City Rounds News

Kannada News Website

ಮಲೆನಾಡು ಕರಕುಶಲ ಉತ್ಸವ ಸಿರಿಧಾನ್ಯ ಮೇಳ ಹಾಗೂ ಪುಷ್ಪ ಸಿರಿ-63ನೇ ಫಲ -ಪುಷ್ಪ ಪ್ರದರ್ಶನ…!!

ಶಿವಮೊಗ್ಗ :     ಪ್ರತಿ ವರ್ಷದಂತೆ ಈ ವರ್ಷವೂ ಗಣರಾಜ್ಯೋತ್ಸವದ ಪ್ರಯುಕ್ತ ಜಿಲ್ಲಾ ಪಂಚಾಯತ್ , ಶಿವಮೊಗ್ಗ , ತೋಟಗಾರಿಕೆ ಇಲಾಖೆ ಮತ್ತು ಜಿಲ್ಲಾ ಉದ್ಯಾನ ಕಲಾಸಂಘ ಇವರ ಸಂಯುಕ್ತ ಆಶ್ರಯದಲ್ಲಿ ಮಲೆನಾಡು ಕರಕುಶಲ ಉತ್ಸವ ಸಿರಿಧಾನ್ಯ ಮೇಳ ಹಾಗೂ ಪುಷ್ಪ ಸಿರಿ-63ನೇ ಫಲ – ಪುಷ್ಪ  ಪ್ರದರ್ಶನವನ್ನು ನಗರದ ಅಲ್ಲಮ್ಮ ಪ್ರಭು ಉದ್ಯಾನವನದಲ್ಲಿ ದಿನಾಂಕ :24/01/2026ರಿಂದ ರಿಂದ 27-01-2026 ರವರೆಗೆ ಅಲ್ಲಮ್ಮ ಪ್ರಭು ಉದ್ಯಾನವನ ( ಫ್ರೀಡಂ ಪಾರ್ಕ್) ಶಿವಮೊಗ್ಗದಲ್ಲಿ ಮಲೆನಾಡು ಕರಕುಶಲ ಉತ್ಸವ, ಸಿರಿಧಾನ್ಯ ಮೇಳ ಮತ್ತು ಪುಷ್ಪ ಸಿರಿ – 63ನೇ ಫಲ ಪುಷ್ಪ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಇಂದು ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಹೇಮಂತ್ ಎನ್ ರವರು ತಿಳಿಸಿದರು.

ಹೂವಿನ ಕಲಾ ಕೃತಿಗಳ ರಚನೆ, ಸುಮಾರು 2 ಲಕ್ಷ ಸಂಖ್ಯೆಯ ವಿವಿಧ ಬಣ್ಣದ ಹೂಗಳಾದ ಗುಲಾಬಿ , ಸೇವಂತಿಗೆ , ಅಂತೋರಿಯಂ ಹಾಗೂ ಕಾಮಿನಿ ಎರೆ ಮತ್ತು ಪೋಲಿಯಸ್ ಹೂ ಆಗು ಗಿಡಗಳನ್ನು ಬಳಸಿ ವಿವಿಧ ರೀತಿಯ ಕಲಾಕೃತಿಗಳನ್ನು ಪ್ರದರ್ಶನದಲ್ಲಿ ನಿರ್ಮಿಸಲಾಗುವುದು ಎಂದು ತಿಳಿಸಿದರು.

“63ನೇ ಫಲ ಪುಷ್ಪ ಪ್ರದರ್ಶನದ ವಿಶೇಷತೆಗಳು:

“ಕೋಟೆ ಹಾಗೂ ಕೆಳದಿ ಶಿವಪ್ಪ ನಾಯಕ ಪ್ರತಿಮೆ”

ವಿವಿಧ ಜಾತಿಯ ಹೂಗಳಿಂದ ಅಲಂಕರಿಸಿ ಹದಿನಾರು ಅಡಿ ಎತ್ತರದ ಕೋಟೆ ಹಾಗೂ ಶಿವಪ್ಪ ನಾಯಕ ಪ್ರತಿಮೆ.

