City Rounds News

Kannada News Website

ಜುಲೈ 10 ರಂದು ಮದ್ಯದ ಸನ್ನದುಗಳ ಇ-ಹರಾಜು ಪ್ರಕ್ರಿಯೆ ಕುರಿತು ಬಿಡ್ಡುದಾರರಿಗೆ ತರಬೇತಿ..!!

ಶಿವಮೊಗ್ಗ, ಜು, 06 ಕರ್ನಾಟಕ ಸರ್ಕಾರದ ಅಧಿಸೂಚನೆ ಅನ್ವಯ ಅಬಕಾರಿ ಇಲಾಖೆಯ ಖಾಲಿ ಅಥವಾ ಲಭ್ಯವಿರುವ ಮದ್ಯದ ಸನ್ನದುಗಳನ್ನು (ಸಿಎಲ್-2ಎ ಚಿಲ್ಲರೆ ಮದ್ಯ ಮಾರಾಟ ಮತ್ತು ಸಿಎಲ್-9ಎ ರಿಫ್ರೆಶ್‌ಮೆಂಟ್ ರೂಂ ಬಾರ್) ಎಲೆಕ್ಟ್ರಾನಿಕ್ ಹರಾಜಿನ ಮೂಲಕ ಇ-ಹರಾಜು ಮಾಡಲು ಸರ್ಕಾರ ಉದ್ದೇಶಿಸಿದೆ. ಈ ಹಿನ್ನೆಲೆಯಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ಹರಾಜಾಗಲಿರುವ ಸನ್ನದುಗಳ ಇ-ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸುವ ಸಂಭಾವ್ಯ ಬಿಡ್ಡುದಾರರಿಗೆ ಜುಲೈ 10 ರಂದು ತರಬೇತಿ ಕಾರ್ಯಾಗಾರವನ್ನು ಆಯೋಜಿಸಲಾಗಿದೆ ಎಂದು ಶಿವಮೊಗ್ಗ ಜಿಲ್ಲೆಯ ಅಬಕಾರಿ ಡೆಪ್ಯೂಟಿ ಕಮಿಷನರ್ ತಿಳಿಸಿದ್ದಾರೆ.

 

                        “15 ಮದ್ಯದ ಸನ್ನದುಗಳ ಹಂಚಿಕೆ ವಿವರ”

ಶಿವಮೊಗ್ಗ ಜಿಲ್ಲೆಗೆ ಸಂಬಂಧಿಸಿದಂತೆ ಒಟ್ಟು 15 ಸನ್ನದುಗಳನ್ನು ಇ-ಹರಾಜು ಮಾಡಲು ಹಂಚಿಕೆ ಮಾಡಲಾಗಿದ್ದು, ವಲಯವಾರು ವಿವರ ಹೀಗಿದೆ:ಶಿವಮೊಗ್ಗ ವಲಯ-1: 01, ಶಿವಮೊಗ್ಗ ವಲಯ-2: 02ಭದ್ರಾವತಿ: 03, ಶಿಕಾರಿಪುರ: 01, ಸಾಗರ: 02, ಸೊರಬ: 02, ತೀರ್ಥಹಳ್ಳಿ: 02, ಹೊಸನಗರ: 02.

ಇ-ಹರಾಜು ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಆಸಕ್ತಿ ಹೊಂದಿರುವ ಬಿಡ್ಡುದಾರರಿಗೆ ಮಾರ್ಗದರ್ಶನ ನೀಡಲು ದಿನಾಂಕ: 10-07-2026 ಬೆಳಿಗ್ಗೆ 11    ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಜಿಲ್ಲಾ ಸರ್ಕಾರಿ ನೌಕರರ ಭವನ, ಆರ್.ಟಿ.ಒ. ಕಚೇರಿ ರಸ್ತೆ, ಡಿಸಿ ಕಾಂಪೌಂಡ್,  ಶಿವಮೊಗ್ಗ ಇಲ್ಲಿ ತರಬೇತಿ ಆಯೋಜಿಸಲಾಗಿದೆ.  ಇ-ಹರಾಜು ಪ್ರಕ್ರಿಯೆಗೆ ಸಂಬಂಧಿಸಿದಂತೆ ಯಾವುದೇ ರೀತಿಯ ಸಂಶಯ ಅಥವಾ ಪ್ರಶ್ನೆಗಳಿದ್ದಲ್ಲಿ  ಸಾರ್ವಜನಿಕರು ಹಾಗೂ ಆಸಕ್ತ ಬಿಡ್ಡುದಾರರು ಇಲಾಖೆಯ ಅಧಿಕೃತ ವೆಬ್‌ಸೈಟ್ https://stateexcise. karnataka. gov. in/en   ಗೆ ಭೇಟಿ ನೀಡಿ ಪರಿಶೀಲಿಸಬಹುದು ಎಂದು ತಿಳಿಸಲಾಗಿದೆ.