City Rounds News

Kannada News Website

ಮಂಜುಳ.ಆರ್ ಇವರಿಂದ ಮಲೆನಾಡು ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ ಲಿ., ನಿರ್ದೇಶಕರ ಚುನಾವಣೆಗೆ ನಾಮಪತ್ರ ಸಲ್ಲಿಕೆ..!

ಶಿವಮೊಗ್ಗ:ಸಿಟಿ ರೌಂಡ್ಸ್ ನ್ಯೂಸ್
ಅಣ್ಣಪ್ಪ.ಎಂ
ಶಿವಮೊಗ್ಗ: ಶಿವಮೊಗ್ಗದಲ್ಲಿನ ಪಂಪನಗರದ 2 ನೇ ತಿರುವಿನಲ್ಲಿ ಇರುವ ಮಲೆನಾಡು ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ ಲಿ., ನಿರ್ದೇಶಕರ ಚುನಾವಣೆಗೆ ಇಂದು ಬೆಳಿಗ್ಗೆ ಸಂಘದ ಕಚೇರಿಯಲ್ಲಿ ಮಹಿಳಾ ಮೀಸಲು ಕ್ಷೇತ್ರದ ಅಭ್ಯರ್ಥಿ ಯಾಗಿ ಮಂಜುಳ. ಆರ್ ಕೋಂ ಡಿ.ಜಿ.ನಾಗರಾಜ ಇವರು ನಾಮಪತ್ರವನ್ನು ರಿಟರ್ನಿಂಗ್ ಅಧಿಕಾರಿಗೆ ಸಲ್ಲಿಸಿದರು.
 ನಿರ್ದೇಶಕ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ ನಂತರ ಮಾತನಾಡಿದ ಅಭ್ಯರ್ಥಿ ಮಂಜುಳರವರು, ನಾನು ಶಿವಮೊಗ್ಗ ನಗರದ ಗೋಪಾಲಗೌಡ ಬಡಾವಣೆಯ ಸಿ ಬ್ಲಾಕ್ ನಲ್ಲಿ ವಾಸವಾಗಿರುತ್ತೆನೆ. ಆಡಳಿತ ಮಂಡಳಿಯ ಸಾಮಾನ್ಯ ಚುನಾವಣೆ ಮುಂದಿನ 5 ವರ್ಷಗಳ ಅವಧಿಗೆ ನಡೆಯಲಿದೆ. ನಾನು ಮಹಿಳಾ ಮೀಸಲು ಕ್ಷೇತ್ರ ದಿಂದ ಸ್ಪರ್ದಿಸುತ್ತಿದ್ದು, ನಮ್ಮ ಸೊಸೈಟಿ ಸದಸ್ಯರೆಲ್ಲರೂ ಈ ಬಾರಿ ಹೊಸ ನೂತನ ಮಹಿಳಾ ಅಭ್ಯರ್ಥಿಯನ್ನು ಆಯ್ಕೆ ಮಾಡಲಿದ್ದಾರೆ. ನನಗೆ ಎಲ್ಲರೂ ಆಶೀರ್ವದಿಸಿ ಬೆಂಬಲವನ್ನು ಮತಗಳ ಮೂಲಕ ನೀಡಲಿದ್ದಾರೆ ಎಂಬುವ ವಿಶ್ವಾಸ ನನಗೆ ಇದೆ ಎಂದರು.ಅವಿರೋಧವಾಗಿ ಆಯ್ಕೆಯಾಗುವ ಸಂಭವ ಸಹ ಇದೆ ಎಂದರು. ಸಂಘದ ಹಲವಾರು ಸದಸ್ಯರ ಅಪೇಕ್ಷೆಯಂತೆ ನಾನು ಚುನಾವಣೆಗೆ ಸ್ಪರ್ದಿಸಿರುತ್ತೆನೆ ಎಂದರು.
ನಾನು ಈಗಾಗಲೇ ರಾಜ್ಯ ಒಕ್ಕಲಿಗರ ಸಂಘದ ಸದಸ್ಯಳಾಗಿರುತ್ತೆನೆ. ಹಾಗೆಯೇ ಜಿಲ್ಲಾ ಒಕ್ಕಲಿಗರ ಸಂಘದ ಸದಸ್ಯೆ ಕೂಡ ಆಗಿರುತ್ತೆನೆ. ಚುನಾವಣೆ ನಡೆದಲ್ಲಿ ನಾನು ಎಲ್ಲಾ ಸದಸ್ಯರನ್ನು ಮುದ್ದಾಂ ಬೇಟಿ ಮಾಡಲು ಸಾದ್ಯವಾಗದಿದ್ದರೂ ಪತ್ರ ಮುಖೇನಾ ಎಲ್ಲರನ್ನೂ ಸಂಪರ್ಕಿಸಲು ಪ್ರಯತ್ನಿಸುತ್ತೆನೆ. ಪತ್ರದ ಮುಖಾಂತರ ನನಗೆ ಮತ ನೀಡಲು ವಿನಂತಿ ಮಾಡುತ್ತೆನೆ. ನನಗೆ ಈ ಬಾರಿ ನಮ್ಮ ಸೊಸೈಟಿ ಸದಸ್ಯರು ಅತ್ಯಧಿಕ ಮತಗಳಿಂದ ಜಯಶೀಲರನ್ನಾಗಿ ಮಾಡುತ್ತಾರೆ ಎಂಬುವ ನಂಬಿಕೆ ನನಗೆ ಇದೆ ಎಂದರು.ನಮ್ಮ ಸೊಸೈಟಿ ಸದಸ್ಯರ ಸೇವೆಗೆ ನಾನು ಸದಾ ಸಿದ್ದಳಾಗಿರುತ್ತೆನೆ. ನಮ್ಮ ಸೊಸೈಟಿಯ ಸದಸ್ಯರು ನನ್ನ ಮೊಬೈಲ್ ನಂಬರ್:ಮಂಜುಳ.  9449853043, ಡಿ.ಜಿ.ನಾಗರಾಜ 9449063043ಸಂಪರ್ಕಿಸಬಹುದು.ನನ್ನ ಮೊಬೈಲ್ ಗೆ ಪೋನ್ ಮಾಡುವುದರ ಮೂಲಕ ತಮ್ಮ ಬೆಂಬಲ ಮತ್ತು ನನ್ನ ಗೆಲುವಿಗೆ ಸಹಕರಿಸಲು ತಮ್ಮಲ್ಲಿ ವಿನಂತಿಸಲಾಗಿದೆ.
ಮಲೆನಾಡು ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ ಲಿ., ಆಡಳಿತ ಮಂಡಳಿಯ ನಿರ್ದೇಶಕರ ಚುನಾವಣೆಯ ಮತದಾನ ದಿನಾಂಕ 19-01-2025 ರಂದು ಭಾನುವಾರ ಜಿಲ್ಲಾ ಒಕ್ಕಲಿಗರ ಸಮುದಾಯ ಭವನ ಬಾಲರಾಜ್ ಅರಸ್ ರಸ್ತೆ ಶಿವಮೊಗ್ಗದಲ್ಲಿ ನಡೆಯಲಿದೆ. ಮತದಾನದ ಸಮಯ ಬೆಳಿಗ್ಗೆ 9 ರಿಂದ ಸಂಜೆ 4 ಗಂಟೆಯವರೆಗೆ ಇರುತ್ತದೆ ಎಂದರು.
ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಸತ್ಯನಾರಾಯಣ, ಡಿ.ಜಿ.ನಾಗರಾಜ್ ಹಾಜರಿದ್ದರು.