City Rounds News

Kannada News Website

ಮಚ್ಚಿನಿಂದ ಹಲ್ಲೆ ಮಾಡಿದ ಮಂಜುನಾಥನಿಗೆ ಜೀವಾವಧಿ ಶಿಕ್ಷೆ ಮತ್ತು 50,000/- ರೂ ದಂಡ..!!

ಶಿವಮೊಗ್ಗ :21-07-2026

ದಿನಾಂಕಃ 25-08-2020 ರಂದು ರಾಜೇಶ್ವರಿ 35 ವರ್ಷ, ವಾಸ ಸಮನವಳ್ಳಿ ಆನವಟ್ಟಿ, ಸೊರಬ ತಾಲ್ಲೂಕು ರವರು ತಮ್ಮ ಕುಟುಂಬ ದೊಂದಿಗೆ ಮನೆಯ ಮುಂದೆ ಕುಳಿತಿದ್ದಾಗ ಅಲ್ಲಿಗೆ ಬಂದ ಮಂಜುನಾಥ ಬಿನ್ ಆನಂದಪ್ಪ,

25 ವರ್ಷ ವಾಸ ಸಮನವಳ್ಳಿ ಆನವಟ್ಟಿ ಸೊರಬ ತಾಲ್ಲೂಕು ಈತನು ಜಾಗದ ವಿಚಾರವಾಗಿ ಜಗಳ ತೆಗೆದಿದ್ದು, ಆಗ ನಾವು ಈ ಬಗ್ಗೆ ದೂರು ಕೊಡುತ್ತೇವೆ ಎಂದು ರಾಜೇಶ್ವರಿ ರವರು ಹೋಗಲು ಮುಂದಾದಾಗ, ಏಕಾ ಏಕಿ ಮಂಜುನಾಥನು ಮಚ್ಚಿನಿಂದ ರಾಜೇಶ್ವರಿಯ ತಲೆಗೆ ಹಲ್ಲೆ ಮಾಡಿ ಕೊಲೆ ಮಾಡಿರುತ್ತಾನೆ. ಈ ಬಗ್ಗೆ ಆನವಟ್ಟಿ ಪೊಲೀಸ್‌ ಠಾನೆ ಗುನ್ನೆ ಸಂಖ್ಯೆ : 121/2020 ಕಲಂ 504, 302 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿ ತನಿಕೆ ಕೈಗೊಂಡಿರುತ್ತದೆ.

ಪ್ರಕರಣದ ಆಗಿನ ತನಿಖಾಧಿಕಾರಿಗಳಾದ ಶ್ರೀ ಆರ್. ಡಿ. ಮರುಳ ಸಿದ್ದಪ್ಪ, ಸಿಪಿಐ, ಸೊರಬ ವೃತ್ತ ರವರು ಪ್ರಕರಣದ ತನಿಖೆ ಪೂರೈಸಿ, ಘನ ನ್ಯಾಯಾಲಯಕ್ಕೆ ದೋಷಾರೋಪಣ ಪತ್ರ ಸಲ್ಲಿಸಿರುತ್ತಾರೆ.

ಘನ ನ್ಯಾಯಾಲಯದಲ್ಲಿ ಸರ್ಕಾರದ ಪರವಾಗಿ ಶ್ರೀ ಅಣ್ಣಪ್ಪ ನಾಯಕ ಅಭಿಯೋಜಕರವರು ವಾದ ಮಂಡಿಸಿದ್ದು 5ನೇ ಘನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶಿವಮೊಗ್ಗದಲ್ಲಿ ಪ್ರಕರಣದ ವಿಚಾರಣೆ ನಡೆದು, ಆರೋಪಿತನ ವಿರುದ್ಧ ಆರೋಪ ದೃಢಪಟ್ಟ ಹಿನ್ನೆಲೆಯಲ್ಲಿ ಮಾನ್ಯ ನ್ಯಾಯಾಧೀಶರಾದ ಶ್ರೀ ರವೀಂದ್ರ ಆರ್ ರವರು ಈ ದಿನ ಆರೋಪಿಗೆ ಜೀವಾವಧಿ ಕಾರಾಗೃಹ ಶಿಕ್ಷೆ ಮತ್ತು 50,000/- ರೂ ದಂಡವನ್ನು ವಿಧಿಸಿ ಆದೇಶಿಸಿರುತ್ತಾರೆ.