City Rounds News

Kannada News Website

ಅಡುಗೆ ಮಾಡುವಾಗ ಮೊಬೈಲ್ ಬಳಕೆ ಸಂಭವಿಸಬಹುದು ಸಾವು ಎಚ್ಚರಿಕೆ :

ಶಿವಮೊಗ್ಗ: ಸಿಟಿ ರೌಂಡ್ಸ್ ನ್ಯೂಸ್
ಅಣ್ಣಪ್ಪ ಎಂ.

ಮಧ್ಯ ಪ್ರದೇಶ : ಅಡುಗೆ ಮಾಡುವಾಗ ಕುದಿಯುವ ಎಣ್ಣೆಯ ಬಾಣಲೆಗೆ ಮೊಬೈಲ್ ಫೋನ್ ಬಿದ್ದು ಸ್ಫೋಟಗೊಂಡು ವ್ಯಕ್ತಿ ಸಾವನ್ನಪ್ಪಿದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

 ಮಧ್ಯಪ್ರದೇಶದ ಭಿಂಡ್ ಜಿಲ್ಲೆಯ ಲಾಹರ್ ಮೂಲದ ಚಂದ್ರ ಪ್ರಕಾಶ್ ಎಂಬ ವ್ಯಕ್ತಿ ಘಟನೆಯಲ್ಲಿ ಸಾವನ್ನಪ್ಪಿದ್ದಾನೆ.

ನಿನ್ನೆ, ಚಂದ್ರ ಪ್ರಕಾಶ್ ತನ್ನ ಮೊಬೈಲ್ ನಲ್ಲಿ ಅಡುಗೆ ಮಾಡುವುದನ್ನು ನೋಡುತ್ತಾ ಮಾಂಸ ಬೇಯಿಸುತ್ತಿದ್ದರು. ಆಗ ಅವರ ಕೈಯಲ್ಲಿದ್ದ ಮೊಬೈಲ್ ಫೋನ್ ಜಾರಿ ಕುದಿಯುವ ಎಣ್ಣೆ ಪಾತ್ರೆಗೆ ಬಿದ್ದಿತು.

 

ಪರಿಣಾಮ ಚಂದ್ರ ಪ್ರಕಾಶ್ ಅವರ ಮೊಬೈಲ್ ಫೋನ್ ಸ್ಫೋಟಗೊಂಡು ಬೆಂಕಿ ಹೊತ್ತಿಕೊಂಡಿದ್ದರಿಂದ ಅವರ ದೇಹ ಸಂಪೂರ್ಣವಾಗಿ ಸುಟ್ಟು ಹೋಗಿತ್ತು. ಆಸ್ಪತ್ರೆಗೆ ಹೋಗುವ ಮಾರ್ಗಮಧ್ಯೆಯೇ ಮೃತಪಟ್ಟಿದ್ದಾರೆ. ಅಡುಗೆ ಮನೆಯಲ್ಲಿ ಮೊಬೈಲ್ ಬಳಸುವವರು ಎಚ್ಚರದಿಂದಿರಬೇಕು.