City Rounds News

Kannada News Website

ಮಾದಿಗ ಸಮಾಜಕ್ಕೆ ಆಡಳಿತ ಸರ್ಕಾರವು ಬಗೆದ ಮಹಾ ದ್ರೋಹ:ಒಳಮೀಸಲಾತಿ ಅನುಷ್ಠಾನಕ್ಕೆ ಆಗ್ರಹಿಸಿ ಬೃಹತ್ ಪ್ರತಿಭಟನೆ..!!

 

 

ಶಿವಮೊಗ್ಗ: 16:  ಇಂದು ಶಿವಮೊಗ್ಗ ಮಾದರ ಮಹಾಸಭಾ ಹಾಗೂ ಅಲೆಮಾರಿ ಸಂಘಟನೆ ಹಾಗೂ ವಿವಿಧ ದಲಿತಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಒಳಮೀಸಲಾತಿಗೆ ಅನುಷ್ಠಾನಕ್ಕೆ ಆಗ್ರಹಿಸಿ ಬೃಹತ್ ಪ್ರತಿಭಟನಾ ಮೆರವಣಿಗೆಯನ್ನು ನಡೆಸಲಾಯಿತು.

ಮಹಾನಗರ ಪಾಲಿಕೆಯ ಆವರಣದಲ್ಲಿರುವ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ನಂತರ ಶಿವಪ್ಪ ನಾಯಕ ವೃತ್ತದಿಂದ ಗೋಪಿ ವೃತ್ತದ ಮೂಲಕ ಜಿಲ್ಲಾಧಿಕಾರಿಗಳ ಕಚೇರಿಯ ವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿ. ನಂತರ ಜಿಲ್ಲಾಧಿಕಾರಿಗಳ ಕಛೆರಿಯ ಮುಂಭಾಗದಲ್ಲಿ ಸಾವಿರಾರು ಸಂಖ್ಯೆಯಲ್ಲಿ ನೆರೇದಿದ್ದ ಶಿವಮೊಗ್ಗ ಮಾದರ ಮಹಾಸಭಾ ಹಾಗೂ ಅಲೆಮಾರಿ ಸಂಘಟನೆ ಹಾಗೂ ವಿವಿಧ ದಲಿತಪರ ಸಂಘಟನೆಗಳ ಒಕ್ಕೂಟದ ವತಿಯಿಂದ. ಕರ್ನಾಟಕ ರಾಜ್ಯದಲ್ಲಿ ಪರಿಶಿಷ್ಟ ಜಾತಿಗೆ ಸೇರಿದ 101 ಜಾತಿಗಳಲ್ಲಿ ಅತ್ಯಂತ ಹೆಚ್ಚಿನ ಜನಸಂಖ್ಯೆ ಹೊಂದಿರುವ ಶಿಕ್ಷಣ, ಉದ್ಯೋಗ, ರಾಜಕೀಯ ಮತ್ತು ಆರ್ಥಿಕ ಕ್ಷೇತ್ರಗಳಲ್ಲಿ ತೀರಾ ಹಿಂದುಳಿದ ಜಾತಿಯಾದ ಮಾದಿಗ ಸಮಾಜವು ಸಾವಿರಾರು ವರ್ಷಗಳಿಂದ ಅನೇಕ ದೌರ್ಜನ್ಯಗಳಿಗೆ ತುತ್ತಾಗುತ್ತ ಬರುತ್ತಿರುವುದು ಅತ್ಯಂತ ಶೋಚನೀಯ ಮತ್ತು ಖಂಡನೀಯ ವಿಷಯವಾಗಿದೆ. ಮಾದಿಗ ಸಮಾಜಕ್ಕೆ ಸಾಮಾಜಿಕ ನ್ಯಾಯ ಸಿಗಬೇಕಾದರೆ ಸಂವಿಧಾನದ ಆಶಯದಂತೆ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ವರ್ಗೀಕರಣದಿಂದಲೇ ಸಾಧ್ಯ ಎಂಬುದನ್ನರಿತು ಕರ್ನಾಟಕ ರಾಜ್ಯದಲ್ಲಿ ಮಾದಿಗ ಪರ ಸಂಘಟನೆಗಳು ಕಳೆದ 3 ದಶಕಗಳಿಂದ ಆಡಳಿತ ನಡೆಸಿದ ಮತ್ತು ಆಡಳಿತ ನಡೆಸುತ್ತಿರುವ ಸರ್ಕಾರಗಳಿಗೆ ಶಾಂತಿಯುತ ಪ್ರತಿಭಟನೆಯ ಮೂಲಕ ಮನವಿಯನ್ನು ಸಲ್ಲಿಸಿದ್ದರ ಫಲವಾಗಿ ವಿಶ್ರಾಂತ ನ್ಯಾಯಮೂರ್ತಿ ಹೆಚ್.ಎನ್.ನಾಗಮೋಹನ್ ದಾಸ್ ಆಯೋಗವನ್ನು ಸರ್ಕಾರ ರಚನೆ ಮಾಡಿ ಪರಿಶಿಷ್ಟ ಜಾತಿಯಲ್ಲಿರುವ 101 ಜಾತಿಗಳ ಸಂಪೂರ್ಣ ಮಾಹಿತಿಯ ವರದಿಯನ್ನು ಸಲ್ಲಿಸಲು ತಿಳಿಸಿದ್ದರ ಪರವಾಗಿ ಆಯೋಗವು ಸಮಗ್ರವಾದ ವರದಿಯೊಂದಿಗೆ ಸರ್ಕಾರಕ್ಕೆ ವರದಿ ಸಲ್ಲಿಸಿ ಮಾದಿಗ ಸಂಬಂಧಿತ ಜಾತಿಗಳಿಗೆ ಶೇ. 6% ರಷ್ಟು, ಹೊಲಯ ಸಂಬಂಧಿತ ಜಾತಿಗಳಿಗೆ ಶೇ. 6%ರಷ್ಟು, ಇತರೆ ಸಮುದಾಯ ಜಾತಿಗಳಿಗೆ ಶೇ.5% ಮೀಸಲಾತಿ ಹಂಚಿಕೆ ಮಾಡಿ, ಸರ್ಕಾರಕ್ಕೆ ವರದಿ ಸಲ್ಲಿಸಿತ್ತು.

