City Rounds News

Kannada News Website

ಗಾಜನೂರು ರಸ್ತೆ ಹೊಸ ಹಳ್ಳಿ ಕಾನೇಹಳ್ಳ ಕ್ರಾಸ್ ಬಳಿ ರಸ್ತೆ ಅಪಘಾತ ಇಬ್ಬರು ವಿದ್ಯಾರ್ಥಿಗಳು ಸ್ಥಳದಲ್ಲೇ ಸಾವು

ಶಿವಮೊಗ್ಗ ಸಿಟಿ ರೌಂಡ್ಸ್ ನ್ಯೂಸ್
ಅಣ್ಣಪ್ಪ ಎಂ.

ಶಿವಮೊಗ್ಗ ನಗರದ ಹೊರವಲಯದಲ್ಲಿ ರಸ್ತೆ ಅಪಘಾತ ನಡೆದಿದ್ದು ಇಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಇಂದು ಬೆಳಿಗ್ಗೆ ಕಾನೇಹಳ್ಳ ಕ್ರಾಸ್ ಬಳಿ ನಡೆದಿದೆ. ಗಾಜನೂರಿನ ಐಟಿಐ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಗಳಾದ (20) ನಿಸಾರ್ ಆರ್ ಎಂ ಎಲ್ ನಗರ ನಿವಾಸಿಯಾಗಿದ್ದರೆ, ಮತ್ತೋರ್ವ ವಿದ್ಯಾರ್ಥಿಯಾಗಿದ್ದು ಯಶವಂತ್ ಎಂಬ ವಿದ್ಯಾರ್ಥಿ ಮಂಜುನಾಥ ಬಡಾವಣೆ ನಿವಾಸಿಯಾಗಿದ್ದಾರೆ. ಕಾಲೇಜಿಗೆ ತೆರಳುವಾಗ ಅಪಘಾತ ಸಂಭವಿಸಿದೆ ಇಬ್ಬರೂ ಸಾವನ್ನಪ್ಪಿದ್ದಾರೆ.‌ಕೆಟಿಎಂ ಬೈಕ್ ನಲ್ಲಿ ನಿಸಾರ್ ಮತ್ತು ಯಶವಂತ್ ಕಾಲೇಜಿಗೆ ಹೋಗುವಾಗ ಕಾನೇಹಳ್ಳದ ಕ್ರಾಸ್ ಬಳಿ ಬೈಕ್ ಸವಾರನ ನಿಯಂತ್ರಣ ತಪ್ಪಿ ಖಾಸಗಿ ಜಾಹೀರಾತು ಫಲಕದ ಕಬ್ಬಿಣದ ಕಂಬಕ್ಕೆ ಗುದ್ದಿದ್ದಾನೆ. ಬೈಕ್ ಸವಾರರ ಇಬ್ಬರ ತಲೆಗೂ ಬಲವಾದ ಹೊಡೆತ ಬಿದ್ದಿದ್ದರಿಂದ ಇಬ್ಬರೂ ಸ್ಥಳದಲ್ಲಿಯೇ ಸಾವು ಕಂಡಿದ್ದಾರೆ‌.

ಕೆಟಿಎಂ ದ್ವಿಚಕ್ರ ವಾಹನ ವನ್ನು ಯಶವಂತ್ ಚಲಾಯಿಸುವಾಗ‌ ಈ ಘಟನೆ ನಡೆದಿದೆ. ತುಂಗ ನಗರ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಇಬ್ಬರ ಮೃತ ದೇಹವನ್ನ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.ಯಶವಂತ್ ದ್ವಿತೀಯ ವರ್ಷದ ಐಟಿಐ ವಿದ್ಯಾರ್ಥಿಯಾದರೆ, ನಿಸಾರ್ ಮೊದಲನೆ ವರ್ಷದ ಐಟಿಐ ವಿದ್ಯಾರ್ಥಿಯಾಗಿದ್ದಾನೆ ಎಂದು ತಿಳಿದುಬಂದಿದೆ.