City Rounds News

Kannada News Website

ಸಿಗಂದೂರು ಚೌಡೇಶ್ವರಿ ದರ್ಶನ ಪಡೆದ BSY ಮತ್ತು BYR… 

ಶಿವಮೊಗ್ಗ, ಅಕ್ಟೋಬರ್ 08 (ಸಿಟಿ ರೌಂಡ್ಸ್):

ಪವಿತ್ರ ಹಬ್ಬಗಳಲ್ಲಿ ಒಂದಾದ ನವರಾತ್ರಿ ಹಾಗೂ ದಸರಾ ಹಬ್ಬದ ನಿಮಿತ್ತ ಸಾಗರದ ಪ್ರಸಿದ್ಧ ಶಕ್ತಿ ಕೇಂದ್ರವಾದ ಶ್ರೀ ಸಿಗಂದೂರು ಚೌಡೇಶ್ವರಿ ಅಮ್ಮನವರ ಸನ್ನಿಧಾನಕ್ಕೆ ಮಾಜಿ ಮುಖ್ಯಮಂತ್ರಿ ಶ್ರೀ ಬಿ.ಎಸ್. ಯಡಿಯೂರಪ್ಪ ಮತ್ತು ಸಂಸದ ಬಿ ವೈ ರಾಘವೇಂದ್ರ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ನಾಡಿನ ಸಮೃದ್ಧಿಗಾಗಿ ಹಾಗೂ ಲೋಕಸಭಾ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಇನ್ನೂ ಹೆಚ್ಚಿನ ಬಲ ನೀಡುವಂತೆ ಭಕ್ತಿಯಿಂದ ನಿವೇದಿಸಿಕೊಳ್ಳಲಾಯಿತು.  ಈ ಸಮಯದಲ್ಲಿ ದೇವಸ್ಥಾನದ ಧರ್ಮದರ್ಶಿಗಳಾದ ಶ್ರೀ ರಾಮಪ್ಪ ಅವರು, ಪ್ರಮುಖರಾದ ಶ್ರೀ ಗುರುಮೂರ್ತಿ ಅವರು, ಶ್ರೀ ದತ್ತಾತ್ರೇಯ ಅವರು, ಶ್ರೀ ಹಕ್ಕರೆ ಮಲ್ಲಿಕಾರ್ಜುನ್ ಅವರು, ಶ್ರೀ ಸುಧೀಂದ್ರ ಅವರು ಸೇರಿದಂತೆ ಪಕ್ಷದ ಮಂಡಲದ ಅನೇಕ ಮುಖಂಡರು ಜೊತೆಗಿದ್ದರು.