ಸರ್ಕಾರವು ಆಯೋಗದ ವರದಿಯಂತೆ ಸರ್ಕಾರಿ ಹುದ್ದೆಗಳನ್ನು ನೇಮಕ ಮಾಡಿಕೊಳ್ಳದೆ ದಿನಾಂಕ 26-02-2026ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಹಳೆ ಮೀಸಲಾತಿ ಪ್ರಕಾರವೇ 56.432 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಹೊರಟಿರುವುದು ಅತ್ಯಂತ ಖಂಡನೀಯ ವಿಷಯವಾಗಿದೆ .ರಾಜ್ಯದ ಬಹುಸಂಖ್ಯಾತ ಸಮಾಜವಾಗಿರುವ ಮಾದಿಗ ಸಮಾಜಕ್ಕೆ ಆಡಳಿತ ಸರ್ಕಾರವು ಬಗೆದ ಮಹಾ ದ್ರೋಹವಾಗಿದೆ. ಆದ್ದರಿಂದ ತಕ್ಷಣವೇ ಆದೇಶವನ್ನು ರದ್ದುಪಡಿಸಿ, ಒಳಮೀಸಲಾತಿ ಸಂಪೂರ್ಣವಾಗಿ ಜಾರಿ ಮಾಡಿ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುವಂತೆ ಒತ್ತಾಯಿಸಿ,ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಲಾಯಿತು.

ಈ ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷರಾದ ಶಿವಾಜಿ ಹೆಚ್, ಪ್ರಧಾನ ಕಾರ್ಯದರ್ಶಿ ತೇಜೇಶ್ ರಾಮಚಂದ್ರ, ಪಾಲಿಕೆ ನೌಕರರ ಸಂಘದ ಅಧ್ಯಕ್ಷ ಎನ್ ಗೋವಿಂದ,ಶಿವಣ್ಣ,ಟೆಲೆಕ್ಸ್ ರವಿಕುಮಾರ್, ಸೂಲಯ್ಯ, ರಂಗಪ್ಪ,ಏ.ಕೆ ಅಣ್ಣಪ್ಪ, ಮಂಜುನಾಥ್ ಎಸ್ ಪ್ರಭು ಹೆಚ್ ಎನ್,ಅಣ್ಣಪ್ಪ ಕೆ.ನಿಖಿಲ್ ಮೂರ್ತಿ, ಚಂದ್ರಣ್ಣ ತ್ಯಾಜವಳ್ಳಿ ಪ್ರಶಾಂತ್ ಕುಮಾರ್, ಶ್ರೀಧರ್ ಎಲ್,ಸತೀಶ್ ಕೆ,ರಾಮ್ ಕುಮಾರ್ ಆರ್,ಸುನೀಲ್ ಎನ್,ನಿರಂಜನ್ ಮೂರ್ತಿ ಆರ್ ಕೆ,ಅನೂಪ್ ವಿ,ಸುರೇಶ್ ಪಿ,ನವೀನ್ ಎಲ್, ರವಿಕುಮಾರ್,ಮಲ್ಲಿಕಾರ್ಜುನ ಸ್ವಾಮಿ ಹೆಚ್ ಆರ್,ಗಾಜನೂರು ನಾಗರಾಜ್,ನಾಗರಾಜ್ ಎಸ್,ರವಿಕಿರಣ್ ಆರ್, ಶಿವಪ್ರಸಾದ್ ಕೆ,ಕಿಶೋರ್ ಕುಮಾರ್ ,ಮಂಜಪ್ಪ ಬೀರನಕೆರೆ, ವಿಶ್ವನಾಥ್ ಅನಿಲ್ ಆರ್,ಪೌರಕಾರ್ಮಿಕ ಸಂಘದ ಪದಾಧಿಕಾರಿಗಳು,ಪೌರಕಾರ್ಮಿಕರು ,ವಕೀಲರು ಹಲವರು ಪಾಲ್ಗೊಂಡಿದ್ದರು.