City Rounds News

Kannada News Website

ಅರ್ಧ ಹೆಲ್ಮೆಟ್, ದೋಷಪೂರಿತ ಸೈಲೆನ್ಸರ್, LED ಲೈಟ್ ಗಳ ಮೇಲೆ ಬುಲ್ಡೋಜರ್.!

ಶಿವಮೊಗ್ಗ: ಸಿಟಿ ರೌಂಡ್ಸ್ ನ್ಯೂಸ್
ಅಣ್ಣಪ್ಪ ಎಂ.

 

 

ಭದ್ರಾವತಿ:   ಭದ್ರಾವತಿ ನಗರದಲ್ಲಿ ಈ ಹಿಂದೆ ವಿಶೇಷ ಕಾರ್ಯಾಚರಣೆ ನೆಡೆಸಿ ವಶ ಪಡಿಸಿಕೊಳ್ಳಲಾದ 3000 ಅರ್ಧ ಹೆಲ್ಮೆಟ್ (Half Helmet), 20 ದೋಷಪೂರಿತ ಸೈಲೆನ್ಸರ್ (Defective Silencer) 50 ಪ್ರಕರ ಬೆಳಕಿನ LED ಲೈಟ್ ಗಳನ್ನು ಈ ದಿನ ದಿನಾಂಕಃ- 29-12-2024 ರಂದು ಬೆಳಗ್ಗೆ ಪೊಲೀಸ್ ಅಧೀಕ್ಷಕರು ಮಿಥುನ್ ಕುಮಾರ್ ಜಿ.ಕೆ . ಐ.ಪಿ.ಎಸ್, ಶಿವಮೊಗ್ಗ ಜಿಲ್ಲೆ ರವರ ಸಮ್ಮುಖದಲ್ಲಿ ಭದ್ರಾವತಿ ನಗರದ ರಂಗಪ್ಪ ವೃತ್ತ ದಲ್ಲಿ ಬುಲ್ಡೋಜರ್ ಅನ್ನು ಬಳಸಿ ನಾಶ ಪಡಿಸಲಾಯಿತು.

ಈ ಸಂದರ್ಭದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಅನಿಲ್ ಕುಮಾರ್ ಭೂಮರೆಡ್ಡಿ, , ಶಿವಮೊಗ್ಗ ಜಿಲ್ಲೆ., ನಾಗರಾಜ್ , ಪೊಲೀಸ್ ಉಪಾಧೀಕ್ಷಕರು, ಭದ್ರಾವತಿ ಉಪ ವಿಭಾಗ, ಜಗದೀಶ್ ಹಂಚಿನಾಳ್, ಪೊಲೀಸ್ ನಿರೀಕ್ಷಕರು, ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆ, ನಾಗಮ್ಮ ಪೊಲೀಸ್ ನಿರೀಕ್ಷಕರು, ಭದ್ರಾವತಿ ಪೇಪರ್ ಟೌನ್ ಪೊಲೀಸ್ ಠಾಣೆ, ಮತ್ತು ಭದ್ರಾವತಿ ನಗರದ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂಧಿಗಳು ಉಪಸ್ಥಿತರಿದ್ದರು.