೊಗ್ಗ ನಗರದಲ್ಲಿ ರಾತ್ರಿ 11 ಗಂಟೆಯ ನಂತರ ಹಲವಾರು ಕಡೆ ಮಕ್ಕಳು ಕುಡಿಯುವ ಹಾಲು ಸಿಗುವುದಿಲ್ಲ, ದಿನಸಿ ಅಂಗಡಿ ಸಿಗುವುದಿಲ್ಲ, ಮೆಡಿಕಲ್ ಔಷಧಿ ಗಳು ಸಿಗುವುದಿಲ್ಲ, ಹಣ್ಣಿನ ಅಂಗಡಿ ಸಿಗುವುದಿಲ್ಲ, ಆದರೆ  ಸಾರ್ವಜನಿಕರಿಗಾಗಿ ಕೇಲವರು ಈ ರೀತಿಯ ಎಲ್ಲಾ ಅಂಗಡಿಗಳು ರಾತ್ರಿ ಸಮಯದಲ್ಲಿ 11 ಗಂಟೆಯ ವರೆಗೆ ಬಾಗಿಲು ತೆರೆದರೆ, ಅಂಗಡಿ ಮಾಲೀಕರನ್ನು ಅವಾಚ್ಯ ಶಬ್ದಗಳಿಂದ ಬೈದು ನಿಂದಿಸುವ ಮೂಲಕ ಬಾಗಿಲನ್ನು ಮುಚ್ಚಿಸುವಂತ ಕೆಲ ಪೊಲೀಸ್ ಸಿಬ್ಬಂದಿಗಳು, ಮಧ್ಯ ಮಾರಾಟದ ಅಂಗಡಿಗಳಿಗೆ,   ಸಿ ಎಲ್ 2 ಹಾಗೂ ಇನ್ನಿತರ ಮಧ್ಯದ ಅಂಗಡಿಗಳಿಗೆ ಅಬಕಾರಿ ಇಲಾಖೆಯಿಂದ ನಿಗದಿಪಡಿಸಿರುವ ಸಮಯ 10 ಗಂಟೆಯ ನಂತರ ಅಥವಾ 10 ಗಂಟೆ 30 ನಿಮಿಷಗಳ ನಂತರ ಮಧ್ಯದ ಅಂಗಡಿಗಳನ್ನು ಮುಚ್ಚಬೇಕೆಂಬ ಅಬಕಾರಿ ಹಾಗೂ ಸರ್ಕಾರದ ಸುತ್ತೋಲೆಗಳಿವೆ. ಆದರೆ ಕೆಲವು ಮಧ್ಯದ ಅಂಗಡಿಗಳಿಗೆ ಯಾವುದೇ ರೀತಿಯ ಕಾನೂನಿನ ನಿಯಮಗಳು ಅನ್ವಯಿಸುವುದಿಲ್ಲವೇ..? ಅದರೆ ದಿನಸಿ ಅಂಗಡಿ ,ಹಾಲಿನ ಡೈರಿ ,ಹಣ್ಣಿನ ಅಂಗಡಿ, ಔಷಧಿಗಳ ಅಂಗಡಿಗಳಿಂದ ಸಮಸ್ಯೆಯೇ..? ಸಮಾಜದಲ್ಲಿ ಮಧ್ಯಪಾನದಿಂದ ಅನೇಕ ಕುಟುಂಬಗಳು ಇಂದು ಬೀದಿಗೆ ಬಿದ್ದಿವೆ. ಹಾಗೂ ಇನ್ನಿತರ ದುರ್ಘಟನೆಗಳಿಗೆ, ಹಾಗೂ ಮಧ್ಯ ಸೇವನೆಯಿಂದಾಗುವಂತಹ ಅಪಘಾತಗಳು ಹಾಗೂ ಕೊಲೆ ಇನ್ನಿತರ ಅನೇಕ ದುರಂತ ಗಳಿಗೆ ಮಧ್ಯ ಪಾನವೇ ಕಾರಣವಾಗಿದೆ ಎಂಬುದು ಹಲವಾರು ಉದಾಹರಣೆಗಳು ಕಾಣಸಿಗುತ್ತವೆ. ಆದರೂ ಇಂತಹ ಮಧ್ಯದ ಅಂಗಡಿಗಳನ್ನು  ರಾತ್ರಿ 11ಗಂಟೆಯ ನಂತರವು ತೆರೆಯಲು ಅವಕಾಶ ಕಲ್ಪಿಸಲಾಗಿದೆ. ಎಂತಹ ವಿಪರ್ಯಾಸ ಎಂದರೆ ರಾತ್ರಿ 11ಗಂಟೆಯ ನಂತರ ಮಕ್ಕಳು ಕುಡಿಯುವ ಹಾಲು ಸಿಗುವುದಿಲ್ಲ , ಕುಡಿಯಲು ಸಾರಾಯಿ ಸಿಗುತ್ತದೆ ಎಂದರೆ ಅಬಕಾರಿ ಇಲಾಖೆ ಎಷ್ಟರಮಟ್ಟಿಗೆ ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಿದೆ ಹಾಗೂ ಇಂತಹ ಮಧ್ಯದ ಅಂಗಡಿಗಳಿಂದ ಅಬಕಾರಿ ಇಲಾಖೆ ಹಾಗೂ ಪೊಲೀಸ್ ಇಲಾಖೆಯ ಕೆಲ ಸಿಬ್ಬಂದಿಗಳು ಬಂಗಾರ ಬಣ್ಣದ ಕ್ರೀಮ್ ಎಷ್ಟು ತಿನ್ನುತ್ತಿದ್ದಾರೆ ಎಂದು ಎದ್ದು ಕಾಣುತ್ತಿದೆ. ಅದರಿಂದ ಜಿಲ್ಲಾಧಿಕಾರಿಗಳು ದಯಮಾಡಿ ಸಂಬಂಧಪಟ್ಟಂತಹ ಇಲಾಖೆಗಳಿಗೆ  ಕಾನೂನು ನಿಯಮಗಳಂತೆ ಮಧ್ಯದ ಅಂಗಡಿಗಳನ್ನು ಸರ್ಕಾರ ನಿಗದಿಪಡಿಸಿರುವ ಸಮಯದ ನಂತರ ತೆರೆಯದಂತೆ ಸೂಚನೆ ನೀಡುವ ಮೂಲಕ ನಿಯಮ ಉಲ್ಲಂಘನೆ ಮಾಡಿದಂತಹ ಮಧ್ಯದ ಅಂಗಡಿಗಳ ಪರವಾನಿಗೆಯನ್ನು ರದ್ದು ಪಡಿಸಬೇಕೆಂದು ಶಿವಮೊಗ್ಗ ಜಿಲ್ಲಾಧಿಕಾರಿಗಳಿಗೂ ಹಾಗೂ ಅಬಕಾರಿ ಇಲಾಖೆಯ ಆಯುಕ್ತರಿಗೂ  ಪೊಲೀಸ್ ಇಲಾಖೆಯ ಅಧಿಕಾರಿಗಳಿಗೂ. ಶಿವಮೊಗ್ಗ ನಗರದ ಜನತೆಯ ಪರವಾಗಿ ಸಿಟಿ ರೌಂಡ್ಸ್ ಪತ್ರಿಕೆಯ ಮನವಿ.