ಶಿವಮೊಗ್ಗ ಸಿಟಿ ರೌಂಡ್ಸ್ ನ್ಯೂಸ್
ಅಣ್ಣಪ್ಪ ಎಂ.
ಶಿವಮೊಗ್ಗ ನಗರದಲ್ಲಿ ಆಟೋ ಚಾಲಕರುಗಳು ಆಟೋ ಮೀಟರ್ ಗಳನ್ನು ಬಳಸದೆ, ಹೆಚ್ಚಿನ ದರವನ್ನು ಕೇಳುತ್ತಿರುವ ಬಗ್ಗೆ ಬಂದ ಮಾಹಿತಿಯ ಹಿನ್ನೆಲೆಯಲ್ಲಿ ದಿನಾಂಕಃ 07-11-2024 ರಂದು ಮಿಥುನ್ ಕುಮಾರ್ ಜಿ.ಕೆ ಐಪಿಎಸ್ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಶ್ರೀ ಅನಿಲ್ ಕುಮಾರ್ ಭೂಮರಡ್ಡಿ , ಕಾರಿಯಪ್ಪ ಎ. ಜಿ.ಪೊಲೀಸ್ ರವರ ಮಾರ್ಗದರ್ಶನದಲ್ಲಿ, ಸುರೇಶ್ ಡಿವೈಎಸ್.ಪಿ ಶಿವಮೊಗ್ಗ ಉಪ ವಿಭಾಗ ರವರ ಮೇಲ್ವಿಚಾರಣೆಯಲ್ಲಿ ಸಂತೋಷ್, ಪೊಲೀಸ್ ವೃತ್ತ ನಿರೀಕ್ಷಕರು, ಶಿವಮೊಗ್ಗ ಸಂಚಾರ ವೃತ್ತ ರವರ ನೇತೃತ್ವದಲ್ಲಿ ಶಿವಮೊಗ್ಗ ಪೂರ್ವ ಮತ್ತು ಪಶ್ಚಿಮ ಸಂಚಾರಿ ಪೊಲೀಸ್ ಠಾಣೆಯ ಪಿಎಸ್ಐ ಹಾಗೂ ಅಧಿಕಾರಿ ಮತ್ತು ಸಿಬ್ಬಂಧಿಗಳ ತಂಡವು ಶಿವಮೊಗ್ಗ ನಗರದಲ್ಲಿ ವಿಶೇಷ ಕಾರ್ಯಾಚರಣೆಯನ್ನು ನಡೆಸಿ, ಆಟೋಗಳನ್ನು ತಡೆದು, ಸಾರ್ವಜನಿಕರು ಪ್ರಯಾಣಿಸುವ ಸಮಯದಲ್ಲಿ ಆಟೋಗಳಲ್ಲಿ ಮೀಟರ್ ಬಳಕೆ ಮಾಡುತ್ತಿರುವ ಬಗ್ಗೆ ತಪಾಸಣೆ ಮಾಡಿ,
ಮೀಟರ್ ಬಳಕೆ ಮಾಡದೇ ಇದ್ದವರ ವಿರುದ್ಧ ಆಟೋ ಚಾಲಕರ ವಿರುದ್ದ IMV ಕಾಯ್ದೆಯಡಿ ಒಟ್ಟು 100 ಪ್ರಕರಣಗಳನ್ನು ದಾಖಲಿಸಿ, 20 ಆಟೋಗಳನ್ನು ವಶಕ್ಕೆ ಪಡೆಯಲಾಗಿರುತ್ತದೆ.
ಆಟೋ ಚಾಲಕರು ಕಡ್ಡಾಯವಾಗಿ ಆಟೋ ಮೀಟರ್ ಅನ್ನು ಬಳಕೆ ಮಾಡುವಂತೆ ಅನುಷ್ಠಾನ ಮಾಡುವಲ್ಲಿ ಸಾರ್ವಜನಿಕರ ಸಹಕಾರವು ಅಗತ್ಯವಾಗಿದ್ದು, ಯಾವುದೇ ಆಟೋ ಚಾಲಕರು ಆಟೋ ಮೀಟರ್ ಅನ್ನು ಬಳಕೆ ಮಾಡದೇ ಇದ್ದಲ್ಲಿ ಅಥವಾ ನಿರಾಕರಿಸಿದ್ದಲ್ಲಿ
ಪೊಲೀಸ್ ಇಲಾಖೆಗೆ ದೂರು ನೀಡುವುದು. ಸಾರ್ವಜನಿಕರ ದೂರಿನ ಮೇರೆಗೆ, ಆಟೋ ಮೀಟರ್ ಬಳಕೆ ಮಾಡದ ಆಟೋ ಚಾಲಕರ ವಿರುದ್ಧ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗುವುದು ಎಂದು ಶಿವಮೊಗ್ಗ ನಗರದ ಆಟೋ ಚಾಲಕರಿಗೆ, ಮಿಥುನ್ ಕುಮಾರ್ ಜಿ.ಕೆ ಐಪಿಎಸ್ ಪೊಲೀಸ್ ಅಧೀಕ್ಷಕರು, ಎಚ್ಚರಿಕೆ ನೀಡಿದ್ದಾರೆ.

More Stories
ಜೈಲಿನ ಖೈದಿಗಳ ಬಳಿ ವರ್ಷದಿಂದ ವರ್ಷಕ್ಕೆ ಮೊಬೈಲ್ಗಳ ಸಂಖ್ಯೆಯಲ್ಲಿ ಹೆಚ್ಚಳ : 410 ವಿವಿಧ ಕಂಪನಿಯ ಮೊಬೈಲ್ ಪತ್ತೆ..!!
ಕಸ್ತೂರಿ ರಂಗನ್ ವರದಿ ಕುರಿತು ತೀರ್ಥಹಳ್ಳಿಯಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕೊಟ್ಟ ಸೂಚನೆಯಾದರೂ ಏನು ..?
ಸಂಗ್ರ ಹ ಮಾಡಲಾಗಿರುವ ಅಕ್ರಮ ಮರಳನ್ನು ತ್ವರಿತವಾಗಿ ವಿಲೇಮಾಡಿ : ಪ್ರಭುಲಿಂಗ ಕವಳಿಕಟ್ಟಿ