ಮಹಾರಾಷ್ಟ್ರದ ಜಲ್ನಾ ಮುನ್ಸಿಪಲ್ ಕಾರ್ಪೊರೇಷನ್‌ನಿಂದ ಕಾರ್ಪೊರೇಟರ್ ಆಗಿ ಜಯಗಳಿಸಿದ ಪಂಗಾರ್ಕರ್….
ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿ ಜಲ್ನಾ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಗೆದ್ದಿದ್ದಾನೆ.
ಪಂಗಾರ್ಕರ್ ಚುನಾವಣಾ ವಾರ್ಡ್ ಸಂಖ್ಯೆ 13 ರಿಂದ ಸ್ವತಂತ್ರ ಅಭ್ಯರ್ಥಿಯಾಗಿ 2026ರ ಚುನಾವಣೆಯಲ್ಲಿ ಸ್ಪರ್ಧಿಸಿದ್ದು. ಬಿಜೆಪಿ ಪಕ್ಷದಿಂದ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ರಾವ್ ಸಾಹೇಬ್ ಧೋಬ್ಲೆ ಅವರನ್ನು ಪಂಗಾರ್ಕರ್ ಸೋಲಿಸಿದ್ದಾರೆ.
ಗೌರಿ ಲಂಕೇಶ್ ಅವರನ್ನು ಸೆಪ್ಟೆಂಬರ್ 5, 2017 ರಂದು ಬೆಂಗಳೂರಿನಲ್ಲಿರುವ ಅವರ ನಿವಾಸದ ಹೊರಗೆ ಗುಂಡಿಕ್ಕಿ ಕೊಲ್ಲಲಾಯಿತು. ಈ ಹತ್ಯೆ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು. ಆಗಸ್ಟ್ 2018 ರಲ್ಲಿ, ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳವು ಪಂಗಾರ್ಕರ್ ಅವರನ್ನು ಸ್ಫೋಟಕ ಕಾಯ್ದೆ, ಸ್ಫೋಟಕ ವಸ್ತುಗಳ ಕಾಯ್ದೆ ಮತ್ತು ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಬಂಧಿಸಿತು.ಅವರಿಗೆ ಸೆಪ್ಟೆಂಬರ್ 4, 2024 ರಂದು ಕರ್ನಾಟಕ ಹೈಕೋರ್ಟ್ ಜಾಮೀನು ನೀಡಿತು.
ಶ್ರೀಕಾಂತ್ ಪಂಗಾರ್ಕರ್ ಅವರು ಶುಕ್ರವಾರ (ಜನವರಿ 16, 2026) ಮಹಾರಾಷ್ಟ್ರದ ಜಲ್ನಾ ಮುನ್ಸಿಪಲ್ ಕಾರ್ಪೊರೇಷನ್‌ನಿಂದ ಕಾರ್ಪೊರೇಟರ್ ಆಗಿ ಗೆದ್ದಿದ್ದಾರೆ.ಪಂಗಾರ್ಕರ್ 2,661 ಮತಗಳನ್ನು ಪಡೆದರೆ, ಧೋಬ್ಲೆ 2,477 ಮತಗಳನ್ನು ಗಳಿಸಿದ್ದಾರೆ ಎಂದು ಚುನಾವಣಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಶಿವಸೇನೆಯನ್ನು ಹೊರತುಪಡಿಸಿ, ಬಹುತೇಕ ಎಲ್ಲಾ ಪ್ರಮುಖ ರಾಜಕೀಯ ಪಕ್ಷಗಳು ಶ್ರೀ ಪಂಗಾರ್ಕರ್ ವಿರುದ್ಧ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದವು. ಶಿವಸೇನೆ ಅವಿಭಜಿತವಾಗಿದ್ದಾಗ 2001 ರಿಂದ 2006 ರವರೆಗೆ ಶ್ರೀ ಪಂಗಾರ್ಕರ್ ಅವರು ಜಲ್ನಾ ಮುನ್ಸಿಪಲ್ ಕೌನ್ಸಿಲ್ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. 2011 ರಲ್ಲಿ ಪಕ್ಷದ ಟಿಕೆಟ್ ನಿರಾಕರಿಸಿದ ನಂತರ, ಅವರು ಬಲಪಂಥೀಯ ಹಿಂದೂ ಜನಜಾಗೃತಿ ಸಮಿತಿಗೆ ಸೇರಿದ್ದರು.2026 ಮಹಾರಾಷ್ಟ್ರದ ಜಲ್ನಾ ಮುನ್ಸಿಪಾಲ್ ಕಾರ್ಪೊರೇಷನ್ ಇಂದ ಕಾರ್ಪೊರೇಟರ್ ಆಗಿ ಜಯಗಳಿಸಿದ್ದಾರೆ.
More Stories
ಜೈಲಿನ ಖೈದಿಗಳ ಬಳಿ ವರ್ಷದಿಂದ ವರ್ಷಕ್ಕೆ ಮೊಬೈಲ್ಗಳ ಸಂಖ್ಯೆಯಲ್ಲಿ ಹೆಚ್ಚಳ : 410 ವಿವಿಧ ಕಂಪನಿಯ ಮೊಬೈಲ್ ಪತ್ತೆ..!!
ಕಸ್ತೂರಿ ರಂಗನ್ ವರದಿ ಕುರಿತು ತೀರ್ಥಹಳ್ಳಿಯಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕೊಟ್ಟ ಸೂಚನೆಯಾದರೂ ಏನು ..?
ಪಾವಗಡ ಶಾಸಕರೇ, ಅಧಿಕಾರದ ದರ್ಪ ಪ್ರಜಾಪ್ರಭುತ್ವಕ್ಕೆ ಶೋಭೆಯಲ್ಲ: ಜನರೇ ನಿಜವಾದ ಪ್ರಭುಗಳು, ರಾಜಕಾರಣಿಗಳಲ್ಲ!