“ಬಳ್ಳಿಗಾವಿ ಕೇದಾರೇಶ್ವರ ದೇವಸ್ಥಾನ ಪ್ರತಿರೂಪ”

15 ಅಡಿ ಎತ್ತರದ ಕೇದಾರೇಶ್ವರ ದೇವಸ್ಥಾನ ಹೂವಿನ ಅಲಂಕಾರ.

” ಜೋಗ ಜಲಪಾತ ಪ್ರತಿರೂಪ “

60 ಅಡಿ ಅಗಲ X 22 ಅಡಿ ಎತ್ತರದ ಫೋಲಿಯೇಜ್ ನಿಂದ ಅಲಂಕೃತಗೊಂಡ ಜೋಗ ಜಲಪಾತದ ಪ್ರತಿರೂಪ.

” ಹೂವಿನಿಂದ ಅಲಂಕೃತಗೊಂಡ ಸೆಲ್ಫಿ ಪಾಯಿಂಟ್”

( ಐ ಲವ್ ಯು) ಶಿವಮೊಗ್ಗ -ಹೂವಿನಿಂದ ಅಲಂಕೃತಗೊಂಡ ಸೆಲ್ಫಿ ಪಾಯಿಂಟ್.

ಕುಬ್ಜ ಗಿಡಗಳು, ಬೋನ್ಸಯ್ ಗಿಡಗಳ ಹಾಗೂ ವಿವಿಧ ರೀತಿಯ ಗಿಡಗಳ ಪ್ರದರ್ಶನ.

“ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ (ಎನ್ ಆರ್ ಎಲ್ ಎಂ) ಸಂಜೀವಿನಿ ಯೋಜನೆಯಡಿ

ಸ್ವ ಸಹಾಯ ಗುಂಪಿನ ಉತ್ಪನ್ನಗಳ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳ”

“ಮೇಳದ ವೈಶಿಷ್ಟತೆಗಳು “

ಶಿವಮೊಗ್ಗದ ಈ ಮೇಳದ ಮಳಿಗೆಗಳಲ್ಲಿ ರಾಜ್ಯ ಹೊರ ರಾಜ್ಯ ವಿವಿಧ ಜಿಲ್ಲೆಯ ಗ್ರಾಮೀಣ ಪ್ರದೇಶದ ಸ್ವಸಹಾಯ ಮಹಿಳೆಯರು ಉತ್ಪಾದಿಸಿರುವ ಉತ್ಪನ್ನಗಳಾದ ಮಣ್ಣಿನ ಅಲಂಕಾರಿಕ ಉತ್ಪನ್ನಗಳು ಮ್ಯಾಕ್ರನ್ ಉತ್ಪನ್ನಗಳು ಅಸೇ ಚಿತ್ತಾರ ಮತ್ತು ಭತ್ತದ ತೋರಣ ಈಚಲು ಚಾಪೆ, ಮಣ್ಣಿನ ಆಭರಣಗಳು ಮರದ ಕೆತ್ತನೆಗಳು ಕೌದಿ ಉತ್ಪನ್ನಗಳು ಕೊಪ್ಪಳದ ಕಿನ್ನಾಳ ಉತ್ಪನ್ನಗಳು ಕೊಪ್ಪಳದ ಬಲಾಲ ಫೈಬರ್ ಉತ್ಪನ್ನಗಳು ಚಿಕ್ಕಬಳ್ಳಾಪುರ ವೆದರ್ಗಳು ನವಲಗುಂದ ದುರಿ ಮೈಸೂರು ಮರದ ಕೆತ್ತನೆಯ ಉತ್ಪನ್ನಗಳು ಹಾಗೂ ಬೀದರ್ ಜಿಲ್ಲೆಯ ಬೀದರಿ ಉತ್ಪನ್ನಗಳು ಹಾಗೂ ಅಕ್ಕ ಕೆಫೆಯ ಸದ್ಯಸರಿಂದ ಇತರೆ ಸ್ವ ಸಹಾಯ ಗುಂಪಿನ ಸದಸ್ಯರಿಂದ ಆಹಾರ ಉತ್ಪನ್ನಗಳು ಮುಂತಾದವು ಸಾರ್ವಜನಿಕರಿಗೆ ಈ ಮೇಳದಲ್ಲಿ ಲಭ್ಯವಾಗಲಿದೆ ಎಂದು ತಿಳಿಸಿದರು.

