City Rounds News

Kannada News Website

ಸಾರ್ವಜನಿಕರಿಂದ ಹಣ ವಸುಲಿ: ಕ್ರಮ ಕೈಗೊಳ್ಳುವಂತೆ, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದಿಂದ ಮನವಿ..!

ಶಿವಮೊಗ್ಗ: ಸಿಟಿ ರೌಂಡ್ಸ್ ನ್ಯೂಸ್ 
ಅಣ್ಣಪ್ಪ. ಎಂ

ಶಿವಮೊಗ್ಗ: ಶಿವಮೊಗ್ಗದ ಕೆಎಸ್ಆರ್ ಟಿಸಿ ಬಸ್ ನಿಲ್ದಾಣದಲ್ಲಿ ಇರುವ ಶೌಚಾಲಯಗಳಲ್ಲಿ ನಿಗದಿಗಿಂತ ಹೆಚ್ಚಿನ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಕೆ ಆರ್ ಎಸ್, ಪಕ್ಷದಿಂದ ಅನೇಕ ಬಾರಿ ಸಂಬಂಧ ಪಟ್ಟಂತಹ ಅಧಿಕಾರಿಗಳಿಗೆ ದೂರು ನೀಡಿದ್ದರು. ಅಧಿಕಾರಿಗಳು ಯಾವುದೇ ರೀತಿಯ ಕಾನೂನು ಕ್ರಮ ಕೈಗೊಳ್ಳುವಲ್ಲಿ ವಿಫಲರಾಗಿದ್ದಾರೆ. ಆದ್ದರಿಂದ ಮತ್ತೊಮ್ಮೆ ದಿನಾಂಕ 23-01-2025ರಂದು ಶಿವಮೊಗ್ಗ ನಗರದ ಕೆ ಎಸ್ ಆರ್ ಟಿ ಸಿ ವಿಭಾಗದ ಡಿಪೋ ಮ್ಯಾನೇಜರ್ ರವರಿಗೆ. ಕೆ ಆರ್ ಎಸ್, ಪಕ್ಷದಿಂದ ಮನವಿ ನೀಡಲಾಯಿತು. ಶೌಚಾಲಯದಲ್ಲಿ ಮತ್ತೆ ಇದೇ ಪರಿಸ್ಥಿತಿ ಮುಂದುವರೆದರೆ,ಕೆ ಆರ್ ಎಸ್, ಪಕ್ಷದ ವತಿಯಿಂದ, ಸಂಬಂಧ ಪಟ್ಟವರ ವಿರುದ್ಧ ಎಫ್ಐಆರ್ ದಾಖಲಿಸಲಾಗುವುದು ಎಂದು ಎಚ್ಚರಿಸಿದರು.ಈ ಸಂದರ್ಭದಲ್ಲಿ ,ಕೆ ಆರ್ ಎಸ್, ಪಕ್ಷದ ಜಿಲ್ಲಾಧ್ಯಕ್ಷರಾದ – ಎಸ್ ಕೆ ಪ್ರಭು,  ಶಿವಮೊಗ್ಗ ಜಿಲ್ಲಾ ಪ್ರಧಾನ ಕಾರ್ಯದರ್ಶಿ – ದಯಾನಂದ್, ರಾಜ್ಯ ಯುವ ಕಾರ್ಯದರ್ಶಿ – ಧನಂಜಯ್  ಹಾಗೂ ಕೃಷ್ಣ ಮುಂತಾದವರು ಹಾಜರಿದ್ದರು.