City Rounds News

Kannada News Website

ಪೊಲೀಸ್ ಸಿಬ್ಬಂದಿಯನ್ನು ಕಾರಿನ ಬಾನೆಟ್ ಮೇಲೆ ಎಳೆದೊಯ್ದ ಘಟನೆಯ ಆರೋಪಿ (ಮಿಥುನ್ ಜಗದಾಳೆ)ಯನ್ನು ಇಂದು ಬಂಧಿಸಲಾಗಿದೆ..!

ಶಿವಮೊಗ್ಗ : ಸಿಟಿ ರೌಂಡ್ಸ್ ನ್ಯೂಸ್
ಅಣ್ಣಪ್ಪ ಎಂ

ದಿನಾಂಕ ೨೪-೧೦-೨೦೨೪ ರಂದು ನಡೆದ ಘಟನೆ. ಶಿವಮೊಗ್ಗ ನಗರದ ಸಹ್ಯಾದ್ರಿ ಕಾಲೇಜು ಸಮೀಪ ಟ್ರಾಫಿಕ್ ಪೊಲೀಸರು ದಾಖಲೆ ಪರಿಶಿಲನೆಗಾಗಿ ವಾಹನಗಳನ್ನ ತಡೆದು ಕರ್ತÀವ್ಯ ನಿರ್ವಹಿಸುತ್ತಿದ್ದಾಗ ಭದ್ರವಾತಿ ಕಡೆಯಿಂದ ಬಂದಂತಹ ಕಾರನ್ನು ಟ್ರಾಫಿಕ್ ಪೊಲೀಸ್ ಸಿಬ್ಬಂದಿ ದಾಖಲೆ ಪರಿಶಿಲನೆಗಾಗಿ ವಾಹನವನ್ನು ನಿಲ್ಲಿಸುವಂತೆ ಸೂಚಿಸಿದರು ತಡೆಯಲು ಯತ್ನಿಸಿದರು ವಾಹನವನ್ನು ನಿಲ್ಲಿಸದೆ ಟ್ರಾಫಿಕ್ ಪೊಲೀಸ್ ಸಿಬ್ಬಂದಿಯನ್ನು ವಾಹನದ ಬಾನೆಟ್ ಮೇಲೆ ಬೀಳುವಂತೆ ಮಾಡಿ ಸುಮಾರು ೧೫೦ ಮೀಟರ್ ದೂರ ಎಳೇದ್ಯೋದಂತಹ ಅಮಾನವಿಯ ಘಟನೆ ನಡೆದಿತ್ತು. ಈ ದೃಶ್ಯವನ್ನು ಸ್ಥಳಿಯರೊಬ್ಬರು ಮೊಬೈಲ್‌ನಲ್ಲಿ ಸೆರೆಹಿಡಿಯಲಾಗಿತ್ತು. ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿಗಳನ್ನು ಈ ರೀತಿಯಾಗಿ ಅಮಾನವಿಯ ರೀತಿಯಲ್ಲಿ ಕೃತ್ಯ ಎಸೆಗಿದಂತ ಆರೋಪಿಯನ್ನು ೨೫-೧೦-೨೦೨೪ ಇಂದು ಪೊಲೀಸರು ತನಿಖೆ ನಡೆಸಿ ಆರೋಪಿಯನ್ನು ಇಂದು ಕೋಟೆ ಪೊಲೀಸ್ ಠಾಣೆಯಲ್ಲಿ ಬಂಧಿಸಿದ್ದು .ಈತನು ಮೂಲತ: ಭದ್ರಾವತಿ ತಾಲೂಕು ಹೊಸಮನೆ ಬಡಾವಣೆಯ ನಿವಾಸಿಯಾಗಿದ್ದು ಈತನ ಹೆಸರು (ಮಿಥುನ್ ಜಗದಾಳೆ)

ಎಂದು ತಿಳಿದು ಬಂದಿದೆ. ಇಂತಹ ವ್ಯಕ್ತಿಗಳಿಗೆ ಕಾನೂನಿನ ಪ್ರಕಾರ ಕಠಿಣವಾದ ಶಿಕ್ಷೆಯನ್ನು ನೀಡಬೇಕೆಂದು ಸಾರ್ವಜನಿಕರು ಪೊಲೀಸ್ ಇಲಾಖೆಗೆ ಮನವಿ ಮಾಡುತ್ತಿದ್ದಾರೆ.