“ಸಿರಿಧಾನ್ಯ ಮೇಳದ ವಿಶೇಷತೆಗಳು”

ರಾಜ್ಯದ ಸಿರಿಧಾನ್ಯ ಮತ್ತು ಸಾವಯವ ಉತ್ಪನ್ನಗಳಿಗೆ ಮಾರುಕಟ್ಟೆ ಸಂಪರ್ಕ ಕಲ್ಪಿಸುವ ಹಾಗೂ ಗ್ರಾಹಕರಲ್ಲಿ ಅರಿವು ಮೂಡಿಸುವ ಮುಖ್ಯ ಉದ್ದೇಶಗಳೊಂದಿಗೆ ಅಂತರಾಷ್ಟ್ರೀಯ ವಾಣಿಜ್ಯ ಮೇಳ 2026 ಅನ್ನು ವಿಭಿನ್ನವಾಗಿ ” ಅಗ್ರಿಕಲ್ಚರ್ ಬ್ಯಾಂಡ್ ಪ್ರೊಡಕ್ಷನ್ ಎಂಪೋರಿಂಗ್ ಫಾರ್ಮರ್ ” ಅನ್ನುವ ಒಂದು ಪರಿಕಲ್ಪನೆ ಯೊಂದಿಗೆ ಅಂತರಾಷ್ಟ್ರೀಯ ವಾಣಿಜ್ಯ ಮೇಳ 2026ರಂದು ಆಯೋಜಿಸಲಾಗುತ್ತಿದೆ. ಇದರ ಪೂರ್ವಭಾವಿಯಾಗಿ ಜಿಲ್ಲೆಯಲ್ಲಿ ಇಲ್ಲ ಮಟ್ಟದ ಸಿರಿಧಾನ್ಯ ಮೇಳವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

“ಕೈಮಗ್ಗ ಜವಳಿ ಖರೀದಿ”

ಜವಳಿ ಮತ್ತು ಕೈಮಗ್ಗ ಹಾಗೂ ರೇಷ್ಮೆ ಇಲಾಖೆಯ ಸಹಯೋಗದಲ್ಲಿ 11 ರಾಜ್ಯಗಳು 19 ಜಿ ಟ್ಯಾಗ್ ಬಂದಿರುವ ವಿವಿಧ ರೀತಿಯ ಸೀರೆಗಳು. ಶಾಲುಗಳು, ಬೆಡ್ ಶೀಟ್ ಗಳು ಮತ್ತು ಕೆ ಎಸ್ ಐ ಸಿ ರೇಷ್ಮೆ ಸೀರೆಗಳ ಪ್ರದರ್ಶನ ಮತ್ತು ಮಾರಾಟ ಮೇಳ ಆಯೋಜಿಸಲಾಗಿರುತ್ತದೆ ಎಂದು ಹೇಳಿದರು.

“ಶಿವಮೊಗ್ಗ ಜಿಲ್ಲೆಯ ರೈತರಿಗಾಗಿ ವಿವಿಧ ಸ್ಪರ್ಧೆಗಳು”

ಜಿಲ್ಲೆಯ ಎಲ್ಲಾ ತಾಲೂಕುಗಳ ರೈತರು ಬೆಳೆದ ವಿಶಿಷ್ಟ , ವಿಶೇಷ ರೀತಿಯ ಹೂ,ಹಣ್ಣು ,ತರಕಾರಿ ಮತ್ತಿತರೆ

ತೋಟಗಾರಿಕೆ ಉತ್ಪನ್ನಗಳ ಪ್ರದರ್ಶನ ಮತ್ತು ಸ್ಪರ್ಧೆ.

“ಸಮಾರೋಪ ಸಮಾರಂಭ”

ಫಲ ಪುಷ್ಪ ಪ್ರದರ್ಶನದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಮತ್ತು ಭಾಗವಹಿಸಿದ ಎಲ್ಲಾ ಸರ್ಕಾರಿ ಸರ್ಕಾರಿ ತರ ಸಂಘ ಸಂಸ್ಥೆಗಳ ವರೆಗೆ ಅಭಿನಂದಿಸುವ ಕಾರ್ಯಕ್ರಮ ಏರ್ಪಡಿಸಲಾಗಿರುತ್ತದೆ ಎಂದು ತಿಳಿಸಿದರು.