ಶಿವಮೊಗ್ಗ ತಾಲೂಕು ಕಚೇರಿಯ ನೌಕರನಾದ ಗ್ರಾಮ ಲೆಕ್ಕಿಗ ಸಂಜಯ್ ಮೋಹಿತ್ ಎಸ್ ಆರ್. ಎಂಬಾತನು. ಅಗಸವಳ್ಳಿ ಗ್ರಾಮ ಪಂಚಾಯಿತಿಯ ವ್ಯಾಪ್ತಿಗೆ ಒಳಪಟ್ಟಂತಹ ಹೊಸೂರು ಗ್ರಾಮದ ನಿವಾಸಿ ಮುನಿರಂಗೇಗೌಡ ಎನ್ . ಎಂಬ ವ್ಯಕ್ತಿಯ ಪಿತ್ರಾರ್ಜಿತ ಆಸ್ತಿಯಾದ 2ಎಕರೆ ಜಮೀನು ಅಜ್ಜನ ಆಸ್ತಿಯನ್ನು ಅಜ್ಜನ ಮರಣದ ನಂತರ ಮುನಿ ರಂಗೇಗೌಡರವರ ಅಜ್ಜಿಯ ಹೆಸರಿಗೆ ಪೌತಿ ಖಾತೆ ಮಾಡಿಕೊಡಲು ಸುಮಾರು 25,000 ಹಣವನ್ನು ಲಂಚವಾಗಿ ನೀಡುವುದಾದರೆ ನಿಮ್ಮ ಅಜ್ಜನ ಆಸ್ತಿಯಾದ ಎರಡು ಎಕ್ಕರೆ ಜಮೀನು ಆಸ್ತಿಯನ್ನು ಪೌತಿ ಖಾತೆ ಮಾಡಿಕೊಡುತ್ತೇನೆಂದು ಲಂಚಕ್ಕಾಗಿ ಬೇಡಿಕೆ ಇಟ್ಟಿದ್ದ.
ಸಮಯದಲ್ಲಿ ಎಚ್ಚೆತ್ತುಗೊಂಡಂತಹ ಮುನಿ ರಂಗೇಗೌಡ ತಮ್ಮ ಮೊಬೈಲ್ ನಲ್ಲಿ ಗ್ರಾಮಲೆಕ್ಕಿಗ ಸಂಜಯ್ ಮೋಹಿತ್ ಮಾತಾಡಿದಂತಹ ಪೂರ್ಣ ಸಂಭಾಷಣೆಯನ್ನು ರೆಕಾರ್ಡ್ ಮಾಡಿಕೊಂಡು ನೇರವಾಗಿ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳಿಗೆ ದೂರು ನೀಡಿರುತ್ತಾರೆ. ಶಿವಮೊಗ್ಗದ ಹಳೇ ಜೈಲು ಆವರಣದಲ್ಲಿರುವ ಗ್ರಾಮ ಆಡಳಿತ ಕಚೇರಿಯಲ್ಲಿ ಮುನಿರಂಗೇಗೌಡರಿಂದ ಮೋಹಿತ್ ರವರು 25,000 ಲಂಚದ ಹಣ ಪಡೆಯುವಾಗ ಲೋಕಾಯುಕ್ತ ಪೊಲೀಸ್ ತಂಡದ ಬಲೆಗೆ ಸಿಕ್ಕಿಬಿದ್ದಿದ್ದಾರೆ. ಅಪರಾಧಿ ಗ್ರಾಮಲೆಕ್ಕಿಗ ಸಂಜಯ್ ಮೋಹಿತ್ ನನ್ನ ವಶಕ್ಕೆ ತೆಗೆದುಕೊಂಡು ತನಿಖೆ ನಡೆಸಿದ್ದಾರೆ. ಭ್ರಷ್ಟರ ಬೇಟೆಯ ಕಾರ್ಯಾಚರಣೆಯ ನೇತೃತ್ವವನ್ನು ಲೋಕಾಯುಕ್ತ ಎಸ್ಪಿ ಮಂಜುನಾಥ ಚೌದರಿ ಎಂ.ಎಚ್. ಅವರ ನೇತೃತ್ವದಲ್ಲಿ . ಕರ್ತವ್ಯ ನಿರ್ವಹಿಸಿದ ತಂಡದಲ್ಲಿ ಇನ್ಸ್‌ಪೆಕ್ಟರ್ ಶ್ರೀ ಹೆಚ್.ಎಸ್. ಸುರೇಶ್, ಮತ್ತು ಸಿಬ್ಬಂದಿಗಳಾದ ಯೋಗೇಶ್, ಟೀಕಪ್ಪ, ಸುರೇಂದ್ರ, ಪ್ರಶಾಂತ್ ಕುಮಾರ್, ಚೆನ್ನೇಶ್, ಅರುಣ್ ಕುಮಾರ್.ದೇವರಾಜ್, ಪುಟ್ಟಮ್ಮ, ಗಂಗಾಧರ, ಪ್ರದೀಪ್, ಜಯಂತ್ ಮತ್ತು ತರುಣ್ ಕುಮಾರ್ ಅವರು ಪಾಲ್ಗೊಂಡಿದ್ದರು…
More Stories
ಜೈಲಿನ ಖೈದಿಗಳ ಬಳಿ ವರ್ಷದಿಂದ ವರ್ಷಕ್ಕೆ ಮೊಬೈಲ್ಗಳ ಸಂಖ್ಯೆಯಲ್ಲಿ ಹೆಚ್ಚಳ : 410 ವಿವಿಧ ಕಂಪನಿಯ ಮೊಬೈಲ್ ಪತ್ತೆ..!!
ಕಸ್ತೂರಿ ರಂಗನ್ ವರದಿ ಕುರಿತು ತೀರ್ಥಹಳ್ಳಿಯಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕೊಟ್ಟ ಸೂಚನೆಯಾದರೂ ಏನು ..?
ಸಂಗ್ರ ಹ ಮಾಡಲಾಗಿರುವ ಅಕ್ರಮ ಮರಳನ್ನು ತ್ವರಿತವಾಗಿ ವಿಲೇಮಾಡಿ : ಪ್ರಭುಲಿಂಗ ಕವಳಿಕಟ್ಟಿ